News

Rain Alert: ಮುಂದಿನ 4-5 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

25 November, 2022 4:11 PM IST By: Kalmesh T
ಮಳೆ ಎಚ್ಚರಿಕೆ: ಮುಂದಿನ 4-5 ದಿನ ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ

ಮುಂಬರುವ ನಾಲ್ಕೈದು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿರಿ: Pradhan Mantri Jan-Dhan Yojana | ಖಾತೆದಾರರಿಗೆ ಸರ್ಕಾರದಿಂದ 10,000 ರೂಪಾಯಿ!

ಮುಂಬರುವ ನಾಲ್ಕೈದು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಬಂಗಾಳ ಕೊಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಮಳೆಯಾಗಲಿದೆ.

ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ.

ಇನ್ನುಳಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿಯೂ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯಿದೆ.

ಇವಿಷ್ಟು ಈ ದಿನದ ಟಾಪ್‌ ಅಗ್ರಿ ನ್ಯೂಸ್‌ಗಳು.

* ಕರ್ನಾಟಕ ಸರಕಾರವು ‘ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನಟ ಕಿಚ್ಚ ಸುದೀಪ್‌ ಅವರನ್ನು ನೇಮಕ ಮಾಡಿದೆ. ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ನಿನ್ನೆ ಬೆಂಗಳೂರಿನಲ್ಲಿರುವ  ನಟ ಸುದೀಪ್ ಅವರ ನಿವಾಸದಲ್ಲಿ ರಾಯಭಾರಿ‌ ನೇಮಕಾತಿ ಪತ್ರವನ್ನು ನೀಡಿ ಸನ್ಮಾನಿಸಿದ್ದಾರೆ.

ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿ ನೇಮಕಾತಿ ಪತ್ರ ಪಡೆದ ನಟ ಸುದೀಪ್‌, 31 ಗೋವುಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ.

* 2022ರ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ ಪ್ರಕಟವಾಗಿದ್ದು, ನವೆಂಬರ್‌ 26ರಂದು ಸಾಧಕ ರೈತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.

ಒಟ್ಟು 3 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಸ್ಥಳೀಯ ದನ/ಎಮ್ಮೆ ತಳಿಗಳನ್ನು ಸಾಕುತ್ತಿರುವ ಅತ್ಯುತ್ತಮ ಡೈರಿ ರೈತ

ಈ ವಿಭಾಗದಲ್ಲಿ  ಹರಿಯಾಣದ ಫತೇಹಾಬಾದ್‌ನ ರೈತ ಜಿತೇಂದ್ರ ಸಿಂಗ್ ಪ್ರಥಮ,  ಮಹಾರಾಷ್ಟ್ರದ ಪುಣೆಯ ರೈತ ರವಿಶಂಕರ್ ಶಶಿಕಾಂತ ಸಹಸ್ರಬುಧೆ “ದ್ವಿತಿಯ” ಹಾಗೂ ಗುಜರಾತ್‌ ಕಚ್‌ ಪ್ರದೇಶದ ರೈತ ಮಹಿಳೆ ಗೋಯಲ್ ತೃತಿಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇನ್ನೂ “ಅತ್ಯುತ್ತಮ ಕೃತಕ ಗರ್ಭಧಾರಣೆ ತಂತ್ರಜ್ಞ” ಈ ವಿಭಾಗದಲ್ಲಿ  ಓಡಿಶಾದ ಬಲಂಗೀರ್‌ನ ರೈತ ಗೋಪಾಲ್ ರಾಣಾ ಪ್ರಥಮ,   ರಾಜಸ್ಥಾನದ ಗಂಗಾನಗರದ ರೈತ ಹರಿ ಸಿಂಗ್ ದ್ವಿತಿಯ  ಹಾಗೂ ಆಂಧ್ರಪ್ರದೇಶದ ಮಾಚೆಪಲ್ಲಿ ಬಸವಯ್ಯ ತೃತಿಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಡೈರಿ ಸಹಕಾರ ಸಂಘ/  ಹಾಲು ಉತ್ಪಾದಕ ಕಂಪನಿ/  ಡೈರಿ ರೈತ ಉತ್ಪಾದಕ ಸಂಸ್ಥೆ” ಈ ವಿಭಾಗದಲ್ಲಿ ಕೇರಳದ ವಯನಾಡ್ನ ಮನಂತವಾಡಿ ಕ್ಷೀರೋತ್ಪಾದಕ ಸಹಕಾರ ಸಂಘ ಪ್ರಥಮ

* ಕರ್ನಾಟಕದ ಮಂಡ್ಯ ಜಿಲ್ಲೆಯ ಅರಕೆರೆ ಹಾಲು ಉತ್ಪಾದಕರ ಸಹಕಾರ ಸಂಘ ದ್ವಿತಿಯ ಹಾಗೂ ತಮಿಳುನಾಡಿನ ತಿರುವರೂರ್ ನ ಮನ್ನಾರ್ಗುಡಿ MPCS ತೃತಿಯ ಪ್ರಶಸ್ತಿ ಪಡೆದುಕೊಂಡಿದೆ.

ಪ್ರಶಸ್ತಿಯು ಪ್ರಥಮ 5 ಲಕ್ಷ ರೂಪಾಯಿ, ದ್ವಿತೀಯ 3 ಲಕ್ಷ ರೂಪಾಯಿ, ತೃತಿಯ 2 ಲಕ್ಷ ರೂಪಾಯಿ ನಗದು, ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನ ಒಳಗೊಂಡಿದೆ.

 

* ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿಗಾಗಿ ಕಾಯುತ್ತಿರುವ ರೈತರ ಗಮನಕ್ಕೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಇಲಾಖೆ ನೀಡಿಲ್ಲ.

 

* ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ “ಪ್ರಧಾನಮಂತ್ರಿ ಜನ್ ಧನ್” ಖಾತೆದಾರರಿಗೆ ರೂ 10,000 ನೀಡುತ್ತಿದ್ದು, ಇದರ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

* ಬಹುತೇಕರ ದಿನಚರಿಯಲ್ಲಿ ಕಡ್ಡಾಯವಾಗಿ ಇರುತ್ತಿದ್ದ ಪಾರ್ಲೆಜಿ ಇದೀಗ ಹೊಸ ದಾಖಲೆಯನ್ನು ಮಾಡಿದೆ. Parle G, Monaco ಮತ್ತು Melody ಯಂತಹ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುವ

ಪಾರ್ಲೆ ಉತ್ಪನ್ನಗಳು 2022ರ ವಾರ್ಷಿಕ ಆದಾಯದಲ್ಲಿ 2 ಶತಕೋಟಿಯನ್ನು ಮೀರಿಸಿದೆ. ಭಾರತದ ಮೊದಲ ಪ್ಯಾಕೇಜ್ಡ್ ಫುಡ್ ಕಂಪನಿಯಾಗಿ ಪಾರ್ಲೆಜಿ ಈ ಸಾಧನೆಯನ್ನು ಮಾಡಿದೆ.

 

* ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನವೆಂಬರ್ 24ರಂದು ಶೃಂಗಸಭೆಯನ್ನು ಆಯೋಜಿಸಲಾಯಿತು. "ಅಂತರರಾಷ್ಟ್ರೀಯ ರಾಗಿ ವರ್ಷ 2023ನ್ನು  ಅದ್ಧೂರಿ ಆಚರಣೆ ಮಾಡಲಾಯಿತು.

ಗುರುವಾರ ನಡೆದ ಅಧಿಕೃತ ಭೋಜನ ಕೂಟದಲ್ಲಿ ಭಾರತದ ಸುಮಾರು 60 ಹೈಕಮಿಷನರ್‌ ಮತ್ತು ರಾಯಭಾರಿಗಳು ಉಪಸ್ಥಿತರಿದ್ದರು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ 2023ನ್ನು ಅಂತರರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ.  

 

* ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಮಣ್ಣುರಹಿತ ಕೃಷಿ ವಿಧಾನದಲ್ಲಿ ಹಣ್ಣು, ತರಕಾರಿ ಬೆಳೆಯಲು ಯೋಜನೆ ತಯಾರಿಸಿದೆ.

ವಿಜ್ಞಾನಿಗಳು ಮಣ್ಣು ಮತ್ತು ಕೊಕೊ ಪಿಟ್‌ ಬಳಸದೆ ಗಾಳಿಯಲ್ಲಿ ಹೆಚ್ಚಿನ ಮೌಲ್ಯದ ತರಕಾರಿಗಳು ಮತ್ತು ಹೂವುಗಳನ್ನು ಬೆಳೆಸಲು 'ಏರೋಪೋನಿಕ್ಸ್' ಕುರಿತು ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ.

 

* ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ಯೋಜನೆಯ ಅನುದಾನದಡಿ ಒಟ್ಟು  ರೂ.63 ಕೋಟಿ ರೂಪಾಯಿ ಕಾಮಗಾರಿಗಳ  ಅನುಮೋದನೆ ನೀಡುವ ಬಗ್ಗೆ

ಮೀನುಗಾರಿಕೆ ಸಚಿವ  ಎಸ್. ಅಂಗಾರ ಅವರ  ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.  

 

* ಇತ್ತೀಚಿನ ಹವಾಮಾನ ಬಿಕ್ಕಟ್ಟು ಮತ್ತು ತಾಂತ್ರಿಕ ಪ್ರಗತಿಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತಪರ ಬದಲಾವಣೆಗಳನ್ನು ತೆಗೆದುಕೊಳ್ಳಲು

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಚಿಂತನೆ ನಡೆಸಿದೆ.