News

Rain: ಕರ್ನಾಟಕದಲ್ಲಿ 2 ದಿನ ಭಾರೀ ಮಳೆ: ಐಎಂಡಿ ರಿಪೋರ್ಟ್‌

10 January, 2024 4:23 PM IST By: Hitesh
ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ

Rain Updates: ರಾಜ್ಯದಲ್ಲಿ ಇದೀಗ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಪಿಎಂ ಕಿಸಾನ್‌ನ 16ನೇ ಕಂತಿನ ಹಣದ ಬಗ್ಗೆ ಮಹತ್ವದ ಅಪ್ಡೇಟ್ಸ್‌ ಬಂದಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ವಿಪರೀತ ಮೈಕೊರೆವ ಚಳಿ ಇದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಮತ್ತೆ ನಡೆಸುವುದಾಗಿ ಸರ್ಕಾರ ಹೇಳಿದೆ.

ಈ ಎಲ್ಲ ಸುದ್ದಿಗಳ ವಿವರ ನೋಡೋಣ ಮೊದಲಿಗೆ ಮುಖ್ಯಾಂಶಗಳು. 

ಉತ್ತರ ಭಾರತದಲ್ಲಿ ಮೈಕೊರೆವ ಚಳಿ; ಹವಾಮಾನ ಇಲಾಖೆ ಎಚ್ಚರಿಕೆ! ಈ ಎಲ್ಲ ಸುದ್ದಿಗಳ ಚುಟುಕು ವಿವರ ಇಲ್ಲಿದೆ. 

1. ಪಿ.ಎಂ ಕಿಸಾನ್‌ ಯೋಜನೆ: ಶೀಘ್ರ ರೈತರ ಖಾತೆಗೆ 16ನೇ ಕಂತಿನ ಹಣ
3. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ವರದಿ
4. ಕೃಷಿ ವಿ.ವಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಆಹ್ವಾನ
5. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಅಕ್ರಮ: ಇದೀಗ ಮರು ಪರೀಕ್ಷೆ
6. ಬರ ಪರಿಹಾರ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ಗೆ ಬಿಜೆಪಿ ಮನವಿ
ಸುದ್ದಿಗಳ ವಿವರ ಈ ರೀತಿ ಇದೆ.

1. ಉತ್ತರ ಭಾರತದ ಭಾಗದಲ್ಲಿ ಚಳಿ ವಾತಾವರಣ ತೀವ್ರವಾಗಿದೆ. ಬುಧವಾರ ಹಾಗೂ ಗುರುವಾರ ದೆಹಲಿ, ಚಂಡೀಗಢ, ಹರ್ಯಾಣ

ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ಭಾಗದಲ್ಲಿ ಶೀತದಿಂದ ತೀವ್ರ ಚಳಿ ವಾತಾವರಣ ಇರಲಿದೆ.

ಚಳಿ ಹಾಗೂ ತಣ್ಣನೆಯ ಗಾಳಿ ಹೆಚ್ಚಾಗುತ್ತಿದ್ದು, ಕನಿಷ್ಠ ತಾಪಮಾನ 7 ರಿಂದ 10 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

2. ಕೇಂದ್ರ ಸರ್ಕಾರವು ಪ್ರಧಾನ್‌ ಮಂತ್ರಿ ಕಿಸಾನ್‌ ಸನ್ಮಾನ್‌ ನಿಧಿ ಯೋಜನೆಯ ಮೂಲಕ ರೈತರಿಗೆ ನೀಡುವ

2 ಸಾವಿರ ರೂಪಾಯಿ ಶೀಘ್ರ ರೈತರ ಖಾತೆಗೆ ಬೀಳಲಿದೆ.

ಈಗಾಗಲೇ ಪಿಎಂ ಕಿಸಾನ್‌ನ 15ನೇ ಕಂತಿನ ಹಣವನ್ನು ರೈತರ ಖಾತೆಗೆ 2023ರ ನವೆಂಬರ್ 15 ರಂದು ಹಾಕಲಾಗಿತ್ತು.

ಇದೀಗ ಪಿ.ಎಂ ಕಿಸಾನ್‌ನ 16ನೇ ಕಂತಿನ ಹಣವನ್ನು 2024ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ರೈತರ ಖಾತೆಗೆ ವರ್ಗಾಯಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಆದರೆ, ಇದರ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.
----------------------
3. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.

ಕರಾವಳಿಯ ಜಿಲ್ಲೆಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಒಣಹವೆ ಹಾಗೂ ಚಳಿಯ ವಾತಾವರಣ ಇದೆ.

ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗದಲ್ಲಿ ಮಳೆಯಾಗಲಿದೆ.

ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ.

ಸೋಮವಾರ ಮಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.

ಪಣಂಬೂರಿನಲ್ಲಿ 4 ಸೆಂ.ಮೀ, ಉಡುಪಿಯಲ್ಲಿ 3 ಸೆಂ.ಮೀ ಮೂಲ್ಕಿ, ಮಾಣಿ ಹಾಗೂ ಮೈಸೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.  
----------------------
4. 2023 ಮತ್ತು 24ನೇ ಸಾಲಿನ ಪ್ರಥಮ ವರ್ಷದ ಸ್ನಾತಕ ಪದವಿಗಳಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ವಿವಿಧ

ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಎನ್‌ಆರ್‌ಐ ಕೋಟಾದಡಿ ಭರ್ತಿ ಬಾಕಿ ಇರುವ ಸೀಟುಗಳಿಗೆ ಜನವರಿ 11ರವರೆಗೆ  ಅರ್ಜಿ ಆಹ್ವಾನಿಸಲಾಗಿದೆ.

ಜನವರಿ 13ರಂದು ಕೌನ್ಸೆಲಿಂಗ್ ಆಯ್ಕೆ ಪ್ರಕ್ರಿಯೆ ಮೂಲಕ ಸೀಟು ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. 
----------------------
5. ಕರ್ನಾಟಕದಲ್ಲಿ ದೊಡ್ಡ ಸುದ್ದಿ ಮಾಡಿದ್ದ ಹಾಗೂ ಸಾವಿರಾರು ಜನ ಅರ್ಹ ವಿದ್ಯಾರ್ಥಿಗಳಿಗೆ ನೋವುಂಟು ಮಾಡಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ

ಅಕ್ರಮ ಪ್ರಕರಣ ಇದೀಗ ಹೊಸ ತಿರುವು ಪಡೆದು ಕೊಂಡಿದೆ.  

ಪರೀಕ್ಷಾ ಅಕ್ರಮ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಮರುಪರೀಕ್ಷೆ ನಡೆಸಲು

ಸರ್ಕಾರ ಮುಂದಾಗಿದ್ದು, ಜನವರಿ 23ರಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಪರೀಕ್ಷೆ ನಡೆಯಲಿದೆ ಎಂದು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಬೆಂಗಳೂರಿನಲ್ಲಿ ಈ ಪರೀಕ್ಷೆ ನಡೆಯಲಿವೆ.
--------------------- 

6.ಕರ್ನಾಟಕದಲ್ಲಿ ಬರ ಎದುರಾಗಿದ್ದು, ರೈತರು ಸಂಕಷ್ಟದ್ದಲ್ಲಿ ಇದ್ದಾರೆ. ಆದರೆ, ಬರ ಪರಿಹಾರ ನೀಡುವ ಬಗ್ಗೆ ಕಾಂಗ್ರೆಸ್‌

ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ.

ಕರ್ನಾಟಕದ ಬರಪೀಡಿತ ಪ್ರದೇಶಗಳ ರೈತರಿಗೆ ಈ ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ನೀಡಬೇಕು ಎಂದು

ಆಗ್ರಹಿಸಿ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.
----------------------
7. ಭಾರತದಲ್ಲಿ ಪುಷ್ಪಗಳ ಕೃಷಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಭವಿಷ್ಯದ ನಿರೀಕ್ಷೆ ವಿಷಯದ ಬಗ್ಗೆ

ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವು ಬೆಂಗಳೂರಿನ ಹೆಸರಘಟ್ಟದ ಭಾರತೀಯ

ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರದಿಂದ ಪ್ರಾರಂಭವಾಗಿದೆ.