News

Ragi ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ: ಕೆ.ಎಚ್‌ ಮುನಿಯಪ್ಪ

11 January, 2024 3:38 PM IST By: Hitesh
ಬೆಂಬಲ ಬೆಲೆಯಡಿ ರಾಗಿ ಖರೀದಿಸಲು ಮುಂದಾದ ಸರ್ಕಾರ

ರೈತರಿಗೆ ಪ್ರಮುಖ ಹಾಗೂ ಕೃಷಿ ಸುದ್ದಿಗಳನ್ನು ನೀಡುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ಗೆ ಸ್ವಾಗತ.

ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಲು ಸಿದ್ಧತೆ ಮಾಡಿಕೊಳ್ತಿದೆ.

ಲೋಕಸಭೆ ಚುನಾವಣೆಯೂ ಸಮೀಪದಲ್ಲಿ ಇರುವುದರಿಂದ ಪಿಎಂ ಕಿಸಾನ್‌ನ ಹಣ 12 ಸಾವಿರಕ್ಕೆ ಏರಿಸಲಿದೆ ಎಂದು ವರದಿ ಆಗಿದೆ.

ಇನ್ನು ಮೀನುಗಾರರಿಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಕೊಡುವುದಾಗಿ ಪುರುಷೋತ್ತಮ ರೂಪಾಲ ಹೇಳಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುವುದಾಗಿ ಸಚಿವ ಕೆ.ಎಚ್‌ ಮುನಿಯಪ್ಪ ತಿಳಿಸಿದ್ದಾರೆ.

ಈ ಎಲ್ಲ ಸುದ್ದಿಗಳನ್ನು ನೋಡೋಣ ಮೊದಲಿಗೆ ಮುಖ್ಯಾಂಶಗಳು. 

1. ಮೀನುಗಾರರಿಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌: ಪುರುಷೋತ್ತಮ ರೂಪಾಲ
2. ಉತ್ತರ ಭಾರತದಲ್ಲಿ ಇಂದಿನಿಂದ ಚಳಿ ಪ್ರಮಾಣ ಇಳಿಕೆ  
3. ರಾಜ್ಯದಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ
4. ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ: ಕೆ.ಎಚ್‌ ಮುನಿಯಪ್ಪ
5. ಪಿ.ಎಂ ಕಿಸಾನ್‌ ಹಣ ಇನ್ಮುಂದೆ ಮಹಿಳಾ ರೈತರಿಗೆ 12 ಸಾವಿರ!

ಸುದ್ದಿಗಳ ವಿವರ ಈ ರೀತಿ ಇದೆ.

1. ಕೇಂದ್ರ ಸರ್ಕಾರವು ಮೀನುಗಾರರಿಗೂ ಇದೀಗ ಸಿಹಿಸುದ್ದಿಯೊಂದನ್ನು ನೀಡಿದೆ.

ಈಗಾಗಲೇ ದೇಶದಲ್ಲಿ ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡುತ್ತಿದ್ದು, ಇದೀಗ ಮೀನುಗಾರರಿಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌

ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ಮುಂದೆ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯ ಕಾರ್ಡ್‌ಗಳನ್ನು ನೀಡಲಾಗುವುದು

ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲಾ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ದಿಘಾದಲ್ಲಿ ಸಾಗರ ಪರಿಕ್ರಮ 12ನೇ ಹಂತದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕಾರ್ಡ್ ಮೂಲಕ ಮೀನುಗಾರರು ಸಹ ರೈತರಂತೆ ಪ್ರಯೋಜನ ಪಡೆಯಬಹುದು ಎಂದಿದ್ದಾರೆ.
---------------------
2. ಉತ್ತರ ಭಾರತದಲ್ಲಿ ಇಂದಿನಿಂದ ಚಳಿ ಪ್ರಮಾಣ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಸ್ಥಾನವನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಚಳಿ ಇಳಿಕೆ ಆಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ. 
---------------------
3. ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಲಾಗಿದೆ. ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಕೇಂದ್ರ

ಸರ್ಕಾರ ಅನುಮತಿ ನೀಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಕೊಬ್ಬರಿಗೆ 12 ಸಾವಿರ ರೂಪಾಯಿ ಬೆಲೆ ನೀಡಿದರೆ,

ರಾಜ್ಯ ಸರ್ಕಾರ 3 ಸಾವಿರ ಸೇರಿಸಿ ಕ್ವಿಂಟಾಲ್‌ಗೆ 15 ಸಾವಿರ ರೂಪಾಯಿ ನೀಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
---------------------
4. ಕರ್ನಾಟಕದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುವುದು

ಹಾಗೂ ರೈತರಿಗೆ ಆಗಿರುವ ತೊಂದರೆ ತಪ್ಪಿಸುವ ಉದ್ದೇಶದಿಂದ ಸರ್ಕಾರ ಪೋಡಿ ವಾರಸು ಖಾತೆ ಆಂದೋಲನ ಪ್ರಾರಂಭಿಸಲಿದೆ

ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
--------------------- 

5 ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಮಂಡನೆಯು ಫೆಬ್ರವರಿ 1 ರಂದು ನಡೆಯಲಿದೆ.

ಪ್ರಸಕ್ತ ವರ್ಷ ಲೋಕಸಭೆ ಚುನಾವಣೆಯೂ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ ಮಹತ್ವ ಪಡೆದುಕೊಂಡಿದೆ.

ಈ ಬಾರಿ ಬಜೆಟ್‌ನಲ್ಲಿ ರೈತರು, ಮಹಿಳೆಯರು, ಯುವಕರು ಹಾಗೂ ಬಡವರನ್ನು ಕೇಂದ್ರವಾಗಿರಿಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ.

ಮಹಿಳೆಯರು ಹಾಗೂ ರೈತರನ್ನು ಏಕಕಾಲಕ್ಕೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭೂಮಾಲೀಕ ರೈತ ಮಹಿಳಿಯರಿಗೆ

ಪಿ.ಎಂ ಕಿಸಾನ್‌ ಕಂತಿನ ಆರು ಸಾವಿರ ರೂಪಾಯಿಯನ್ನು ಎರಡು ಪಟ್ಟು ಹೆಚ್ಚಳ ಮಾಡಲು ಮುಂದಾಗಿದೆ. ಇದಕ್ಕೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ

ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಹೇಳಿದೆ. ರೈತರು ಪಿಎಂ ಕಿಸಾನ್‌ನ ಹಣವನ್ನು ಕೃಷಿಗೆ ಅವಶ್ಯವಿರುವ ರಸಗೊಬ್ಬರ, ಬೀಜಗಳು

ಕೀಟನಾಶಕಗಳು ಸೇರಿದಂತೆ ಕೃಷಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ. ಇದೀಗ ದೇಶದ ಹಲವು ಭಾಗದಲ್ಲಿ ಬರಗಾಲ ಇರುವ

ಹಿನ್ನೆಲೆಯಲ್ಲಿ ಪಿ.ಎಂ ಕಿಸಾನ್‌ ಕಂತಿನ ಹಣ ದುಪ್ಪಟ್ಟಾದರೆ ರೈತರಿಗೆ ಸಹಾಯವಾಗಲಿದೆ.  
---------------------

7. ಕರ್ನಾಟಕದ ಉತ್ಸವಗಳಲ್ಲೇ ವಿಶೇಷ ಉತ್ಸವವಾಗಿರುವ ಹಂಪಿ ಉತ್ಸವವನ್ನು ಫೆಬ್ರವರಿ 2,3 ಹಾಗೂ 4ರಂದು ಆಚರಿಸಲಾಗುವುದು ಎಂದು

ಶಾಸಕ ಚ್.ಆರ್. ಗವಿಯಪ್ಪ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಲಾವಿದರ ಹಿತ ದೃಷ್ಟಿಯಿಂದ

ಮತ್ತು ಕಲೆಯ ರಕ್ಷಣೆಗಾಗಿ ಹಂಪಿ ಉತ್ಸವ ಆಚರಿಸಲಾಗುತ್ತದೆ ಎಂದಿದ್ದಾರೆ. 
--------------------- 

ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ಹಾಗೂ ಮುಂದಿನ ಮಳೆಗಾಲದವರೆಗೆ

ಬೇಕಾಗಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು,

ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
---------------------

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ  

 ರಾಜ್ಯದ ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ

ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಲೆನಾಡಿನಲ್ಲೂ ಮಳೆ ಮುಂದುವರಿಯಲಿದೆ. ಇನ್ನು ಉತ್ತರ ಕರ್ನಾಟಕದ ಭಾಗದಲ್ಲಿಯೂ

ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಇನ್ನುಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ.

ಇನ್ನು ಗುರುವಾರ ಕೋಟ, ಧರ್ಮಸ್ಥಳ, ಸುಳ್ಯ, ಮಂಗಳೂರು, ಕುಂದಾಪುರ, ಗೇರ್ಸೊಪ್ಪ, ತಾಳಗುಪ್ಪ ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾಗಿದೆ.

ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಉಷ್ಣಾಂಶ

27 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.