News

ಭತ್ತ ಖರೀದಿ ಆರಂಭ: ನ. 30ರಿಂದ ಡಿ. 30ರವರೆಗೆ ಫ್ರೂಟ್ಸ್ ದತ್ತಾಂಶದಲ್ಲಿ ಹೆಸರು ನೋಂದಾಯಿಸಿ ಅವಕಾಶ

29 November, 2020 6:46 AM IST By:

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಬಿಸಸು ಸರ್ಕಾರ ಆದೇಶಿಸಿದ್ದರಿಂದ ಮಂಗಳೂರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು. ಡಿಸೆಂಬರ್ 30 ರವರೆಗೆ ಭತ್ತ ಬೆಳೆದ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲಿಚ್ಚಿಸುವರು ಹೆಸರು ನೋಂದಾಯಿಸಬಹುದು.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಮಂಗಳೂರು ಎಲ್ಲ ತಾಲ್ಲೂಕುಗಳಲ್ಲಿ ತೆರೆಯಲು ಸರ್ಕಾರವು ಆದೇಶಿಸಿದೆ. ಇದೇ 30 ರಿಂದ ಡಿಸೆಂಬರ್ 30 ರವರೆಗೆ ಕೃಷಿಕರ ಹೆಸರನ್ನು ‘ಫ್ರೂಟ್ಸ್’ ದತ್ತಾಂಶದಲ್ಲಿ (fruits portal) ನೋಂದಾಯಿಸಲು ಅವಕಾಶವಿದೆ.

ಆರ್.ಟಿ.ಸಿ.ಯಲ್ಲಿ ರೈತರ ಹೆಸರು ಮತ್ತು ಭತ್ತದ ಬೆಳೆ ಕಡ್ಡಾಯವಾಗಿ ನಮೂದಾಗಿರಬೇಕು. ಭತ್ತ ‘ಫ್ರೂಟ್ಸ್’ ದತ್ತಾಂಶಕ್ಕೆ ಆಧಾರ್ ಜೋಡಣೆಯಾಗಿರಬೇಕು. ಒಂದು ಎಕರೆಗೆ 16 ಕ್ವಿಂಟಲ್‌ನಂತೆ ಗರಿಷ್ಠ 2.50 ಎಕರೆಗೆ 40 ಕ್ವಿಂಟಲ್ ಭತ್ತ ಖರೀದಿಸಲು ಅವಕಾಶವಿದೆ. ಭತ್ತ ಖರೀದಿಸಲು ರಾಜ್ಯ ಸರ್ಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಸರ್ಕಾರದಿಂದ ಏಜೆನ್ಸಿಯಾಗಿ ನೇಮಿಸಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 1,868 ಮತ್ತು ಗ್ರೇಡ್ ಎ ಭತ್ತಕ್ಕೆ1,888 ದರ ನಿಗದಿಪಡಿಸಲಾಗಿದೆ.

ಇಲಾಖೆಯಿಂದ ಕಳುಹಿಸುವ ಎಸ್.ಎಂ.ಎಸ್. ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿ ಗಿರಣಿಗಳಿಗೆ ಭತ್ತದ ಮಾದರಿಯನ್ನು ನೀಡಬೇಕು. ಗುಣಮಟ್ಟ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಲಾಗುವುದು. 3 ದಿನದೊಳಗಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.