News

ದ್ವಿದಳ ಧಾನ್ಯಕ್ಕೆ ಪಲ್ಸ್ ಮ್ಯಾಜಿಕ್ ಪೋಷಕಾಂಶ, ಇಳುವರಿ ವೃದ್ಧಿಗೆ ಪಲ್ಸ್ ಮ್ಯಾಜಿಕ್

19 November, 2020 7:05 AM IST By:

ದ್ವಿದಳ ದಾನ್ಯಗಳ ಕಡಲೆ, ತೊಗರಿ, ಹೆಸರು ಹಾಗೂ ಇನ್ನಿತರ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಆಗುತ್ತಿಲ್ಲವೇ, ಅಥವಾ ಸಾಕಷ್ಟು ಖರ್ಚು ಮಾಡಿ ಟಾನಿಕ್  ಹಾಗೂ ಸಸ್ಯ ಪ್ರಚೋದಕಗಳನ್ನು ಖರೀದಿಸುತ್ತಿದ್ದೀರಾ? ಹಾಗಾದ್ರೆ ನಿಮಗಾಗಿ ಒಂದು ಅದ್ಭುತವಾದ ಕಡಿಮೆ ಬೆಲೆಯ ಟಾನಿಕ್ ಇದೆ. ಹೌದು ಇಲ್ಲಿನ ನಾನು ಪರಿಚಯಿಸುತ್ತಿರುವುದು ಕೃಷಿ ವಿಜ್ಞಾನ ಕೇಂದ್ರದ  ಕೃಷಿ ವಿಜ್ನ್ಯಾನಿಗಳು ಕಂಡು ಹಿಡಿದಿದ್ದಾರೆ. ಅದರ ಹೆಸರೇ ಪಲ್ಸ್ ಮ್ಯಾಜಿಕ್, ಇಳುವರಿ ಹೆಚ್ಚಾಗಲು ಹೇಗೆ ಮ್ಯಾಜಿಕ್ ಮಾಡುತ್ತದೆಂಬುದರ ಬಗ್ಗೆ ತಿಳಿದುಕೊಳ್ಳಲು ಇದನ್ನು ಒಮ್ಮೆ ಓದಿ ನೋಡಿ.

 ಕೃಷಿ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವಂತಹ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ವಿಜ್ಞಾನಿಗಳು ಸತತ ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿ ಕೊನೆಗೂ ಒಂದು ಒಳ್ಳೆಯ ಅದ್ಭುತವಾದಂತಹ ಪಲ್ಸ್ ಮ್ಯಾಜಿಕ್ಕನ್ನು ಕಂಡುಹಿಡಿದಿದ್ದಾರೆ.

 ಈ ಪಲ್ಸ್ ಮ್ಯಾಜಿಕ್ ನ ವಿಶೇಷತೆ ಏನೆಂದರೆ ಇದರಲ್ಲಿ ದ್ವಿದಳ ಧಾನ್ಯಗಳಿಗೆ ಬೇಕಾದಂತಹ ಮುಖ್ಯ ಹಾಗೂ ಸೂಕ್ಷ್ಮ ಪೋಷಕಾಂಶಗಳು, ಬೆಳೆ ವರ್ಧಕಗಳು ಹಾಗೂ ಸಸ್ಯ ಪ್ರಚೋದಕಗಳನ್ನು ಇದು ಹೊಂದಿದೆ.

ಇದನ್ನು ಬಳಸುವ ಮೂಲಕ ನಾವು ಹೂವುಗಳು ಉದರದ ಹಾಗೆ ರಕ್ಷಿಸಬಹುದು, ಕಾಯಿ ಕಟ್ಟುವುದರಲ್ಲಿ ಗಣನೀಯ ಏರಿಕೆಯನ್ನು ಗಮನಿಸಬಹುದು. ಇದರ ಮೂಲಕ ನಾವು ಇಳುವರಿಯಲ್ಲಿ ಭರ್ಜರಿ ಏರಿಕೆ ಯನ್ನು ಗಮನಿಸಬಹುದು.

ಬಳಸುವ ವಿಧಾನ:

ಪಲ್ಸ್ ಮ್ಯಾಜಿಕ್ 2 ಕೆಜಿ ಪ್ಯಾಕೆಟ್ನಲ್ಲಿ ಲಭ್ಯವಿದೆ. ಇದನ್ನು ಬೆಳೆಗಳಿಗೆ ಎರಡು ಬಾರಿ ನೀಡುವುದರಿಂದ ನಾವು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಮೊದಲ ಸಿಂಪಡಣೆಯನ್ನು ಬೆಳೆ 50% ಹೂವಾಡುವ ಸಮಯದಲ್ಲಿ ಸಿಂಪರಣೆ ಮಾಡಬೇಕು., ಹಾಗೂ ಮೊದಲ ಸಿಂಪರಣೆ ಮಾಡಿ 15 ದಿನಗಳ ನಂತರ ಮತ್ತೊಮ್ಮೆ ಸಿಂಪರಣೆ ಮಾಡಬೇಕು, ಹೀಗಾಗಿ ಇದು ಎಕರೆಗೆ 4 ಕೆಜಿ ಬೇಕಾಗುತ್ತದೆ.

ಇದನ್ನು ಒಂದು ಎಕರೆ ಗೆ ಎರಡು ಕೆಜಿ (ಪುಡಿ +ದ್ರವ್ಯ )ಶಿಫಾರಸು ಮಾಡಲಾಗಿದೆ, ಹಾಗಾಗಿ ನೀವು ಒಂದು ಎಕರೆ ಗೆ ಎಷ್ಟು ಟ್ಯಾಂಕ್ ಹೊಡಿಯುವಿರೋ ಅದರ ಮೇಲೆ ಲೆಕ್ಕವನ್ನು ಹಾಕಬೇಕು. ಉದಾಹರಣೆಗೆ ಒಂದು ಎಕರೆ ಗೆ  6 ಟ್ಯಾಂಕ್ ಅಂದರೆ ಒಂದು ಬಕೆಟ್ನಲ್ಲಿ 6 ಚರಗಿ ನೀರನ್ನು ಹಾಕಿ ಸಂಪೂರ್ಣ ಎರಡು ಕೆಜಿ ಹಾಕಿ ಕಲಸಬೇಕು. ಮುಂದೆ ಪ್ರತಿಯೊಂದು ಟ್ಯಾಂಕಿಗೆ ಈ ಮಿಶ್ರಣದ ಒಂದು ಚರಗಿ ಹಾಕಿ ಸಿಂಪರಣೆ ಮಾಡಬೇಕು..ಇದನ್ನು ಬೆಳಗಿನ ಜಾವಾ ಹಾಗೂ ಸಂಜೆಯ ಹೊತ್ತಿನಲ್ಲಿ ಸಿಂಪರಣೆ ಮಾಡುವುದು ಸೂಕ್ತವಾಗಿದೆ.

ಪಲ್ಸ್ ಮ್ಯಾಜಿಕ್ ಎಲ್ಲಿ ಲಭ್ಯವಿದೆ?

ಪಲ್ಸ್ ಮ್ಯಾಜಿಕ್ ಅನ್ನು ಆಯ್ದ ರೈತರಿಗೆ ಉಚಿತವಾಗಿ ನೀಡಿ ಸಂಶೋಧನೆ ನಡೆಸಲಾಗಿತ್ತು, ಆದರೆ ಈಗ ಇದು ಹೊರಗಡೆ ಎಲ್ಲಿಯೂ ಸಿಗುವುದಿಲ್ಲ. ಹಾಗಾಗಿ ಅದು ನಿಮಗೆ ಬೇಕಾದಲ್ಲಿ ನಿಮ್ಮ ಹತ್ತಿರದ ಕೃಷಿ ವಿಸ್ತರಣಾ ಕೇಂದ್ರ ಅಥವಾ ಕೃಷಿ ವಿಜ್ನ್ಯಾನ ಕೇಂದ್ರವನ್ನು ಸಂಪರ್ಕಿಸಿ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ