News

ಹೆಸರು, ಉದ್ದು ಖರೀದಿ ಕೇಂದ್ರ ಆರಂಭ- ನೋಂದಣಿ ಮಾಡಿಸಲು ಅಕ್ಟೋಬರ್ 15 ಕೊನೆ ದಿನ

21 September, 2020 12:35 PM IST By:

2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಉದ್ದು ರೈತರಿಂದ ಖರೀದಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ.

ಕಳೆದ ಒಂದು ತಿಂಗಳಿಂದ ಹೆಸರು ಉದ್ದು ಖರೀದಿ ಕೇಂದ್ರ ಆರಂಭಿಸಬೇಕೆಂಬ ರೈತರ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಿದೆ. ಈಗಾಗಲೇ ಬೀದರ್, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು  ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹೆಸರು ಕಾಳಿಗೆ ಕ್ವಿಂಟಾಲಿಗೆ 7196 ಹಾಗೂ ಉದ್ದು ಬೆಳೆಯನ್ನು ಕ್ವಿಂಟಾಲಿಗೆ 6 ಸಾವಿರ ರುಪಾಯಿಯಂತೆ ಖರೀದಿಸಲಾಗುವುದು. ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 15 ರೊಳಗೆ ನೋಂದಣಿ ಮಾಡಿಸಿಕೊಳ್ಳಲು ನವೆಂಬರ  15 ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ.

ಆಗಸ್ಟ್ ತಿಂಗಳ ಅಂತ್ಯದಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನಿರಂತರವಾಗಿ ಸುರಿದ ಮಳೆ ಹೆಸರು ಉದ್ದು ಬೆಳೆ ಹೊಲದಲ್ಲಿಯೇ ಮೊಳಕೆ ಒಡೆದು ರೈತರಿಗೆ ಅಪಾರ ಹಾನಿಯಾಗಿತ್ತು. ಇದ್ದ ಬೆಳೆಗಾದರೂ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ಬೆಳೆ ಖರೀದಿ ಮಾಡಬೇಕೆಂದು ಸರ್ಕಾರದ ಮೇಲೆ ನಿರಂತರವಾಗಿ ಒತ್ತಾಯಿಸಲಾಗಿತ್ತು.  ಸರ್ಕಾರ ತಡವಾಗಿಯಾದರೂ ಖರೀದಿಗೆ ಮುಂದಾಗಿದೆ. ಹಾಗಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ 11 ಖರೀದಿ ಕೇಂದ್ರಗಳನ್ನು, ಕಲಬುರಗಿ ಜಿಲ್ಲೆಯಲ್ಲಿ 64 ಖರೀದಿ ಕೇಂದ್ರ,  ಬೀದರ್ ಜಿಲ್ಲೆಯಲ್ಲಿ 60 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಹೆಸರು ಕಾಳು ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್ ಗರಿಷ್ಠ ಹಾಗೂ ಪ್ರತಿ ರೈತರಿಂದ ಗರಿಷ್ಠ ನಾಲ್ಕು ಕ್ವಿಂಟಲ್‍ಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‍ಗೆ 7,196 ಮತ್ತು ಉದ್ದಿನ ಕಾಳು ಪ್ರತಿ ಎಕರೆಗೆ ಮೂರು ಕ್ವಿಂಟಲ್ ಗರಿಷ್ಠ ಹಾಗೂ ಪ್ರತಿ ರೈತರಿಂದ ಆರು ಕ್ವಿಂಟಲ್‍ಗೆ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‍ಗೆ 6,000 ನಿಗದಿಪಡಿಸಲಾಗಿದೆ.

ರೈತರು ಅಗತ್ಯ ಮಾಹಿತಿಗಳೊಂದಿಗೆ ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಆನ್‍ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡಲು ಅಕ್ಟೋಬರ್ 15ರೊಳಗೆ ಹೆಸರು ನೋಂದಣಿ ಮಾಡಿಕೊಂಡು ನವೆಂಬರ್ 15ರೊಳಗೆ ಮಾರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಖರೀದಿ ಕೇಂದ್ರಗಳ ವಿವರ:  ಅವರಾದ್ (ಬಿ), ಸೊಂತ, ಸಾವಳಗಿ, ಮಹಾಗಾಂವ, ಹರಸೂರ ಹಾಗೂ ಡೊಂಗರಗಾಂವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಗ್ರಾಮೀಣ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಮಲಾಪೂರ ಮತ್ತು ನೇಗಿಲಯೋಗಿ ರೈತ ಉತ್ಪಾದಕ ಸಂಘ ಮೇಳಕುಂದಾ (ಬಿ).

ಆಳಂದ: ಖಜೂರಿ, ಮಾದನಹಿಪ್ಪರಗಾ, ನಿಂಬರ್ಗಾ, ಸರಸಂಬಾ, ಕಮಲಾನಗರ, ಮುನ್ನೊಳ್ಳಿ, ಯಳಸಂಗಿ, ಹಿರೋಳ್ಳಿ, ತಡಕಲ್, ಬೊಮ್ಮನಳ್ಳಿ, ಕಡಗಂಚಿ, ನರೋಣಾ ಹಾಗೂ ನಿಂಬಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.

ಅಫಜಲಪುರ: ಕರಜಗಿ, ಅತನೂರ್ ಹಾಗೂ ಭೈರಾಮಡಗಿ ಪ್ರಾ.ಕೃ.ಪ.ಸ.ಸಂಘ

ಜೇವರ್ಗಿ: ಜೇರಟಗಿ, ಕುಮನಸಿರಸಗಿ ಹಾಗೂ ನರಿಬೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.

ಸೇಡಂ: ಮುಧೋಳ, ಹಾಬಾಳ್ (ಟಿ), ಅಡಕಿ, ಸಿಂಧನಮಡು, ಕಾನಾಗಡ್ಡಾ, ಕೋಳಕುಂದಾ, ಮೋತಕಪಲ್ಲಿ, ಯಡಗಾ, ಕೋಳಕುಂದಾ ಗ್ರಾಮೀಣ ಪ್ರಾ.ಕೃ.ಪ.ಸ.ಸಂಘ ಹಾಗೂ ಬಲಭೀಮಸೇನಾ ರೈತ ಉತ್ಪಾದಕರ ಸಂಸ್ಥೆ ಬೀದರಚೇಡ್ ಮತ್ತು ಕಾಗಿಣಾ ರೈತ ಉತ್ಪಾದಕರ ಸಂಸ್ಥೆ ಸುರವಾರ.

ಚಿತ್ತಾಪೂರ: ನಾಲವಾರ, ಕಾಳಗಿ, ರಾವೂರ, ಹಲಕರ್ಟಿ, ಕೊಡದೂರ್, ದಂಡೋತಿ, ಅರಣಕಲ್, ಹೆಬ್ಬಾಳ, ಭೀಮನಹಳ್ಳಿ, ಟೆಂಗಳಿ, ಆಲ್ಲೂರ (ಬಿ), ಮಂಗಲಗಿ, ಡೋಣಗಾಂವ್, ಪೇಟಶಿರೂರ, ಹೇರೂರ ಹಾಗೂ ಕುಂದಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.

ಚಿಂಚೋಳಿ: ಚಿಮ್ಮನ್‍ಚೋಡ್, ಕೋಡ್ಲಿ, ಐನಾಪೂರ, ಸಾಲೇಬೀರನಳ್ಳಿ, ಐನೋಳ್ಳಿ, ಗರಗಪಳ್ಳಿ, ಕನಕಪುರ, ರುದ್ರನೂರ ಹಾಗೂ ಸುಲೇಪೇಟ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.