News

PM Kisan 14th installment ಪಿ.ಎಂ ಕಿಸಾನ್‌ 14ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ!

27 July, 2023 1:54 PM IST By: Hitesh
Prime Minister Narendra Modi released the 14th episode of PM Kisan!

 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್‌ನ 14ನೇ ಕಂತಿನ (PM Kisan 14th installment) ಹಣವನ್ನು

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (PM Kisan 14th Installment Released) ಬಿಡುಗಡೆ ಮಾಡಿದರು.

ಪಿಎಂ ಕಿಸಾನ್ (pm kisan samman nidhi) ಯೋಜನೆಗೆ ಸೇರ್ಪಡೆಯಾದ ರೈತರಿಗೆ ಶುಭ ಸುದ್ದಿ ಬಂದಿದೆ.

ಕೇಂದ್ರ (Central Govt) ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇಂದು ಹಣ ಜಮೆ ಮಾಡಿದೆ.

14ನೇ ಕಂತಿನ (PM Kisan 14th episode) ಮೊತ್ತವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜಸ್ತಾನದ (Rajasthan) ಸೀಕಾರ್‌ನಲ್ಲಿ

ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ (Prime Minister Narendra Modi)  ಮೋದಿ ಅವರು DBT

ಮೂಲಕ ಪಿಎಂ ಕಿಸಾನ್‌ ಯೋಜನೆಯ 14ನೇ ಕಂತಿನ ಹಣವನ್ನು ವರ್ಗಾವಣೆ ಮಾಡಿದರು.  

ಪಿಎಂ ಕಿಸಾನ್ (PM Kisan Samman Nidhi)  ಫಲಾನುಭವಿಗಳಿಗೆ ಈ ಕಂತಿನಲ್ಲಿ

ಸುಮಾರು 8.5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಇದೀಗ ರೈತರು (Farmers) ತಮ್ಮ ಬ್ಯಾಂಕ್‌ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳುವ

ಮೂಲಕನೇ ಕಂತನ್ನು ಖಾತ್ರಿ ಪಡಿಸಿಕೊಳ್ಳಬಹುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PMKSN) ಒಂದು ಕೇಂದ್ರ ಉಪಕ್ರಮವಾಗಿದ್ದು,

ಭೂಹಿಡುವಳಿದಾರ ರೈತರು ಮತ್ತು ಅವರ ಕುಟುಂಬಗಳಿಗೆ ವರ್ಷಕ್ಕೆ Rs 6,000 ವರೆಗೆ ಹಣಕಾಸಿನ ನೆರವು ನೀಡುತ್ತದೆ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೀಸಲಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್)

ಯೋಜನೆ (ಯೋಜನೆ) ಯ 14ನೇ ಕಂತುಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.   

ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಯವರು 8.5 ಕೋಟಿಗೂ ಹೆಚ್ಚು ರೈತರಿಗೆ

ಕಂತುಗಳನ್ನು ಬಿಡುಗಡೆ ಮಾಡಿದ್ದಾರೆ. ಜುಲೈ 27, 2023 ರಂದು ರಾಜಸ್ಥಾನದ ಸಿಕಾರ್‌ನಲ್ಲಿ ರೈತರೊಂದಿಗೆ ಅವರು ಸಂವಾದ ನಡೆಸಿದರು. 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PMKSN) ಕೇಂದ್ರ  (Central Govt) ಸರ್ಕಾರದ

ಮಹತ್ವದ ಯೋಜನೆಯಾಗಿದ್ದು, ಭೂಹಿಡುವಳಿದಾರ ರೈತರು (Farmers) ಮತ್ತು ಅವರ

ಕುಟುಂಬಗಳಿಗೆ ವರ್ಷಕ್ಕೆ Rs 6,000 ವರೆಗೆ ಹಣಕಾಸಿನ ನೆರವು ನೀಡುತ್ತದೆ.

ಪಿಎಂ ಕಿಸಾನ್‌ ಮೊತ್ತ ಪರಿಶೀಲಿಸುವುದು ಹೇಗೆ

ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮುಂಬರುವ 14ನೇ ಕಂತಿನ ಪಾವತಿಯನ್ನು ಆಧಾರ್

ಮತ್ತು ಎನ್‌ಪಿಸಿಐ-ಲಿಂಕ್ ಮಾಡಿದ ಬ್ಯಾಂಕ್ ಖಾತೆಯಲ್ಲಿ ಮಾಡಲಾಗುತ್ತದೆ ಎಂದು ಕೇಂದ್ರ ಹೇಳಿದೆ.