News

ಉಚಿತ ಎಲ್‌ಪಿಜಿ ಸಿಲಿಂಡರ್‌ ಬೇಕಿದ್ದರೆ ಕೂಡಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಸದಸ್ಯರಾಗಿ

10 July, 2020 2:07 PM IST By:

ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ (LPG) ಸಂಪರ್ಕ ಕಲ್ಪಿಸಿಕೊಡುವ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಸರ್ಕಾರ ಜಾರಿಗೆ ತಂದು ನಾಲ್ಕು ವರ್ಷ ಕಳೆದರೂ ಸಹ ಇನ್ನೂ ಬಹಳಷ್ಠು ಜನ ಇದರ ಸದುಪಯೋಗ ಪಡದುಕೊಂಡಿಲ್ಲ. ಈ ಯೋಜನೆಯನ್ನು ಉಚಿತವಾಗಿ ಹೇಗೆ ಪಡೆದುಕೊಳ್ಳಬೇಕು ಮತ್ತು ಯಾರೆಲ್ಲ ಈ ಯೋಜನೆಗೆ ಅರ್ಹರು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮುಂದಿನ ಮಾಹಿತಿ ಓದಿ.

ಬಡತನ ರೇಖೆಗಿಂತ ಕೆಳಗೆ ಇರುವವರನ್ನು ಗಮನದಲ್ಲಿ ಇರಿಸಿಕೊಂಡು ಪ್ರಧಾನಮಂತ್ರಿ ಉಜ್ವಲಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಕುಟುಂಬದ ವೆಚ್ಚವನ್ನು ಕಡಿಮೆ ಮಾಡುವುದು ಅಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆ ತರುವುದಕ್ಕಾಗಿ ಈ ಜಾರಿಗೊಳಿಸಲಾಗಿದೆ. ಜನಧನ ಖಾತೆಯ ಆಧಾರಲ್ಲಿ ಕುಟುಂಬದ ಮಹಿಳೆ ಸಬ್ಸಿಡಿ ಪಡೆದುಕೊಳ್ಳುತ್ತಾರೆ.

ಯೋಜನೆ ಪಡೆಯಲು ಅರ್ಹತೆ:

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ 18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು.  ಆಯಾ ರಾಜ್ಯ ಸರ್ಕಾರಗಳು ನೀಡುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಬಿಪಿಎಲ್ (BPL) ಕಾರ್ಡ್ ಹೊಂದಿರಬೇಕು.  ಎಲ್‌ಪಿಜಿ ಸಂಪರ್ಕಗಳನ್ನು ಮಹಿಳಾ ಫಲಾನುಭವಿಗಳಿಗೆ ನೀಡಲಾಗುವುದು ಮತ್ತು ಅವರ ಹೆಸರಿನಲ್ಲಿ ನೋಂದಾಯಿಸಲಾಗುವುದು.

ದಾಖಲಾತಿಗಳು:

ಬಿಪಿಲ್ ಪಡಿತರ ಚೀಟಿ (ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್) ಝಿರಾಕ್ಸ್,   ಆಧಾರ್ ಕಾರ್ಡ್ ಝಿರಾಕ್ಸ್,  ಚುನಾವಣಾ ಚೀಟಿ,  ಡ್ರೈವಿಂಗ್ ಲೈಸನ್ಸ್,  ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೊಂದು ದಾಖಲಾತಿ ಝಿರಾಕ್ಸ್ ಇರಬೇಕು. ಬ್ಯಾಂಕಿನ ಅಕೌಂಟ್ ಪಾಸಬುಕ್ ಝಿರಾಕ್ಸ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಎಲ್ಪಿಜಿ ಹಂಚಿಕೆದಾರರ ಕೇಂದ್ರದಲ್ಲಿ ಸಿಗುವ ಅರ್ಜಿಯನ್ನು ತುಂಬಿ ನೀಡಬೇಕು.

ಎಲ್ಪಿಜಿ ಸಂಪರ್ಕ ಹೇಗೆ ಪಡೆಯಬೇಕು?

ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹತ್ತಿರದ ಎಲ್ಪಿಜಿ ವಿತರಕರಲ್ಲಿಗೆ ತೆಗೆದುಕೊಂಡು ಹೋಗಿ ಅರ್ಜಿ ತುಂಬಬೇಕು. 14.2 ಕೆಜಿ ಸಿಲಿಂಡರ್ ಮೇಲೆ 1,600 ರೂಪಾಯಿಗಳ ರಿಯಾಯಿತಿಯು  1,450 ರೂಪಾಯಿ ಭದ್ರತಾ ಠೇವಣಿಯನ್ನು ಒಳಗೊಂಡಿರುತ್ತದೆ. ಜತೆಗೆ ಗ್ಯಾಸ್ ಸ್ಟೋವ್, ISI ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುವುದು. 5 ಕೆ.ಜಿ ಸಿಲಿಂಡರ್ ಕೂಡ ಬಿಪಿಎಲ್ ಕಾರ್ಡುದಾರರಿಗೆ ಲಭ್ಯವಿದ್ದು, 161 ರೂಪಾಯಿ ವೆಚ್ಚದಲ್ಲಿ ವರ್ಷದಲ್ಲಿ ಒಟ್ಟು 34 ಬಾರಿ ಮರುಬಳಸಬಹುದು.

ಮೂರು ಸಿಲಿಂಡರ್ ಉಚಿತ:

 ಕೊರೋನಾ ವೈರಸ್ ಕಾರಣ ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆ (Pradhan Mantri Ujwala Yojana) ಅಡಿಯಲ್ಲಿ ಸೆಪ್ಟೆಂಬರ್ ವರೆಗೆ ಉಚಿತ  ಸಿಲೆಂಡರ್ ನೀಡಲು ಕೇಂದ್ರ  ಸರ್ಕಾರ ನಿರ್ಧರಿಸಿದೆ. ಮೊದಲು ನೀಡಿದ್ದ ಮೂರು ತಿಂಗಳ ಅವಧಿ ಮುಕ್ತಾಯಗೊಂಡಿದ್ದು, ಈಗ ಸರ್ಕಾರ ಅದನ್ನು ಇನ್ನೂ 3 ತಿಂಗಳು ವಿಸ್ತರಿಸಿದೆ.  ಎಲ್ಲರೂ ಮೊದಲ ತಿಂಗಳಲ್ಲಿ ಸಿಲಿಂಡರ್ ತೆಗೆದುಕೊಂಡರು, ಎರಡನೇ ತಿಂಗಳು ಕೂಡ ತೆಗೆದುಕೊಂಡಿದ್ದರು. ಆದರೆ ಮೂರನೇ ತಿಂಗಳ ಸಿಲೆಂಡರನ್ನು ಕೆಲವರು ತೆಗೆದುಕೊಂಡಿರಲಿಲ್ಲ.  ಹಾಗಾಗಿ ಇದನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ.