Pradhan Mantri Suraksha Bima Yojana: ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಕಡಿಮೆ ಮೊತ್ತದಲ್ಲಿ ಸುರಕ್ಷತಾ ವಿಮೆ ನೀಡುವುದು ಪ್ರಮುಖವಾಗಿದೆ.
ಎಫ್.ಎಂ.ಸಿ.ಜಿ ಕ್ಲಸ್ಟರ್ - ಹೂಡಿಕೆದಾರರ ಸಮಾವೇಶ; 1200 ಕೋಟಿ ಬಂಡವಾಳ, ಲಕ್ಷಾಂತರ ಜನರಿಗೆ ಉದ್ಯೋಗ!
ಪ್ರಧಾನಮಂತ್ರಿ ಜೀವನ್ ಜ್ಯೋತಿಬಿಮಾ ಯೋಜನೆ, ಗಳ ಮೂಲಕ ಕಡಿಮೆ ಮೊತ್ತವನ್ನು ಪಾವತಿ ಮಾಡಿ, ಸುರಕ್ಷಿತ ಮೊತ್ತದ ಅಪಘಾತ ವಿಮೆಯನ್ನು ಪಡೆಯಬಹುದಾಗಿದೆ.
ಪ್ರಧಾನಮಂತ್ರಿ ಜೀವನ್ ಜ್ಯೋತಿಬಿಮಾ ಯೋಜನೆಯಲ್ಲಿ ಕೇವಲ ಕೇವಲ 436 ರೂಪಾಯಿ ಮೊತ್ತವನ್ನು ವಾರ್ಷಿಕ ಪ್ರೀಮಿಯಮ್‌ನಲ್ಲಿ ಪಾವತಿ ಮಾಡುವ ಮೂಲಕ 2 ಲಕ್ಷದ ಜೀವ ವಿಮಾ ಸುರಕ್ಷೆ ಸಿಗಲಿದೆ.
ಈ ಪ್ರೀಮಿಯಮ್ ಯೋಜನೆಗೆ 18 ವರ್ಷದಿಂದ 50 ವರ್ಷಗಳ ಒಳಗಿನವರು ಅರ್ಹರಾಗಿರುತ್ತಾರೆ. ಇದು ವಾರ್ಷಿಕ ಪುನರುಜ್ಜೀವನಕ್ಕೆ ಒಳಪಟ್ಟಿದೆ.
ಇನ್ನು ಕೇವಲ 20 ರೂಪಾಯಿ ವಾರ್ಷಿಕ ಪಾವತಿ ಮಾಡಿಯೂ Pradhan Mantri Suraksha Bima Yojana ವಿಮೆ ಪಡೆಯಬಹುದಾಗಿದೆ.
ಹೌದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಮೂಲಕ ವಾರ್ಷಿಕ ಕೇವಲ 20ರೂಪಾಯಿ ಪಾವತಿ ಮಾಡಿ ಬರೋಬ್ಬರಿ 2 ಲಕ್ಷ ಮೊತ್ತದ ಅಪಘಾತ ವಿಮೆ ಸುರಕ್ಷತೆಯನ್ನು ಪಡೆಯಬಹುದಾಗಿದೆ.
ಇದಕ್ಕೆ 18 ವರ್ಷದಿಂದ 70 ವರ್ಷದ ಒಳಗಿನವರು ಅರ್ಹರಾಗಿದ್ದಾರೆ. ಇದು ಸಹ ವಾರ್ಷಿಕ ಪುನರುಜ್ಜೀವನಕ್ಕೆ ಒಳಪಟ್ಟಿದೆ.
ಚಂದಾದಾರರ ಬ್ಯಾಂಕ್, ಅಂಚೆ ಕಚೇರಿ ಖಾತೆಯಿಂದ ಪ್ರೀಮಿಯಮ್‌ನ ಸ್ವಯಂ ಡೆಬಿಟ್ ದಾವೆಯ ಮೊಬಲಗು ಹಕ್ಕುದಾರರ ಬ್ಯಾಂಕ್ ಖಾತೆಗೆ ನೇರ ಜಮಾ ಆಗುತ್ತದೆ.
ಈ ಯೋಜನೆಗಳಿಗೆ ನೋಂದಾಯಿಸಲು ಹತ್ತಿರದ ಬ್ಯಾಂಕ್ ಶಾಖೆಯನ್ನಾಗಲೀ ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
"ಐಟಮ್" ಎಂದು ಚುಡಾಯಿಸಿದವನಿಗೆ ಜೈಲು ಸಜೆ!
ಈ ವಿಮೆಗೆ ಒಳಪಟ್ಟವರಿಗೆ ಅಪಘಾತ ಅಥವಾ ಮೃತಪಟ್ಟರೆ,30 ದಿನಗಳಲ್ಲಿ ದಾವೆಗಳ ಸೂಚನೆ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ, ಕರೆ ಮಾಡಿರಿ 1500 1831111 (ಟೋಲ್ ಫ್ರೀ) www.jansuralsha.gov.in