News

ಪ್ರಧಾನಮಂತ್ರಿ ಮತ್ಸ್ಯ(Fish) ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

21 July, 2020 10:02 AM IST By:

ಮೀನುಗಾರಿಕೆ (fisheries)  ಇಲಾಖೆಯಿಂದ 2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಕೃಷಿಕೊಳಗಳ ನಿರ್ಮಾಣ, ಬಯೋ ಫ್ಲಾಕ್ ಕೊಳ ನಿರ್ಮಾಣ, ಮೀನುಮರಿ ಉತ್ಪಾದನೆ ಹಾಗೂ ಪಾಲನಾ ಕೇಂದ್ರಗಳ ಸ್ಥಾಪನೆ, ಕ್ರೀಡಾ ಮೀನುಗಾರಿಕೆ, ಶೈತ್ಯೀಕರಿಸಿದ ವಾಹನಗಳು, ಆರ್.ಎ.ಎಸ್. ಘಟಕ ಸ್ಥಾಪನೆ, ಶೈತ್ಯಾಗಾರ / ಮಂಜುಗಡ್ಡೆ ಸ್ಥಾವರ ನಿರ್ಮಿಸುವುದು, ಅಲಂಕಾರಿಕ ಮೀನು ಉತ್ಪಾದಕ ಘಟಕ ಉಪಯೋಜನೆಗಳಡಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಫಲಾನುಭವಿಗಳಿಗೆ ಶೇಕಡ 40 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುತ್ತದೆ.   ಅರ್ಜಿ ಸಲ್ಲಿಸಲು 2020ರ ಜುಲೈ 31 ಕೊನೆಯ ದಿನವಾಗಿದೆ.

ಕೇಂದ್ರ ಸರಕಾರವು ಪ್ರಸ್ತುತ ವರ್ಷದಿಂದ ಜಾರಿಗೊಳಿಸಲು ಉದ್ದೇಶಿಸಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಭಾರತದ ಮೀನುಗಾರಿಕಾ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿಯುತ ಬೆಳವಣಿಗೆಗೆ ರೂಪಿಸಿರುವ ಯೋಜನೆಯಾಗಿದ್ದು, ಮೀನುಗಾರರ ಸಾಮಾಜಿಕ ಮತ್ತು ಆರ್ಥಿಕ ಸರ್ವತೋಮುಖ ಅಭಿವೃದ್ಧಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.

ಅಸಕ್ತರು ಯೋಜನೆಯ ಸದುಪಯೋಗ ಪಡೆಯಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ತಾಲೂಕು ಮೀನುಗಾರಿಕಾ ಅಧಿಕಾರಿಗಳನ್ನು/ ಇಲಾಖೆಯನ್ನು ಸಂಪರ್ಕಿಸುವಂತೆ ಮತ್ತು ಹೆಚ್ಚಿನ ವಿವರಗಳನ್ನು ವೆಬ್‌ಸೈಟ್‌ ವಿಳಾಸದಲ್ಲಿ ಪಡೆಯಬಹುದೆಂದು ಮೀನುಗಾರಿಕಾ ಇಲಾಖೆ ತಿಳಿಸಿದೆ.

ಆಸಕ್ತರು ಯೋಜನೆಯ ಸದುಪಯೋಗ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮೀನುಗಾರಿಕಾ ಅಧಿಕಾರಿಗಳನ್ನು/ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದೆ. ಹಾಗೂ ಹೆಚ್ಚಿನ ವಿವರಗಳನ್ನು ವೆಬ್‍ಸೈಟ್ ವಿಳಾಸ https://fisheries.karnataka.gov.in/ ನಲ್ಲಿ ಪಡೆಯಬಹುದು ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.