ಕರ್ನಾಟಕದ ರೈತರಿಗೆ ಖುಷಿಯ ಸುದ್ದಿಯೊಂದು ಸಿಕ್ಕಿದಂತಾಗಿದೆ. ರಾಜ್ಯ ಸಚಿವ ಸಂಪುಟವು ಕೇಂದ್ರ ಸರ್ಕಾರ ಪ್ರಾಯೋಜಿಸುವ "ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್-ಬಿ" ಯೋಜನೆಯಡಿಯಲ್ಲಿ ರಾಜ್ಯದ ರೈತರಿಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್‌ಗಳನ್ನು ಒದಗಿಸುವ ಯೋಜನೆಯ ಅನುಷ್ಠಾನಕ್ಕೆ ಅನುಮತಿ ನೀಡಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆ ಈ ಯೋಜನೆಯ ಮೂಲಕ ರಾಜ್ಯದ ರೈತರು ತಮ್ಮ ಜಮೀನುಗಳಿಗೆ ಉಚಿತವಾಗಿ ನೀರು ಪಡೆಯಬಹುದಾಗಿದೆ. ಜೊತೆಗೆ ರೈತರನ್ನು ಸ್ವಾವಲಂಬಿಯಾಗಿಸಲು ಈ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನು ಓದಿರಿ: Share Marketನಿಂದ, Goldನಿಂದ, ಮತ್ತು Propertyಯಿಂದ ಸಂಪಾದನೆ ಮಾಡುವಂತ ಜನರಿಗೆ ಒಳ್ಳೆಯ ಸುದ್ದಿ!
ಈ ಯೋಜನೆಯ ವಿಶೇಷತೆ ಏನು..?
ಈ ಯೋಜನೆಯಿಂದ ರಾಜ್ಯದ ರೈತರು ಉಚಿತವಾಗಿ ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳಬಹುದು.ರೈತರು ಬಳಸುವ ಪಂಪ್‌ಗಳು ಸಾಮಾನ್ಯವಾಗಿ ಡೀಸೆಲ್ ಅಥವಾ ಪೆಟ್ರೋಲ್‌ನಿಂದ ಕೆಲಸ ಮಾಡುತ್ತವೆ. ಈ ಯೋಜನೆಯಡಿ ರೈತರ ಪಂಪ್‌ಸೆಟ್‌ಗಳನ್ನು ಸೌರಶಕ್ತಿ ಚಾಲಿತ ಪಂಪ್‌ಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ಸೌರ ಚಾಲಿತ ಪಂಪ್‌ಸೆಟ್‌ಗಳನ್ನು ಬಳಸಲಾಗುವು. ಜೊತೆಗೆ ರೈತರನ್ನು ಸ್ವಾವಲಂಬಿಉಆಗಿ ಮಾಡಲಾಗುವುದು. ಜೊತೆ ಜೊತೆಗೆ ಸೋಲಾರ್ ಪವರ್ ಗ್ರಿಡ್ ಸ್ಥಾಪಿಸಿ ಅಲ್ಲಿ ಶೇಖರಣೆಯಾಗುವ ವಿದ್ಯುತ್ ಶಕ್ತಿಯನ್ನು ಸರ್ಕಾರವೇ ಖರೀದಿ ಮಾಡುತ್ತದೆ ಎಂದು ಭರವಸೆ ನೀಡಲಾಗಿದೆ. ಇ ಯೋಜನೆಯಿಂದ ರೈತರ ಹೊಲಕ್ಕೆ ನೀರು ಹಾಗೂ ಕೈಗೆ ಸ್ವಲ್ಪ ಹಣವು ದೊರಕಿಂದತಾಗುತ್ತದೆ. ಸದ್ಯ ಕರ್ನಾಟಕದ ಸುಮಾರು 10,000 ರೈತರು ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿರಿ: Chocolates price hike: ಶೀಘ್ರದಲ್ಲೆ ಗಗನಕ್ಕೆರಲಿದೆ ಚಾಕೊಲೇಟ್ಸ್ ಬೆಲೆ.. ಇದೇ ಕಾರಣ
ಶುಲ್ಕವೆಷ್ಟು?
ಈ ಯೋಜನೆಯಡಿ ರೈತರು ಸೌರ ವಿದ್ಯುತ್ ಕೇಂದ್ರವನ್ನು ತಮ್ಮ ಜಮೀನಿನಲ್ಲಿ ಸ್ಥಾಪಿಸಲು ಅಲ್ಪ ಶುಲ್ಕ ಭರಿಸಬೇಕು. 0.5 ಮೆಗಾ ವ್ಯಾಟ್‌ನಿಂದ 2 ಮೆಗಾವ್ಯಾಟ್‌ನ ವರೆಗಿನ ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪಿಸಲು ಶುಲ್ಕ ಕ್ರಮವಾಗಿ 3000 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಇದೆ. ಇನ್ನು ಅನುಕೂಲವಾಗುವಂತೆ ಈ ಯೋಜನೆಗೆ ತಗಲುವ ಒಟ್ಟು ವೆಚ್ಚದ ಶೇಕಡಾ 40 ರಷ್ಟು ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ಪಾವತಿಸುತ್ತದೆ.
ಇದನ್ನು ಓದಿರಿ:Amul Recruitment 2022: ವಿಶ್ವದ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಯಲ್ಲಿ ನೇಮಕಾತಿ ಶುರು..! ಇಲ್ಲಿದೆ ಫುಲ್ ಡಿಟೈಲ್ಸ್