News

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸಮಗ್ರ ಮಾಹಿತಿ ಇಲ್ಲಿದೆ

12 May, 2021 1:18 PM IST By:

ಭಾರತ ಸರ್ಕಾರವು ಸಣ್ಣ ಮತ್ತು ಅತೀ ಸಣ್ಣ ರೈತರ ಆಧಾಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಂಯನ್ನು ಘೋಷಣೆ ಮಾಡಿದ್ದು, ಈಗಾಗಲೇ ಈ ಯೋಜನೆ ಚಾಲ್ತಿಯಲ್ಲಿದ್ದು, ದೇಶದ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಈ ಯೋಜನೆಯ ಫಲಾನುಭವಿ ರೈತರು ಕಡ್ಡಾಯವಾಗಿ 2 ಹೆಕ್ಟೇರಿಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರಬೇಕು.

ಈ ಯೋಜನೆಯ ಫಲಾನುಭವಿ ರೈತರಿಗೆ ವಾರ್ಷಿಕ ರೂ. 6000/- ರೂಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆಯAತೆ ಒಟ್ಟು 3 ಸಮಾನ ಕಂತುಗಳಲ್ಲಿ 2018ರ ಡಿಸೆಂಬರ್ 1ರಿಂದ ನೀಡಲಾಗುತ್ತಿದ್ದು, ಈಗಾಗಲೇ ಈ ಯೋಜನೆಯಡಿಯಲ್ಲಿ ಸುಮಾರು 12.5 ಕೋಟಿ ಅರ್ಹ ಫಲಾನುಭವಿ  ರೈತರನ್ನು ಗುರ್ತಿಸಿ ಆರ್ಥಿಕ ಸಹಾಯ ನೀಡಲಾಗುತ್ತಿದೆ.ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಹರಿರುವ ಪ್ರತಿ ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.

ಯೋಜನೆಯ ಉದ್ದೇಶಗಳು

  • ಸಣ್ಣ ಮತ್ತು ಅತೀ ಸಣ್ಣ ರೈತರು ಕೃಷಿಯಲ್ಲಿ ಮುಂದುವರೆಯುವAತೆ ಪ್ರೋತ್ಸಾಹಿಸುವುದು ಮತ್ತು ರೈತರ ಆಧಾಯವನ್ನು ವೃದ್ಧಿಸುವುದು.
  • ರೈತರು ನಿರ್ಧಿಷ್ಟ ಸಮಯದಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳಿಗೆ ಲಭಿಸುವ ಕೃಷಿ ಪರಿಕರಗಳನ್ನು ಕೊಂಡುಕೊಳ್ಳಲು ಆರ್ಥಿಕ ನೆರವಾಗುವುದು.
  • ರೈತರನ್ನು ಸಾಂಸ್ಥೀಕೇತರ ಸಾಲಮುಕ್ತರನ್ನಾಗಿಸುವುದು.

ಅರ್ಜಿ ಸಲ್ಲಿಸುವ ವಿಧಾನ

  • ರೈತರು ಈ ಯೋಜನೆಯ ಲಾಭ ಪಡೆಯಲು ಹತ್ತಿರದ ಯಾವುದೇ ಸರ್ಕಾರಿ ಸ್ವಾಮ್ಯದ ಕೇಂದ್ರಗಳಲ್ಲಿ ಅಂದರೆ ಬಾಪೂಜಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರ ಅಥವಾ ಇತರೆ ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
  • ರೈತರು ಹೊಂದಿರುವ ಭೂ ಹಿಡುವಳಿಯ ಮಾಹಿತಿ ಆಧಾರದ ಮೇಲೆ ರೈತರನ್ನು ಸಂಭವನೀಯ ಫಲಾನುಭವಿ ಪಟ್ಟಿಯಲ್ಲಿ ಸೇರಿಸಲಾಗುವುದು, ಅಂತಹ ರೈತರು ತಮ್ಮ ಸ್ವಯಂ ಘೋಷಣೆಯನ್ನು ಸಂಬದಿತ ನಮೂನೆಯಲ್ಲಿ ಪ್ರೂಟ್ ಪಿಎಂಕಿಸಾನ್ ಎನ್ನುವ ವಿಶಿಷ್ಟ ಗುರುತಿನ ಸಂಖ್ಯೆ, ಆಧಾರ್ ಸಂಖ್ಯೆ, ಅಥವಾ ಸರ್ವೆ ನಂಬರ್‌ಉಪಯೋಗಿಸಿಕೊAಡು ಸಲ್ಲಿಸಬೇಕು. ತದ ನಂತರ ರೈತರು ಯಾವುದಾದರು ಸರ್ಕಾರಿ ಸ್ವಾಮ್ಯದ ಕೇಂದ್ರಗಳಲ್ಲಿ ತಮ್ಮ ಭೌತಿಕ ಘೋಷಣೆ ಅಥವಾ ವಿದ್ಯುನ್ಮಾನ ಘೋಷಣೆಯನ್ನು ಸಲ್ಲಿಸಬೇಕು.
  • ಸಲ್ಲಿಸಿದ ಅರ್ಜಿಗಳನ್ನು ಸಬಂದಪಟ್ಟ ಕೃಷಿ ಅಧಿಕಾರಿಗಳಿಂದ ಪರಿಶೀಲಿಸಿ, ಕ್ರೂಢೀಕರಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ ಮತ್ತು ಈ ಪಟ್ಟಿಯನ್ನು ಭಾರತ ಸರ್ಕಾರದ ಪಿಎಮ್ ಕಿಸಾನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾದಲಾಗುತ್ತದೆ. ಈಗೇ ಆಯ್ಕೆಯಾದ ರೈತರ ಖಾತೆಗೆ ನೇರವಾಗಿ ಹಣ ಕಂತುಗಳಲ್ಲಿ ಸಂದಾಯವಾಗುತ್ತದೆ.

ಯೋಜನೆಯ ಸದುಪಯೋಗ ಪಡೆಯಿತ್ತಿರುವ ಫಲಾನುಭವಿಗಳ ವಿವರ

 

ಫಲಾನುಭವಿಗಳು

(1-12-2018 ರಿಂದ 31-03-2019)

ಫಲಾನುಭವಿಗಳು

(1-04-2019 ರಿಂದ 31-07-2019)

ಫಲಾನುಭವಿಗಳು

(1-08-2019ರಿಂದ 31-11-2019)

ಫಲಾನುಭವಿಗಳು

(1-12-2019ರಿಂದ 31-03-2020)

ಫಲಾನುಭವಿಗಳು

(1-04-2020 ರಿಂದ 31-07-2020)

 

ನೊಂದಾಯಿಸಿದ ರೈತರು (1-12-2018ರಿಂದ 

31-03-2019ರ ವರೆಗೆ)

4,50,01,040

4,41,90,256

4,30,22,143

3,88,51,131

3,75,60,930

ನೊಂದಾಯಿಸಿದ ರೈತರು(1-04-2019 ರಿಂದ 31-07-2019)

 

2,92,31,812

2,80,73,255

2,62,55,840

2,54,85,377

ನೊಂದಾಯಿಸಿದ ರೈತರು(1-08-2019ರಿಂದ 31-11-2019)

 

 

1,11,47,282

1,03,93,237

98,34,295

ನೊಂದಾಯಿಸಿದ ರೈತರು (1-12-2019ರಿಂದ 31-03-2020)

 

 

 

90,53,096

87,15,949

ನೊಂದಾಯಿಸಿದ ರೈತರು (1-04-2020 ರಿಂದ 31-07-2020)

 

 

 

 

21,53,782

ಒಟ್ಟು

4,05,01,040

7,34,22,068

8,22,42,680

8,45,53,3048

8,37,50,333

 

ಯೋಜನೆಯ ಫಲಾನುಭವಿಯಾಗಲು  ಬೇಕಾಗಿರುವ ಅರ್ಹತೆಗಳು

  1. ಯೋಜನೆಯ ಫಲಾನಯಭವಿ ರೈತರು ಕಡ್ಡಾಯವಾಗಿ 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರಬೇಕು
  2. ರೈತನ ಕುಟುಂಬದ ಯಾವ ಸದಸ್ಯರು ಮಾಜಿ ಅಥವಾ ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರಬಾರದು
  3. ರೈತ ಅಥವಾ ರೈತ ಕುಟುಂಬದಲ್ಲಿ ಯಾರೊಬ್ಬರೂ ನಿವೃತ್ತ ಅಥವಾ ಹಾಲಿ ಸರ್ಕಾರದ ಸೇವೆಯಲ್ಲಿರಕೂಡದು
  4. ರೈತ ಅಥವಾ ಯಾವ ಕುಟುಂಬಸ್ಥರು ರೂ. 10,000 ಸಾವಿರಕಿಂತ ಹೆಚ್ಚಿನ ಪಿಂಚಣಿದಾರರ ಪಟ್ಟಿಯಲ್ಲಿರಕೂಡದು
  5. ವೃತ್ತಿಪರರು ಮತ್ತು ವೃತಿಪರ ಸಂಸ್ಥೆಯಲ್ಲಿ ನೊಂದಾಯಿಸಿಕೊAಡು ಸದರಿ ವೃತ್ತಿಯನ್ನು ಕೈಗೊಂಡಿರಬಾರದು.

ಲೇಖನ:  ಗುಣಭಾಗ್ಯ* ಮತ್ತು ಶಿಲ್ಪಾ ವಿ. ಚೋಗಟಾಪುರ**,  ಸಹ ಸಂಶೋಧಕರು, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ವಲಯ-03, ಕೃಷಿ ಮಹಾವಿದ್ಯಾಲಯ ವಿಜಯಪುರ-586102

**ಕೃಷಿ ಹವಾಮಾನ ವಿಷಯ ತಜ್ಞರು, ಕೃಷಿ ವಿಜ್ಞಾನ ಕೇಂದ್ರ , ಕವಡಿಮಟ್ಟಿ (ಯಾದಗಿರ)