News

ರೈತರ ಖಾತೆಗೆ ಫಸಲ್ ಭೀಮಾ ಯೋಜನೆ ಹಣ ಜಮೆ- ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

05 January, 2021 6:06 AM IST By:

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2019 -20 ನೇ ಸಾಲಿನ ಮುಂಗಾರಿನ ಹಣ ಈಗಾಗಲೇ ಬಿಡುಗಡೆಯಾಗಿದ್ದು, ರೈತರ ಖಾತೆಗೆ ಜಮೆಯೂ ಆಗಿದೆ.

2019 20 ನೇ ಸಾಲಿನ ಮುಂಗಾರಿನ ಬೆಳೆಯಲ್ಲಿ ವಿಮೆ ಮಾಡಿಸಿದ ಹೆಸರು ಹಾಗೂ ಇನ್ನಿತರ ಬೆಳೆಗಳಿಗೆ ವಿಮೆ ಮಾಡಿಸಿದ ರೈತರು ಈಗ ಮನೆಯಲ್ಲಿಯೇ ಕುಳಿತು ನಿಮ್ಮ ಹಣ ಜಮೆಯಾಗಿದ್ದನ್ನು ನೋಡಿಕೊಳ್ಳಬಹುದು. ಇದಕ್ಕಾಗಿ ನೀವು ಬ್ಯಾಂಕಿಗೂ ಹೋಗಬೇಕಾಗಿಲ್ಲ, ನಿಮ್ಮ ಮೊಬೈಲಿನಲ್ಲಿಯೇ ಕ್ಷಣಾರ್ಧದಲ್ಲಿ ಚೆಕ್ ಮಾಡಿಕೊಳ್ಳಬಹುದು.

 ಈ ಬಾರಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಇನ್ನೊಂದು ವಿಶೇಷತೆ ಏನೆಂದರೆ ಈ ಬಾರಿ ಎಲ್ಲ ಮಾಹಿತಿಯನ್ನು ನೀಡಲಾಗಿದೆ, ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಟೈಪ್ ಮಾಡಿದರೆ ಸಾಕು ನಿಮ್ಮ ಯಾವ ಖಾತೆಗೆ ಫಸಲ್ ಬಿಮಾ ಯೋಜನೆ ಹಣ ಜಮಾ ಆಗಿದ್ದು, ಯಾವಾಗ ಜಮೆಯಾಗಿದ್ದು ಗೊತ್ತಾಗುತ್ತದೆ.

ಸ್ಟೇಟಸ್ ಚೆಕ್ ಮಾಡಿ:

ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ  ಎಂಬುದನ್ನು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.samrakshane.karnataka.gov.in/ ಅಥವಾ   SAMRAKSHANE-KARNATAKA :: Crop Insurance Application  ಮೇಲೆ ಕ್ಲಿಕ್  ಮಾಡಿದಾಗ ಲಿಂಕ್ ಒಪನ್ ಆಗುತ್ತದೆ. ವರ್ಷದ ಆಯ್ಕೆಯಲ್ಲಿ 2019-20 ಹಾಗೂ ಖಾರೀಫ್ ಅನ್ನು ಆಯ್ಕೆ ಮಾಡಿ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಕೆಳಗಡೆ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ನಿಮಗೆ ಮೂರು ಆಯ್ಕೆಗಳು ಬರುತ್ತವೆ ಒಂದು ಪ್ರೊಪೋಸಲ್ ನಂಬರ್, ಎರಡನೆಯದ್ದು ಮೊಬೈಲ್ ನಂಬರ್, ಹಾಗೂ ಮೂರನೆಯದ್ದು ಆಧಾರ್ ನಂಬರ್. ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ಮೊಬೈಲ್ ನಂಬ ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ನಿಮಗೆ  ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿ ಬರುತ್ತದೆ.