News

ನೈಸರ್ಗಿಕ ಕೃಷಿ ಮಾಡಿ; ಸರ್ಕಾರದ ಸಬ್ಸಿಡಿ ಬಿಡಿ: ರೈತ ರಾಜಶೇಖರ ನಿಂಬರಗಿ

29 December, 2023 3:49 PM IST By: Hitesh
ಕೋಟ್ಯಾಂತರ ರೂಪಾಯಿ ದುಡಿತಾರೆ ಪ್ರಗತಿಪರ ರೈತ ರಾಜಶೇಖರ ನಿಂಬರಗಿ

ರೈತರೆಂದರೆ ನಮ್ಮ ಪರಿಕಲ್ಪನೆಯಲ್ಲಿ ಬಡವ. ಆದರೆ, ರೈತರೂ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ದುಡಿಯಬಹುದು ಎನ್ನುವುದಕ್ಕೆ ನಾವು ಮತ್ತೊಂದು ನಿದರ್ಶನ ನೀಡುತ್ತಿದ್ದೇವೆ.

ರೈತರು ಸಹ ವಿಮಾನದಲ್ಲಿ ಸಂಚರಿಸಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದಕ್ಕೆ ಮತ್ತೊಂದು ನಿದರ್ಶನ ಎಂದರೆ

ಕರ್ನಾಟಕದ ವಿಜಯಪುರದ ಪ್ರಗತಿಪರ ರೈತ ರಾಜಶೇಖರ ನಿಂಬರಗಿ. ಅವರ ಕೃಷಿ ಯಶೋಗಾಥೆ ಇಲ್ಲಿದೆ.  

ವಿಜಯಪುರದ ರಾಜಶೇಖರ ನಿಂಬರಗಿ ಅವರು ನಿಂಬೆ ಕೃಷಿಯಿಂದಲೇ ಪ್ರಸಿದ್ಧಿ ಗಳಿಸಿದ್ದಾರೆ. ಸುಭಾಷ್‌ ಪಾಳೇಕರ್‌ 

ಅವರ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ರಾಜಶೇಖರ ಅವರು ಕೃಷಿ ಜಾಗರಣ ಕನ್ನಡದೊಂದಿಗೆ ಅವರ ಯಶಸ್ಸಿನ ಗುಟ್ಟುಗಳನ್ನು ಹಂಚಿಕೊಂಡಿದ್ದಾರೆ.

ರಾಜಶೇಖರ ನಿಂಬರಗಿ ಅವರು ನಿಂಬೆ ಕೃಷಿಯಿಂದಲೇ ಪ್ರಸಿದ್ಧಿ ಗಳಿಸಿದ್ದು, ಅವರ ಮಕ್ಕಳನ್ನೂ ಕೃಷಿ ಮಾಡುವಂತೆ ಪ್ರೇರೆಪಿಸಿದ್ದಾರೆ.

ಕೃಷಿ ಮಾಡುವ ರೈತರಲ್ಲಿ ಬಹುತೇಕ ರೈತರು ನಮ್ಮಂತೆ ನಮ್ಮ ಮಕ್ಕಳು ಕಷ್ಟ ಬೀಳುವುದು ಬೇಡ ಎಂದು ಆಶಿಸುತ್ತಾರೆ.

ಆದರೆ, ರಾಜಶೇಖರ ನಿಂಬರಗಿ ಅವರು ಅದಕ್ಕೆ ತದ್ವಿರುದ್ಧ.

ರಾಜಶೇಖರ ನಿಂಬರಗಿ ಅವರು ಅವರ ಮಕ್ಕಳನ್ನೂ ಕೃಷಿ ಮಾಡುವುದಕ್ಕೆ ಬಿಟ್ಟಿದ್ದು,

ಅವರಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಆದಾಯ ಬರುವಂತೆ ಮಾಡಿದ್ದಾರೆ.

ಅವರ ಮಕ್ಕಳೂ ಕೃಷಿ ಮಾಡುತ್ತಿದ್ದಾರೆ. ಕಡಿಮೆ ನೀರಿನಲ್ಲೂ ಹಣ್ಣು ತರಕಾರಿಗಳನ್ನು ಬೆಳೆಯುತ್ತಿದ್ದೇವೆ.

ಎಲ್ಲವನ್ನೂ ನೈಸರ್ಗಿಕ ಮಾದರಿಯಲ್ಲಿ ಬೆಳೆಯುತ್ತಿರುವುದರಿಂದ ಭೂಮಿ ಫಲವತ್ತತೆಯಿಂದ ಕೂಡಿದೆ ಎನ್ನುತ್ತಾರೆ ರಾಜಶೇಖರ ನಿಂಬರಗಿ ಅವರು

52 ಮಾದರಿಯ ಜವಾರಿ ಬೀಜ

ರಾಜಶೇಖರ ನಿಂಬರಗಿ ಅವರ ಮತ್ತೊಂದು ವಿಶೇಷವೆಂದರೆ ಅವರು 52 ಮಾದರಿಯ ಜವಾರಿ ಬೀಜವನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ ಈ 52 ಮಾದರಿಯ ಜವಾರಿ ಬೀಜಗಳನ್ನು ಅವರು ಇನ್ನುಳಿದ ರೈತರಿಗೂ ನೀಡುತ್ತಿದ್ದಾರೆ.

ಜೋಳ, ಹೆಸರು, ಅಲಸಂಧಿ, ಅಗಸಿ ಹಾಗೂ ಕಡ್ಲೆ ಸೇರಿದಂತೆ 52 ಮಾದರಿಯ ಜವಾರಿ ಬೀಜಗಳನ್ನು ಬಳಸುತ್ತಿದ್ದಾರೆ.

ನೈಸರ್ಗಿಕ ಕೃಷಿ ಕೈತುಂಬಾ ಆದಾಯ

ನಿಂಬರಗಿ ಅವರು ನೈಸರ್ಗಿಕ ಕೃಷಿ ಮಾಡುವ ಮೂಲಕ ಮನ್ನಣೆ ಗಳಿಸಿದ್ದಾರೆ.

ಅವರೇ ಹೇಳುವಂತೆ ಯಾವುದೇ ಹೈಬ್ರೀಡ್‌ ತಳಿಗಳನ್ನು ನಿಂಬರಗಿ ಅವರು ಕೃಷಿಯಲ್ಲಿ ಬಳಸುವುದಿಲ್ಲ.

ಯಾವುದೇ ಮಾದರಿಯ ರಾಸಾಯನಿಕ ಸಿಂಪಡಣೆಗಳನ್ನೂ ಬಳಸುವುದಿಲ್ಲ.

ಹೀಗಾಗಿ, ಅವರು ಕೃಷಿಯಲ್ಲಿ ಅತ್ಯುತ್ತಮವಾದ ಆದಾಯವನ್ನು ಗಳಿಸುತ್ತಿದ್ದಾರೆ.

ನೀರಲ್ಲದೆ ಬೇಸಾಯ ಮಾಡುವುದು ಹೇಗೆ ?

ಪ್ರಾಕೃತಿಕ ಹಾಗೂ ನೈಸರ್ಗಿಕ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಸಾವಯವ ಇಂಗಾಲ ಪ್ರಮಾಣ ಹೆಚ್ಚಳವಾಗುತ್ತದೆ.

ವಾತಾವರಣದಲ್ಲಿ 78 ಪ್ರತಿಶತ ನೀರು ಇದೆ. ಒಂದು ಕೆಜಿ ಮೆತ್ತನೆಯ ಮಣ್ಣು 6 ಲೀಟರ್‌ ನೀರನ್ನು ಹೀರಿಕೊಳ್ಳುತ್ತದೆ.

ವಾತಾವರಣದಲ್ಲಿರುವ ನೀರು ಉತ್ಕೃಷ್ಟವಾಗಿರುತ್ತದೆ.

ಪ್ರಗತಿಪರ ರೈತ ರಾಜಶೇಖರ ನಿಂಬರಗಿ

ಈ ರೀತಿ ಕೃಷಿ ಮಾಡುವುದರಿಂದ ಶುದ್ಧ ಹಾಗೂ ವಾತಾವರಣದ ನೀರು ಬಳಸಬಹುದು.

ರಾಸಾಯನಿಕಗಳನ್ನು ಬಳಸುವುದರಿಂದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.

ಮಳೆ ಬಂದರೂ, ಬರದೇ ಇದ್ದರೂ ಸಮಸ್ಯೆ ಎನ್ನುವಂತಹ ವಾತಾವರಣ ಇದೆ.

ಅಲ್ಲದೇ ರಾಸಾಯನಿಕ ಸಿಂಪಡಣೆಗಳನ್ನು ಬಳಸುವುದು ಕೃಷಿಗೆ ಮಾರಕವಾಗುತ್ತಿದೆ.

ನಾವು ಆ ತಪ್ಪುಗಳನ್ನು ಮಾಡುತ್ತಿಲ್ಲ. ನಮ್ಮ ಹೊಲದಲ್ಲಿ ನೀರು ನಿಲ್ಲದಂತೆ ಹಿಂಗುಗಳನ್ನು ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಅವರು.

ರಾಸಾಯನಿಕ ಬಳಸಿದರೆ ಕೃಷಿ ಹಾಳು

ರಾಸಾಯನಿಕಗಳನ್ನು ಬಳಸಿದರೆ, ಕೃಷಿ ಹಾಳಾಗುತ್ತದೆ ಎನ್ನುವುದು ರಾಜಶೇಖರ ನಿಂಬರಗಿ ಅವರ ಮಾತು.

ಕೃಷಿಯಲ್ಲಿ ರಾಸಾಯನಿಕ ಸಿಂಪಡಣೆಗಳನ್ನು ಬಳಸುವುದರಿಂದಾಗಿ ಸೂಕ್ಷ್ಮ ಜೀವಿಗಳು ಸಾವನ್ನಪ್ಪುತ್ತವೆ.

ಅಲ್ಲದೇ ಎರೆಹುಳು ಸೇರಿದಂತೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸೂಕ್ಷ್ಮ ಜೀವಿಗಳು ಸಾವನ್ನಪ್ಪಿ ಮಣ್ಣು

ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ ಎನ್ನುತ್ತಾರೆ ರಾಜಶೇಖರ ನಿಂಬರಗಿ ಅವರು.

ಮಳೆಕೊಯ್ಲು ಮಾಡುವುದೇ ಬೇಡ   

ನಾವು ನೈಸರ್ಗಿಕ ಕೃಷಿಯನ್ನು ಅನುಸರಿಸುವುದರಿಂದ ಮಳೆಕೊಯ್ಲು ಮಾಡುವ ಪ್ರಮೇಯವೂ ಬರುವುದಿಲ್ಲ.

ನೈಸರ್ಗಿಕ ಕೃಷಿ ಮಾದರಿಯನ್ನು ಅನುಸರಿಸಿದರೆ, ನೀರು ಭೂಮಿಯಲ್ಲೇ ಹಿಂಗುತ್ತದೆ.

ನೈಸರ್ಗಿಕ ಕೃಷಿ ಪದ್ಧತಿ ಎನ್ನುವುದು ಸಕಲ ಜೀವಗಳಿಗೂ ಒಳಿತು ಬಯಸುವ ಕೃಷಿಯಾಗಿದೆ ಎನ್ನುವುದು ರಾಜಶೇಖರ ಅವರ ಮಾತು.

ರೈತರಿಗೆ ಸಸಿಗಳನ್ನು ನೀಡುತ್ತಿರುವ ರಾಜಶೇಖರ ನಿಂಬರಗಿ (ಎಡದಿಂದ ಎರಡನೇ ಚಿತ್ರ)

ಸಬ್ಸಿಡಿ ತೆಗೆದುಕೊಳ್ಳದೆ ರಾಜನಂತೆ ಬದುಕ್ತೀನಿ

ನಾನು ಸರ್ಕಾರದಿಂದ ನೀಡುವ ಯಾವುದೇ ಸಬ್ಸಿಡಿಯನ್ನು ಪಡೆಯುವುದಿಲ್ಲ.

ನಾನೇ ದುಡಿದು ರಾಜನಂತೆ ಬದುಕ್ತೀನಿ ಎನ್ನುವುದು ರಾಜಶೇಖರ ನಿಂಬರಗಿ ಅವರ ಮಾತು.

ನಾವು ರೈತರು ಶ್ರಮವಹಿಸಿ ದುಡಿದರೆ ಯಾವುದೇ ಸಬ್ಸಿಡಿಯನ್ನು ಪಡೆಯದೆಯೂ ಕೃಷಿಯಲ್ಲಿ ಕೈತುಂಬಾ

ಆದಾಯವನ್ನು ಗಳಿಸಬಹುದು ಎನ್ನುವುದು ಅವರ ವಿಶ್ವಾಸದ ಮಾತು.