ಆಲೂಗಡ್ಡೆ ತರಕಾರಿಗಳಲ್ಲಿ ತುಂಬಾ ವಿಶೇಷವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಲೂಗಡ್ಡೆ ಬೆಲೆಗಳು ತೀರಾ ಕಡಿಮೆಯಿರುವುದರಿಂದ ಉತ್ಪಾದಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ದೇಶದ ಹಲವೆಡೆ ಆಲೂಗಡ್ಡೆ ಸಗಟು ದರವು ಶೇ. 50 ರಷ್ಟು ಇಳಿಕೆ ಆಗಿದ್ದು, ಕೆಜಿಗೆ 5 ರಿಂದ 6 ರ ಆಸುಪಾಸಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಇರುವ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಶನಿವಾರ ಪ್ರತಿ ಕೆಜಿಗೆ ಆಲೂಗಡ್ಡೆಯ ದರ ಕನಿಷ್ಟ 13 ರಿಂದ 15 ರೂಪಾಯಿಗೆ ಇತ್ತು. ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಆಲೂಗಡ್ಡೆ ಸಿಗುತ್ತಿದೆ ಆದರೆ ಆಲೂಗಡ್ಡೆ ಬೆಳೆದ ರೈತರಿಗೆ ಉತ್ಪಾದನಾ ವೆಚ್ಚವೂ ಸಿಗದಂತಾಗಿದೆ.
ಆಲೂಗಡ್ಡೆ ಬೆಳೆಗಾರರಿಗೆ ಉತ್ಪಾದನಾ ವೆಚ್ಚವೂ ಸಿಗುವುದು ಕಷ್ಟವಾಗುತ್ತಿದೆ. ಆಹಾರ ಸಂಸ್ಕರಣೆ ಸಚಿವಾಲಯದ ಅಂಕಿ ಅಂಶದ ಪ್ರಕಾರ, ಮಾರ್ಚ್ 20ಕ್ಕೆ ಹೋಲಿಸಿದರೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಕರ್ನಾಟಕ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಬಿಹಾರರಾಜ್ಯಗಳಲ್ಲಿ ಆಲೂಗಡ್ಡೆ ಬೆಳೆಯುವ 60 ಪ್ರಮುಖ ಪ್ರದೇಶಗಳಲ್ಲಿ 25 ರಷ್ಟು ಇಳಿಕೆಯಾಗಿದೆ.
ಉತ್ತರ ಪ್ರದೇಶದ ಸಂಬಲ್ಪುರ ಮತ್ತು ಗುಜರಾತ್ ನ ದಿಶಾದಲ್ಲಿ ಆಲೂಗಡ್ಡೆ ಬೆಲೆ ಮೂರು ವರ್ಷಗಳ ಸರಾಸರಿ ಗಿಂತ ಕಡಿಮೆ ಇದೆ, ಅಂದರೆ 6 ರೂಪಾಯಿ ಗಳು, ಒಂದು ವರ್ಷದ ಹಿಂದೆ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಆಲೂಗಡ್ಡೆ ಬೆಲೆ ಕೆಜಿಗೆ 8-9 ರೂಪಾಯಿಗಳು, ಇತರ ರಾಜ್ಯಗಳಲ್ಲಿ ಕೆಜಿಗೆ 10 ರೂ., ಸಗಟು ಮಾರುಕಟ್ಟೆಗಳು 23 ರೂಪಾಯಿಗೆ ಮಾರಾಟವಾಗುತ್ತಿದೆ.
ಈ ವರ್ಷ ಆಲೂಗಡ್ಡೆ ಬೆಳೆ ಉತ್ತಮವಾಗಿದೆ. ಮಂಡಿಗೆ ಆವಕ ಹೆಚ್ಚಾಗಿದ್ದು, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆಲೂಗಡ್ಡೆ ಸಿಗುತ್ತಿದೆ ಆದರೆ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ತಿಳಿಸಿದ್ದಾರೆ.