News

ಅಂಚೆ ಉಳಿತಾಯ ಖಾತೆಯಲ್ಲಿ 500 ರೂಪಾಯಿ ಇರುವುದು ಕಡ್ಡಾಯ

01 December, 2020 6:30 AM IST By:

ಹಲವು ಬ್ಯಾಂಕುಗಳ ಮಾದರಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ ಇನ್ನು ಮುಂದೆ ಕನಿಷ್ಠ ಬ್ಯಾಲೆನ್ಸ್‌ 500 ರೂಪಾಯಿ ಇರಲೇಬೇಕು. ಉಳಿತಾಯ ಖಾತೆಯಲ್ಲಿ ಇನ್ನು ಮುಂದೆ ಕನಿಷ್ಠ 500ರೂ. ಇಡದಿದ್ದರೆ ಖಾತೆ ನಿಷ್ಕ್ರಿಯಗೊಳಿಸಲು ಅಂಚೆ ಇಲಾಖೆಯು ನಿಯಮ ಜಾರಿಗೊಳಿಸಿದೆ.

ಪಿಂಚಣಿ ಒಳಗೊಂಡಂತೆ ಯಾವುದೇ ಉದ್ದೇಶಕ್ಕಾಗಿ ಖಾತೆ ತೆರೆದರೂ ಈ ನಿಯಮ ಅನ್ವಯವಾಗುತ್ತದೆ. ಈಗಾಗಲೇ ಖಾತೆ ಹೊಂದಿರುವವರು ಹಾಗೂ ಹೊಸ ಖಾತೆದಾರರು ಮಿನಿಮಮ್‌ ಬ್ಯಾಲೆನ್ಸ್‌ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಖಾತೆ ನಿರ್ವಹಣೆ ವೆಚ್ಚವೆಂದು 100 ರೂ. ಶುಲ್ಕ ಕಡಿತ ಮಾಡಲಾಗುವುದು.

ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವ ಎಲ್ಲಾ ಜನರು ಡಿಸೆಂಬರ್ 11ರೊಳಗೆ ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್‌ ನಂತರ ಬ್ಯಾಂಕ್‌ಗಳಲ್ಲಿ ಹಣದ ವಹಿವಾಟು ತಗ್ಗಿದ ಹಿನ್ನೆಲೆಯಲ್ಲಿ ಹಾಗೂ ಎಸ್‌ಬಿ ಖಾತೆಗಳನ್ನು ನಿರ್ವಹಣೆ ಮಾಡಲು ಈ ನಿಯಮ ಜಾರಿಗೆ ತರಲಾಗಿದೆ.

ಬ್ಯಾಂಕುಗಳಲ್ಲಿ ಎಸ್‌ಬಿ ಖಾತೆಗೆ ಕನಿಷ್ಠ ಮೊತ್ತ ಒಂದು ಸಾವಿರ ರೂ. ಕಡ್ಡಾಯ ಮಾಡಲಾಗಿದೆ. ಅದರಂತೆ ಅಂಚೆ ಇಲಾಖೆಯೂ ಸಹ ಕನಿಷ್ಟ ಬ್ಯಾಲೆನ್ಸ್ 500 ರೂಪಾಯಿ ಇಟ್ಟಕೊಳ್ಳುವಂತೆ ಸೂಚಿಸಿದೆ.

ಖಾತೆಯಲ್ಲಿ ಹಣ ಇಲ್ಲದಿದ್ದರೆ ಅಂತಹ ಖಾತೆ ತನ್ನಿಂತಾನೇ ಅಂತ್ಯವಾಗುತ್ತದೆ. ಅಂಚೆ ಕಚೇರಿ ಉಳಿತಾಯ ಖಾತೆಗೆ ಶೇ. 4ರಷ್ಟು ಬಡ್ಡಿ ನೀಡುತ್ತಿದ್ದು, ವಿನಿಮಯ ಬ್ಯಾಲೆನ್ಸ್‌ ಕಾಯ್ದುಕೊಳ್ಳದವರು ನಿರ್ವಹಣೆ ಶುಲ್ಕ ಭರಿಸಬೇಕು ಎಂದು ಹೇಳಲಾಗಿದೆ.