News

Shocking News: Fix Deposit ಇಟ್ಟಿದ್ದ 1 ಕೋಟಿ ಹಣವನ್ನ IPL ಬೆಟ್ಟಿಂಗ್‌ಗೆ ಬಳಸಿದ ಪೋಸ್ಟ್ ಮಾಸ್ಟರ್!

25 May, 2022 3:35 PM IST By: Kalmesh T
Post Master miss used the Rs 1 crore customers had in Fix Deposit

ಸುಮಾರು 24 ಕುಟುಂಬಗಳು ಪೋಸ್ಟ್ ಫಿಕ್ಸ್ ಡೆಪಾಸಿಟ್ನಲ್ಲಿ ಇಟ್ಟಿದ್ದ 1 ಕೋಟಿ ರೂ ಮೊತ್ತದ ಹಣವನ್ನು ಪೋಸ್ಟ್ ಮಾಸ್ಟರ್ ಒಬ್ಬ ತನ್ನ IPL ಬೆಟ್ಟಿಂಗ್ ಚಟಕ್ಕೆ ಕಳೆದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿರಿ: ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಗ್ರಾಹಕರಿಗೆ ಒತ್ತಾಯವಾಗಿ "ಸೇವಾ ಶುಲ್ಕ" ವಿಧಿಸುವ ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ ನೀಡಲು DOCA ಜೂನ್ 2ರಂದು ಸಭೆ!

ಈ ವ್ಯಕ್ತಿ ಅಂಚೆ ಕಚೇರಿಯಲ್ಲಿ ಇಟ್ಟಿದ್ದ ಫಿಕ್ಸ್ ಡೆಪಾಸಿಟ್ನ್ನು ತೆರೆಯಲು ಬಂದವರಿಗೆ ನೈಜ ಪಾಸ್‌ಬುಕ್ ನೀಡಿದ್ದರೂ, ಖಾತೆ ಸೃಷ್ಟಿಸದೆ ಅವರ ಹಣವನ್ನು ಗುಳುಂ ಮಾಡಿದ್ದಾರೆ.

ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಸಿಲುಕಿದ ಪೋಸ್ಟ್ ಮಾಸ್ಟರ್ ಒಬ್ಬ, ಎಷ್ಟೊ ಕುಟುಂಬಗಳ ಶ್ರಮದ ಉಳಿತಾಯದ ದುಡ್ಡನ್ನು ಗುಳುಂ ಮಾಡಿದ್ದಾನೆ.

IPL ಕ್ರಿಕೆಟ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ಮಧ್ಯಪ್ರದೇಶದ ಈ ಪೋಸ್ಟ್ ಮಾಸ್ಟರ್, ಸುಮಾರು 24 ಕುಟುಂಬಗಳ 1 ಕೋಟಿ ರೂಪಾಯಿಗೂ ಅಧಿಕ ಉಳಿತಾಯದ ಹಣವನ್ನು ತನ್ನ ಚಟಕ್ಕೆ ಖಾಲಿ ಮಾಡಿದ್ದಾನೆ.

7ನೇ ವೇತನ ಆಯೋಗದಿಂದ ಗುಡ್‌ನ್ಯೂಸ್‌; ಸರ್ಕಾರಿ ನೌಕರರ ವೇತನ ಖಾತೆಗೆ ಬರಲಿದೆ 2 ಲಕ್ಷ ರೂಪಾಯಿ..! ಏನಿದು ತಿಳಿಯಿರಿ

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಉಪ ಅಂಚೆ ಕಚೇರಿಯಲ್ಲಿ ಈ ಕುಟುಂಬಗಳು ನಿಶ್ಚಿತ ಠೇವಣಿಯಲ್ಲಿ ಹಣ ಇರಿಸಿದ್ದರು. ಬೀನಾ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಶಾಲ್ ಅಶಿರ್ವಾರ್ ಎಂಬಾತನನ್ನು ಮೇ 20ರಂದು ಬೀನಾ ಸರ್ಕಾರ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ.

ಆತ ತಾನು ಮಾಡಿದ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಪೋಸ್ಟ್ ಮಾಸ್ಟರ್, ನಕಲಿ ಎಫ್‌ಡಿ ಖಾತೆಗಳಿಗೆ ನೈಜ ಪಾಸ್‌ಬುಕ್‌ಗಳನ್ನು ನೀಡಿದ್ದ.

ಇಡೀ ಹಣವನ್ನು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಚೆಲ್ಲಿದ್ದ. ಕಳೆದ ಎರಡು ವರ್ಷಗಳಿಂದ ಆತ ಈ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

"ಬಂಧಿತ ಉಪ ಪೋಸ್ಟ್ ಮಾಸ್ಟರ್ ವಿಶಾಲ್ ಅಶಿರ್ವಾರ್ ವಿರುದ್ಧ ಸದ್ಯಕ್ಕೆ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 408 (ವಿಶ್ವಾಸ ದ್ರೋಹ) ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಮುಂದಿನ ವಿಚಾರಣೆಯಿಂದ ಹೊರಗೆ ಬರಲಿರುವ ಮಾಹಿತಿ ಆಧಾರದಲ್ಲಿ ಮತ್ತಷ್ಟು ಸೆಕ್ಷನ್‌ಗಳನ್ನು ಇದಕ್ಕೆ ಸೇರಿಸುವ ಸಾಧ್ಯತೆ ಇದೆ" ಎಂದು ಬೀನಾ-ಜಿಆರ್‌ಪಿ ಪೊಲೀಸ್ ಠಾಣೆ ಉಸ್ತುವಾರಿ ಅಜಯ್ ಧುರ್ವೆ ತಿಳಿಸಿದ್ದಾರೆ.

ಬೀನಾ ಅಂಚೆ ಕಚೇರಿಗೆ ವರ್ಗಾವಣೆ ಮಾಡುವುದಕ್ಕೂ ಮುನ್ನ ಆತ ಸಾಗರ್ ಜಿಲ್ಲೆಯ ಖಿಮ್ಲಸಾದಲ್ಲಿನ ಉಪ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಅಲ್ಲಿ ಕೂಡ ಹಣಕಾಸು ವಹಿವಾಟಿನಲ್ಲಿ ಅಕ್ರಮ ಎಸಗಿದ್ದರಿಂದ ಆತನನ್ನು ಅಮಾನತು ಮಾಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿವೃತ್ತರು, ವೃದ್ಧರು, ಮಕ್ಕಳ ಮದುವೆಗೆಂದು ಹಣ ಕೂಡಿಟ್ಟಿದ್ದವರು ಹೀಗೆ ಹತ್ತಾರು ಮಂದಿ ತಮ್ಮ ಜೀವಮಾನದ ದುಡಿಮೆಯ ಲಕ್ಷಾಂತರ ರೂಪಾಯಿ ಹಣವನ್ನು ಭವಿಷ್ಯಕ್ಕಾಗಿ ಅಂಚೆ ಕಚೇರಿಯಲ್ಲಿ ಇರಿಸಿದ್ದರು.

ಆದರೆ ಅವರೆಲ್ಲರ ಹಣವನ್ನೂ ಈತ ಬೆಟ್ಟಿಂಗ್ ಮೇಲೆ ಸುರಿದಿದ್ದಾನೆ. ಇದರಿಂದ ಜನರು ಕಂಗಾಲಾಗಿದ್ದಾರೆ.