News

“ಜನಸಂಖ್ಯೆ ಹೆಚ್ಚುತ್ತಿದ್ದು, ಆಹಾರೋತ್ಪಾದನೆ ಮತ್ತು ಕೃಷಿ ಭೂಮಿ ಕಡಿಮೆಯಾಗುತ್ತಿದೆ”- ರಾಜೇಶ್‌ ಅಗರವಾಲ್‌!

13 July, 2022 6:14 PM IST By: Kalmesh T
ಕೃಷಿ ಜಾಗರಣ ತಂಡದ ಪರವಾಗಿ ಐಐಎಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಗರವಾಲ್‌ ಅವರನ್ನು ಸಸಿ ನೀಡಿ ಸ್ವಾಗತಿಸಲಾಯಿತು

ಇತ್ತೀಚಿಗೆ ನಟ ಅಜಯ್‌ ದೇವಗನ್‌ ಬ್ರಾಂಡ್‌ ಅಂಬಾಸಿಡರ್‌ ಆದ ಐಐಎಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಗರವಾಲ್‌ ಮಾತನಾಡಿ, “ಆಧುನಿಕತೆಯಿಂದಾಗಿ ಕೃಷಿಭೂಮಿ ಮತ್ತು ಆಹಾರೋತ್ಪಾದನೆ ಕಡಿಮೆಯಾಗುತ್ತಿದೆ. ಇದು ಮುಂದೆ ಜಾಗತಿಕ ಮಟ್ಟದಲ್ಲಿ ಸಮಸ್ಯೆ ಉಂಟು ಮಾಡಲಿದೆ” ಎಂದು ಹೇಳಿದರು.

ಇದನ್ನೂ ಓದಿರಿ: “ರೈತರ ಆದಾಯ ದುಪ್ಪಟ್ಟು ಮಾಡುವತ್ತ ಸರ್ಕಾರ ಗಮನಹರಿಸಬೇಕು”- ಕಲ್ಯಾಣ ಗೋಸ್ವಾಮಿ

ಕೃಷಿ ಜಾಗರಣ ಮಾಧ್ಯಮದ ದೆಹಲಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಭಾರತದ ಜನಸಂಖ್ಯೆ ಹೆಚ್ಚುತ್ತಲೆ ಇದೆ. ಇದನ್ನು ಪರಿಗಣಿಸಿದಾಗ ಅದಕ್ಕೆ ಅನುಗುಣವಾಗಿ ಕೃಷಿ ಭೂಮಿಯನ್ನು ಲೆಕ್ಕ ಹಾಕಿದರೆ ತುಂಬಾ ಕಡಿಮೆಯಾಗುತ್ತಿದೆ.

ಕೃಷಿ ಜಾಗರಣ ಮತ್ತು ಎಎಫ್‌ಸಿ ಇಂಡಿಯಾ ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು..

ಕೃಷಿ ಜಾಗರಣ ಆಯೋಜಸಿದ್ದ ಕಾರ್ಯಕ್ರಮದಲ್ಲಿ ರಾಜೇಶ್‌ ಅಗರವಾಲ್‌ ಮಾತನಾಡುತ್ತಿರುವುದು

ಇದರಿಂದಾಗಿ ಆಹಾರೋತ್ಪಾದನೆ ಕೂಡ ಕಡಿಮೆ ಆಗುತ್ತಿದೆ. ಇದು ನಿಜಕ್ಕೂ ಇನ್ನೂ ಕೆಲವೇ ವರ್ಷಗಳಲ್ಲಿ ಬಹುದೊಡ್ಡ ಜಾಗತಿಕ ಸಮಸ್ಯೆಯಾಗಿ ಮಾರ್ಪಡಲಿದೆ ಎಂದು ಹೇಳಿದರು.

ನಾವು ಎಷ್ಟೇ ಸಾವಯವ ಕೃಷಿಯ ಸಲಹೆ ನೀಡಿದರೂ ರೈತನಿಗೆ ಒಂದಷ್ಟು ಔಷಧಿಗಳು ಸಿಂಪಡಣೆ ಅನಿವಾರ್ಯವಾಗಿದೆ. ತುರ್ತು ಪರಿಹಾರಗಳಿಗೆ ರಾಸಾಯನಿಕಯುಕ್ತ ಔಷಧಿಗಳು ಬೇಕೆ ಬೇಕು.

“ತಂತ್ರಜ್ಞಾನ ಎಷ್ಟೇ ಮುಂದುವರೆದರೂ ರೊಟ್ಟಿಯನ್ನು ಗೂಗಲ್‌ನಿಂದ ಡೌನ್ಲೋಡ್ ಮಾಡಿಕೊಳ್ಳಲಾಗುವುದಿಲ್ಲ” ಪ್ರೊ. ಆಂಚಲ್ ಅರೋರಾ

ಆದರೆ, ಅವುಗಳನ್ನು ಬಳಸುವ ಪ್ರಮಾಣವನ್ನು ಪರಿಣಿತರಿಂದ ತಿಳಿದುಕೊಂಡು ಬಳಸುವ ಮೂಲಕ ಅನವಶ್ಯಕ ರಾಸಾಯನಿಕ ಬಳಸುವುದನ್ನು ಬಿಡಬೇಕು ಎಂದರು.

ರೈತರು ಎಲ್ಲ ವರ್ಗದ ದುಡಿಮೆಗಾರರಿಗಿಂತ ವಿಭೀನ್ನವಾಗಿ ದುಡಿಯುತ್ತಿರುವವರು. ಉದಾಹರಣೆ ಎಂದರೆ ನಾವೆಲ್ಲ ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರುಆಟ ಮಾಡುತ್ತೇವೆ.

ಆದರೆ, ರೈತರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ, ಔಷಧಿ, ಕುಂಠಿ-ಕೂರಿಗೆಗಳನ್ನು ಹೆಚ್ಚಿನ ಬೆಲೆಯಲ್ಲಿ ಕೊಳ್ಳುತ್ತಾನೆ ಮತ್ತು ಬೆಳೆದ ನಂತರ ತನ್ನ ಬೆಳೆಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾನೆ.

“ಯಶಸ್ಸನ್ನು ಪಡೆಯವುದು ಹೇಗೆ ಎಂಬುದರ ಕುರಿತು ಪ್ರಸಿದ್ಧ ವ್ಯಕ್ತಿ ಟೆಫ್ಲಾ ಕಿಂಗ್ ಕೈಲಾಶ್ ಸಿಂಗ್ ಮಾತುಗಳು..!

ಕೃಷಿ ಜಾಗರಣ ಆಯೋಜಸಿದ್ದ ಕಾರ್ಯಕ್ರಮದಲ್ಲಿ ರಾಜೇಶ್‌ ಅಗರವಾಲ್‌ ಮಾತನಾಡುತ್ತಿರುವುದು

ಇದಕ್ಕಾಗಿಯೇ ರೈತ ನಮ್ಮೆಲ್ಲರ ಅನ್ನದಾತ ಎಂದು ನಾವೆಲ್ಲ ಗೌರವ ನೀಡುತ್ತೇವೆ ಎಂದರು.

ಯಾವುದೇ ಕೆಲಸವನ್ನ ಮಾಡಿದರೂ ಶ್ರದ್ಧೆ ಮತ್ತು ನಂಬಿಕೆಯಿಂದ ಮಾಡಬೇಕು ಇದು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ತಿಳಿಸಿದರು.

ದೇಶದಾದ್ಯಂತ ಐಐಎಲ್‌ ಕಂಪನಿಯ ಉತ್ಪನ್ನಗಳು ದೊರೆಯುತ್ತವೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾವು ಕೂಡ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಕೃಷಿ - ರೈತ ಸಮುದಾಯದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಚರ್ಚೆ! 

ನಂತರ ಮಾತನಾಡಿದ ಕೃಷಿ ಜಾಗರಣ ಮಾಧ್ಯಮದ ಸಂಸ್ಥಾಪಕ ಸಂಪಾದಕರಾದ ಎಂ.ಸಿ, ಡೊಮೆನಿಕ್‌ ಅವರು ಕೃಷಿ ಜಾಗರಣದ ಒಟ್ಟಾರೆ ಕಾರ್ಯಗಳನ್ನು ಅತಿಥಿಗಳಿಗೆ ಮನದಟ್ಟು ಮಾಡಿದರು.

ಅತಿಥಿಗಳಾಗಿ ಆಗಮಿಸಿದ್ದ Insecticides India Limited ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಅಗರವಾಲ್‌ ಅವರನ್ನು ಸಸಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ಕೃಷಿ ಜಾಗರಣ ತಂಡದೊಂದಿಗೆ ಅತಿಥಿಗಳಾದ ರಾಜೇಶ್‌ ಅಗರವಾಲ್‌

ಕೃಷಿ ಜಾಗರಣದ ಸಿಒಒ ಡಾ. ಪಿ.ಕೆ. ಪಂಥ ವಂದಣಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಜಾಗರಣದ ಮಾಧ್ಯಮದ ನಿರ್ದೇಶಕಿ ಶೈನಿ ಡೊಮೆನಿಕ್‌, ಕಂಟೆಂಟ್‌ ಹೆಡ್‌ ಸಂಜಯ್‌ ಕುಮಾರ, ಪಂಕಜ್‌ ಕನ್ಹಾ, ನಿಶಾಂತ ತಾಕ್‌ ಹಾಗೂ ಕೃಷಿ ಜಾಗರಣ ತಂಡ ಉಪಸ್ಥಿತರಿದ್ದರು.

ಕೃಷಿ ಜಾಗರಣ ತಂಡದೊಂದಿಗೆ ಅತಿಥಿಗಳಾದ ರಾಜೇಶ್‌ ಅಗರವಾಲ್‌
ಕೃಷಿ ಜಾಗರಣ ಮಾಧ್ಯಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಐಐಎಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಗರವಾಲ್‌ ಅವರನ್ನು ಸಂದರ್ಶನ ಮಾಡಲಾಯಿತು. ಕೃಷಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕೃಷಿ ಜಾಗರಣದ ಕಚೇರಿಯಲ್ಲಿ ಅತಿಥಿ ಐಐಎಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಗರವಾಲ್‌