News

PM YASASVI 2022: ಪಿಎಂ ಯುವ ಸಾಧಕ ವಿದ್ಯಾರ್ಥಿ ವೇತನ ಪ್ರಶಸ್ತಿಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆಯಿರಿ

04 August, 2022 10:57 AM IST By: Kalmesh T
PM YASASVI 2022: Call for PM Yuva Sadhak Scholarship Award!

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಯಶಸ್ವಿ (YASASVI)ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದ್ದು, 9 ಮತ್ತು 11ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿರಿ: ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಉಡುಗೊರೆ; ಈ ಯೋಜನೆಯಡಿ ದೊರೆಯಲಿದೆ ₹1.50 ಲಕ್ಷ! ಯಾರು ಅರ್ಹರು ಗೊತ್ತೆ?

PM YASASVI-2022: 2022ನೇ ಸಾಲಿನ ಪ್ರಧಾನ ಮಂತ್ರಿ ಯುವ ಸಾಧಕ ವಿದ್ಯಾರ್ಥಿ ವೇತನ ಪ್ರಶಸ್ತಿ ಯಶಸ್ವಿ (YASASVI) ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಏಜನ್ಸಿ (NTA)ಪ್ರಕಟಣೆ ಹೊರಡಿಸಿದೆ.

ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಮತ್ತುಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜುಲೈ 27 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 26, ರಾತ್ರಿ 11:50 ರವರೆಗೆ ಅವಕಾಶ ನೀಡಲಾಗಿದೆ.

"ಪರೀಕ್ಷೆಯ ಪಠ್ಯಕ್ರಮ, ಅರ್ಹತೆ, ಗುರುತಿಸಲಾದ ಶಾಲೆಗಳ ಪಟ್ಟಿ, ಪರೀಕ್ಷೆಯ ನಗರಗಳು, ಪ್ರಮುಖ ದಿನಾಂಕಗಳು, ಇತ್ಯಾದಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://yet.nta.ac.in  ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಎನ್‌ಟಿಎ ಮಾಹಿತಿ ನೀಡಿದೆ.

ಪಡಿತರದಾರರ ಗಮನಕ್ಕೆ: ಸೆಪ್ಟೆಂಬರ್‌ನಿಂದ ಸ್ಥಗಿತಗೊಳ್ಳಲಿದೆಯಾ ಉಚಿತ ರೇಷನ್‌ ವಿತರಣೆ?

ಯಾರು ಈ ವಿದ್ಯಾರ್ಥಿ ವೇತನ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು

9 ಮತ್ತು 11 ನೇ ತರಗತಿಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇತರೆ ಹಿಂದುಳಿದ ವರ್ಗ (OBC),ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು (DNT/SNT)ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

* ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತೀಯ ಪ್ರಜೆಗಳಾಗಿರಬೇಕು.

* ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗ (EBC), ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು (DNT/SNT) ವರ್ಗಕ್ಕೆ ಸೇರಿದವರಾಗಿರಬೇಕು.

* ವಿದ್ಯಾರ್ಥಿಗಳು ಎನ್‌ಟಿಎ ಗುರುತಿಸಲ್ಪಟ್ಟ 'ಉನ್ನತ ದರ್ಜೆಯ ಶಾಲೆಗಳಲ್ಲಿ' ಓದುತ್ತಿರಬೇಕು.

* 2021-22 ರಲ್ಲಿ 8 ನೇ ತರಗತಿ ಮತ್ತು 10 ನೇ ತರಗತಿ ಉತ್ತೀರ್ಣರಾಗಿರಬೇಕು.

* ಎಲ್ಲಾ ಮೂಲಗಳಿಂದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಹೆಚ್ಚಿರಬಾರದು.

* 9ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 01-04-2006 ರಿಂದ 31-03-2010 ದಿನಾಂಕಗಳ ನಡುವೆ ಜನಿಸಿರಬೇಕು.

* 11 ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 01-04-2004 ರಿಂದ 31-03-2008 ದಿನಾಂಕಗಳ ನಡುವೆ ಜನಿಸಿರಬೇಕು.

EPS ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸುದ್ದಿ: ಕನಿಷ್ಠ ಪಿಂಚಣಿ-1995ರಲ್ಲಿ ಮಹತ್ವದ ಬದಲಾವಣೆ!

* ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ.

* ಸೆಪ್ಟೆಂಬರ್ 11 ರಂದು ನಿಗದಿಪಡಿಸಲಾದ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

* ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆಗಳ (MCQ) ಸ್ವರೂಪದಲ್ಲಿರುತ್ತದೆ.

* ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಈ ನಾಲ್ಕು ವಿಷಯಗಳ ಮೇಲೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

* ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, 3-ಗಂಟೆಗಳ ಕಾಲಾವಕಾಶವಿರುತ್ತದೆ.

* ಒಟ್ಟು 400 ಅಂಕಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ .

* ಈ ಪ್ರರೀಕ್ಷೆಗೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ.

* 9 ನೇ ತರಗತಿ ವಿದ್ಯಾರ್ಥಿಗಳಿಗೆ 8 ನೇ ತರಗತಿಯ NCERT ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ.

* 11 ನೇ ತರಗತಿಯ ವಿದ್ಯಾರ್ಥಿಗಳಿಗೆ 10 ನೇ ತರಗತಿಯ ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆಗಳಿರುತ್ತವೆ.

ದೇಶದಾದ್ಯಂತ ಗುಡುಗು-ಮಿಂಚಿನ ಸಮೇತ ಭಾರೀ ಮಳೆ ಸೂಚನೆ; ಹವಾಮಾನ ಇಲಾಖೆಯ ಎಚ್ಚರಿಕೆ ನೀವು ತಿಳಿದಿರಲೆಬೇಕು..

ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್‌ಸೈಟ್‌ yet.nta.ac.in ಗೆ ಭೇಟಿ ನೀಡಿ.

ನಂತರ https://yet.nta.ac.in/c/register  ಈ ಲಿಂಕ್‌ಗೆ ತೆರಳಿ ವಿದ್ಯಾರ್ಥಿಯ ಹೆಸರು, ಇ-ಮೇಲ್ ಐಡಿ, ಜನ್ಮ ದಿನಾಂಕ, ಪಾಸ್‌ವರ್ಡ್ ಹಾಕಿ ನಿಮ್ಮ ಅಕೌಂಟ್‌ ಕ್ರಿಯೆಟ್‌ ಮಾಡಿ.

ನಂತರ ನಿಮಗೆ ಲಾಗಿನ್‌ ನಂಬರ್ ಸಿಗುತ್ತದೆ. ಲಾಗಿನ್‌ ನಂಬರ್ ಮತ್ತು ಪಾಸ್‌ವರ್ಡ್‌ನ್ನು https://yet.nta.ac.in/c/login/ ಈ ಲಿಂಕ್‌ನಲ್ಲಿ ನಮೂದಿಸಿ ಸಬ್ಮಿಟ್‌ ಕೊಡಿ.

ನಂತರ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ.

ಆನ್‌ಲೈನ್ ನೋಂದಣಿಯ ಆರಂಭ ದಿನಾಂಕ - 27-07-2022

ಆನ್‌ಲೈನ್ ನೋಂದಣಿಯ ಕೊನೆಯ ದಿನಾಂಕ - 26-08-2022

ಅರ್ಜಿ ತಿದ್ದುಪಡಿ ಮಾಡಲು ಆರಂಭ ದಿನಾಂಕ - 27-08-2022

ಅರ್ಜಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕ - 31-08-2022

ಆನ್‌ಲೈನ್‌ನಲ್ಲಿ ಪ್ರವೇಶ ಪತ್ರ ಬಿಡುಗಡೆ ದಿನಾಂಕ - 05-09-2022

ಪರೀಕ್ಷೆಯ ದಿನಾಂಕ - 11-09-2022