News

ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಗಿಫ್ಟ್-ಕೃಷಿ ಮೂಲಸೌಕರ್ಯ ನಿಧಿಯಡಿ ಕೃಷಿಕರಿಗೆ ಆರ್ಥಿಕ ನೆರವು

09 August, 2020 1:39 PM IST By:

ಕೃಷಿ ಮೂಲಸೌಕರ್ಯ ನಿಧಿ ಅಡಿಯಲ್ಲಿ ಕೃಷಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗಾಗಿ (PM) ಪ್ರಧಾನಿ ನರೇಂದ್ರ ಮೋದಿಯವರು 1 ಲಕ್ಷ ಕೋಟಿ ರೂಪಾಯಿ ಆರ್ಥಿಕ ಸಹಾಯ ಘೋಷಣೆ ಮಾಡಿದರು.

ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಚಾಲನೆ ನೀಡಿ ದೇಶದ 8.5 ಕೋಟಿ ರೈತರಿಗೆ ಆರನೇ ಕಂತು 17,000 ಕೋಟಿ ರೂಪಾಯಿಗಳನ್ನು ಪಿಎಂ-ಕಿಸಾನ್ ಯೋಜನೆ(PM kisan sanman scheme) ಅಡಿಯಲ್ಲಿ ಬಿಡುಗಡೆ ಮಾಡಿದರು.

ಒಂದು ಲಕ್ಷ ಕೋಟಿ ರೂ.ಗಳ 'ಕೃಷಿ ಮೂಲಸೌಕರ್ಯ ನಿಧಿ' ಅಡಿಯಲ್ಲಿ ಹಣ ಸೌಲಭ್ಯಕ್ಕಾಗಿ ಕೇಂದ್ರ ವಲಯ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಸಂಸ್ಕರಣಾ ಘಟಕಗಳಂತಹ (Processing Units)ಸುಗ್ಗಿ ನಂತರದ ಬೆಳೆ ನಿರ್ವಹಣಾ ಮೂಲಸೌಕರ್ಯ' ಮತ್ತು 'ಸಮುದಾಯ ಕೃಷಿ ಆಸ್ತಿ'ಗಳ ನಿರ್ಮಾಣಕ್ಕೆ ಈ ನಿಧಿ ವೇಗ ನೀಡಲಿದೆ. ಈ ಸ್ವತ್ತುಗಳ ಮೂಲಕ ರೈತರು ತಮ್ಮ ಬೆಲೆಗೆ ಹೆಚ್ಚಿನ ಮೌಲ್ಯ ಪಡೆಯಬಹುದು ಎಂದರು.

11 ಸರ್ಕಾರಿ ಬ್ಯಾಂಕ್ ಗಳ ಜೊತೆಗೆ ಒಪ್ಪಂದ:
ಇದಕ್ಕಾಗಿ ಕೇಂದ್ರ ಸರ್ಕಾರ ಸಾಲ ನೀಡುವ ಹಲವು ಹಣಕಾಸಿನ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಒಂದು ಲಕ್ಷ ಕೋಟಿ ರೂ. ಸಾಲದ ಯೋಜನೆ ಆರಂಭಗೊಂಡಿದೆ. ಇದರಲ್ಲಿ ಸಾರ್ವಜನಿಕ ವಲಯದ ಒಟ್ಟು 12 ಬ್ಯಾಂಕ್ ಗಳ ಪೈಕಿ 11 ಬ್ಯಾಂಕ್ ಗಳು ಈ ಮೊದಲೇ ಯೋಜನೆಗಾಗಿ ಕೃಷಿ ಸಹಯೋಗ ಹಾಗೂ ರೈತರ ಕಲ್ಯಾಣ ವಿಭಾಗದ ಜೊತೆಗೆ ಮೆಮೊರೆಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ ಗೆ ಸಹಿ ಹಾಕಿವೆ. ಈ ಯೋಜನೆಯಿಂದ ಅತಿ ಹೆಚ್ಚು ರೈತರಿಗೆ ಸಹಾಯವಾಗಬೇಕು ಹಾಗೂ ಅವರ ಆದಾಯದಲ್ಲಿ ಏರಿಕೆಯಾಗುತ್ತದೆ ಎಂದರು.

ವಿಡಿಯೋ ಕಾನ್ಫರೆನ್ಸ್​ (Video conference) ನಲ್ಲಿ ಕರ್ನಾಟಕ ಹಾಸನ ಉಗಣೆ ಪತ್ತಿನ ರೈತರ ಸಂಘದ ಸದಸ್ಯರ ಸಜೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಿದರು. ಹಾಸನ ತಾಲೂಕು ಉಗನೆ ಗ್ರಾಮದ ದೇವೇಂದ್ರ ಹಾಗೂ ಬಸವೇಗೌಡ ಎಂಬವರ ಜತೆಗೆ ಪ್ರಧಾನಿ ಮಾತನಾಡಿದರು. ಕೃಷಿ ಹಾಗೂ ಸೊಸೈಟಿಗಳ ಕುರಿತು ಚರ್ಚಿಸಿದರು.