News

ಗುಡ್‌ನ್ಯೂಸ್: ಬೀದಿಬದಿ ವ್ಯಾಪಾರಿಗಳಿಗೆ ಭರ್ಜರಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

28 April, 2022 10:29 AM IST By: Maltesh
ಸಾಂದರ್ಭಿಕ ಚಿತ್ರ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯ ಪಿಎಂ ಸ್ವನಿಧಿ ಯೋಜನೆಯನ್ನು [PM Svanidhi] ಕಾರ್ಯಕ್ರಮವನ್ನು 2022 ರ ಮಾರ್ಚ್ ನಿಂದ 2024 ರ ವರೆಗೆ ಮುಂದುವರೆಸಲು ಅನುಮೋದನೆ ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಮುಕ್ತವಾಗಿ ಕೈಗೆಟುವ ರೀತಿಯಲ್ಲಿ ಸಾಲದ ನೆರವು, ಡಿಜಿಟಲ್ ವಹಿವಾಟು ಹೆಚ್ಚಿಸುವ, ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬಗಳ ಸಮಗ್ರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು  ಕೇಂದ್ರೀಕರಿಸುವ ಉದ್ದೇಶವನ್ನು ಇದು ಒಳಗೊಂಡಿದೆ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಯೋಜನೆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಮಾರ್ಗದಲ್ಲಿ ಮುಕ್ತ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯಡಿ  5,000 ಕೋಟ ರೂಪಾಯಿ ಸಾಲ ಒದಗಿಸಲಾಗಿತ್ತು. ಈ ಅನುಮೋದನೆಯಿಂದ ಸಾಲದ ಪ್ರಮಾಣ 8,100 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಬೀದಿ ವ್ಯಾಪಾರಿಗಳಿಗೆ ದುಡಿಯುವ ಬಂಡವಾಳವನ್ನು ಹೆಚ್ಚಿಸಿ, ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಿಯಾಗಲಿದೆ.

ವ್ಯಾಪಾರಿಗಳಿಗೆ ಕ್ಯಾಶ್ ಬ್ಯಾಕ್ ಸೇರಿದಂತೆ ಡಿಜಿಟಲ್ ಪಾವತಿಗಳ ಪ್ರಚಾರ ಮಾಡಲು ಆಯವ್ಯಯದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಪ್ರಸ್ತಾವನೆಯ ಅಂಗೀಕಾರದಿಂದ ನಗರ ಭಾರತದ 1.2 ಕೋಟಿ ನಾಗರಿಕರಿಗೆ ಲಾಭವಾಗಲಿದೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

ಏನಿದು ಸ್ವನಿಧಿ ಯೋಜನೆ ?

ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ಮಾಫಿಯಾದಿಂದ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ  ಈ ಹಿಂದೆ ಜಾರಿಗೆ ತಂದಿದ್ದ ಶೂನ್ಯ ಬಡ್ಡಿದರದ ಸಾಲ ಯೋಜನೆ ಬಡವರ ಬಂಧು ಯೋಜನೆಯ ಮಾದರಿಯಲ್ಲಿಯೇ ಕೇಂದ್ರ ಸರ್ಕಾರವು ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಿಯಿಸಿದೆ. ಈ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತಿದ್ದು, ಒಂದು ವರ್ಷದೊಳಗೆ ಮಾಸಿಕ ಕಂತುಗಳ ಮೂಲಕ ಹಿಂದಿರುಗಿಸಬೇಕಾಗುತ್ತದೆ.

ಏನೇನು ದಾಖಲೆಗಳು ಬೇಕು?

ವ್ಯಾಪಾರಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ತಾವು ವ್ಯಾಪಾರ ಮಾಡುವ ಬಗೆಗಿನ ಸರ್ಟಿಫಿಕೇಟ್‌ (CoV) ಅಥವಾ ವ್ಯಾಪಾರಿಗಳ ಗುರುತಿನ ಚೀಟಿ (ID) ಅಥವಾ ವ್ಯಾಪಾರ ಮಾಡುವ ಪ್ರೊವಿಶನಲ್‌ ಸರ್ಟಿಫಿಕೇಟ್‌ ಅಥವಾ ಶಿಫಾರಸಿನ ಪತ್ರ (LoR)ವನ್ನು ಸಲ್ಲಿಸಬೇಕು. ಇದರ ಜತೆಗೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ವಿವರ ಹಾಗೂ ಸ್ಥಳೀಯ ಸಾಕ್ಷಿದಾರರ ಸಹಿ ಕೂಡ ಅರ್ಜಿ ಸಲ್ಲಿಸುವಾಗ ಅಗತ್ಯವಿದೆ.

ಪಿಎಂ ಸ್ವನಿಧಿಗೆ ಸಾಲ ನೀಡುವ ಸಂಸ್ಥೆಗಳು:

ಬ್ಯಾಂಕ್‌ಗಳು, ಶೆಡ್ಯೂಲ್ಡ್ ಕಮರ್ಶಿಯಲ್‌ ಬ್ಯಾಂಕ್‌ (ಎಸ್‌ಸಿಬಿ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ), ಸಣ್ಣ ಹಣಕಾಸು ಬ್ಯಾಂಕ್‌ (ಎಸ್‌ಎಫ್ಬಿ), ಕೋ-ಆಪರೇಟಿವ್‌ ಬ್ಯಾಂಕ್‌, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಸ್‌ಎಚ್‌ಜಿ ಬ್ಯಾಂಕ್‌. ಉದಾ: ಸ್ಟ್ರೀಟ್‌ ನಿಧಿ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್ಸಿ)ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆ (ಎಂಎಫ್‌ಐ)ಗಳು.

WhatsApp “ಲಾಸ್ಟ್‌ ಸೀನ್‌”ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಕಂಪನಿ..! ಏನಿದು ಹೊಸ ಫೀಚರ್‌..?

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಯಾರು ಅರ್ಜಿ ಸಲ್ಲಿಸಬಹುದು ?

2020ರ ಮಾರ್ಚ್‌ 24ರ ವೇಳೆಯಲ್ಲಿ ಹಾಗೂ ಅದಕ್ಕೂ ಮೊದಲು ನಗರ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಗ್ರಾಮೀಣ/ನಗರ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.