News

ಮೀನುಗಾರಿಕೆ ಕ್ಷೇತ್ರಕ್ಕೆ ಮತ್ಸ್ಯ ಸಂಪದ ಯೋಜನೆ:ಕೃಷಕರಿಗಾಗಿ ಇ-ಗೋಪಾಲ ಆ್ಯಪ್‌

11 September, 2020 1:52 PM IST By:

ಮೀನುಗಾರಿಕೆ ಕ್ಷೇತ್ರದಲ್ಲಿನ ಕ್ರಾಂತಿಕಾರಕ ಹೆಜ್ಜೆ ಎಂದೇ ಬಣ್ಣಿಸಲಾಗಿರುವ ಮತ್ಸ್ಯ ಸಂಪಾದನೆ ಯೋಜನೆಗೆ  (ಪಿಎಂಎಂಎಸ್​ವೈ) ಮತ್ತು ಕೃಷಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಲು ಹಾಗೂ ಪಶುಗಳ ಆರೋಗ್ಯದ ಮೇಲೆ ನಿಗಾ ಇರಿಸುವ ಇ-ಗೋಪಾಲ ಆ್ಯಪ್‌​ಗೆ ಪ್ರಧಾನಿ ನರೇಂದ್ರ ಮೋದಿ  ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಸುಮಾರು 20,500 ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದು ಮೀನುಗಾರಿಕೆ ವಲಯದ ಈವರೆಗಿನ ಅತಿದೊಡ್ಡ ಹೂಡಿಕೆಯಾಗಲಿದೆ. ಇದರಲ್ಲಿ ಸಾಗರ, ಒಳನಾಡು ಮೀನುಗಾರಿಕೆಗಾಗಿ ಸುಮಾರು 12,340 ಕೋಟಿ ರೂಪಾಯಿ ಹಾಗೂ ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ ಸುಮಾರು 7,710 ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಈ ಯೋಜನೆ ಮಂದಿದಿನ ದಿನಗಳಲಲ್ ದೇಶದ 21 ರಾಜ್ಯಗಳಿಗೂ ವಿಸ್ತರಣೆಯಾಗಲಿದೆ ಎಂದರು.

ಬಿಹಾರದ ಪುರ್ನಿಯಾದಲ್ಲಿ 75 ಎಕರೆ ಪ್ರದೇಶದಲ್ಲಿ 84.27 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಜಾನುವಾರು ವೀರ್ಯ ಕೇಂದ್ರವನ್ನೂ ಉದ್ಗಾಟಿಸಿದರು. 2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ಸ್ಯ ಸಂಪದ ಯೋಜನೆಯನ್ನು ಘೊಷಿಸಿದ್ದರು. ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 2020-21 ರಿಂದ 2024-25ರವರೆಗೆ 5 ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಜಾರಿಯಾಗಲಿದೆ. ಸುಮಾರು 20 ಲಕ್ಷ ಜನರು ಫಲಾನುಭವಿಗಳಾಗಲಿದ್ದಾರೆ.

ಯೋಜನೆ ಮೂಲಕ ಮೀನುಗಾರಿಕೆ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಪಡಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2024-25ರ ವೇಳೆಗೆ ಹೆಚ್ಚುವರಿ 70 ಲಕ್ಷ ಟನ್ ಮೀನುಗಾರಿಕೆ ಉತ್ಪನ್ನ ರಫ್ತು ಮಾಡುವ ಗುರಿ ಹೊಂದಲಾಗಿದೆ. ಮೀನುಗಾರರು ಮತ್ತು ಮೀನ ಸಾಕಣೆದಾರರ ಆದಾಯ ದುಪ್ಪಟ್ಟುಗೊಳಿಸುವುದರ ಜತಗೆ ಮತ್ಸ್ಯ ಉತ್ಪನ್ನಗಳ ರಫ್ತಿನಿಂದ 1 ಲಕ್ಷ ಕೋಟಿ ರೂ. ಆದಾಯವನ್ನು ಸರ್ಕಾರ ನಿರೀಕ್ಷಿಸಿದೆ.

ಇ-ಗೋಪಾಲ್‌ ಎಂದರೇನು?

ಇ-ಗೋಪಾಲ ಆ್ಯಪ್‌ ಎಂಬುದು ಹೈನುಗಾರಿಕಾ ತಳಿಗಳ ಸಮಗ್ರ ಸುಧಾರಣೆ ಮಾರುಕಟ್ಟೆಹಾಗೂ ಮಾಹಿತಿ ತಾಣವಾಗಿರಲಿದೆ.   ರೋಗರಹಿತ ರಾಸುಗಳ ನಿರ್ವಹಣೆ ಹಾಗೂ ಖರೀದಿಗೆ ನೆರವಾಗಲಿದೆ. ಗುಣಮಟ್ಟದ ರಾಸುಗಳು ಲಭ್ಯವಾಗಲಿವೆ. ರಾಸುಗಳಿಗೆ ನೀಡಬೇಕಾಗಿರುವ ಪೋಷಕಾಂಶ, ಸೂಕ್ತ ಔಷಧ ಮೂಲಕ ನೀಡಬೇಕಾಗಿರುವ ಚಿಕಿತ್ಸೆ ಮಾಹಿತಿಯನ್ನು ಒದಗಿಸಲಾಗಿದೆ. ರಾಸುಗಳಿಗೆ ಯಾವಾಗ ಲಸಿಕೆ ಹಾಕಬೇಕು ಎಂಬ ಅಲರ್ಟಗಳನ್ನು ನೀಡಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗುತ್ತದೆ.