News

ಜಗತ್ತಿಗೆ ಆಹಾರ ಪೂರೈಸಲು ಭಾರತ ಸಿದ್ಧ: ಪ್ರಧಾನಿ ಮೋದಿ

13 April, 2022 10:30 AM IST By: KJ Staff
ಸಾಂದರ್ಭಿಕ ಚಿತ್ರ
ಗಾಂಧಿನಗರ: ವಿಶ್ವ ವ್ಯಾಪಾರ ಸಂಸ್ಥೆ (WTO) ಅನುಮತಿ ನೀಡಿದರೆ, ವಿಶ್ವಕ್ಕೆ ಭಾರತದ ಆಹಾರ ದಾಸ್ತಾನು ಪೂರೈಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗಿನ ಮಾತುಕತೆಯ ವೇಳೆ ಹೇಳಿರುವುದಾಗಿ ತಿಳಿಸಿದ್ದಾರೆ.
ಗುಜರಾತ್‍ನ ಅದಲಾಜ್‍ನಲ್ಲಿಂದು ಶ್ರೀ ಅನ್ನಪೂರ್ಣ ಧಾಮ್ ಟ್ರಸ್ಟ್‍ನ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ವೀಡಿಯೊ ಕಾನರೆನ್ಸ್ ಮೂಲಕ ಉದ್ಘಾಟಿಸಿದ ಮೋದಿ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಆಹಾರ ದಾಸ್ತಾನು ಕ್ಷೀಣಿಸುತ್ತಿದೆ, ಜಗತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜನ ಬಯಸಿದ್ದನ್ನು ಪಡೆಯಲಾಗುತ್ತಿಲ್ಲ. ಪ್ರಪಂಚವು ಈಗ ಹೊಸ ಸಮಸ್ಯೆಯನ್ನು ಎದುರಿಸುತ್ತಿದೆ, ಪ್ರಪಂಚದ ಆಹಾರ ಸಂಗ್ರಹಣೆಯು ಖಾಲಿಯಾಗುತ್ತಿದೆ. ನಾನು ಯುಎಸ್ ಅಧ್ಯಕ್ಷರೊಂದಿಗೆ ಮಾತನಾಡುತ್ತಿದ್ದೆ ಮತ್ತು ಅವರು ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಡಬ್ಲ್ಯುಟಿಒ ಅನುಮತಿ ನೀಡಿದರೆ, ನಾಳೆಯಿಂದ ಜಗತ್ತಿಗೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಾಗಿದೆ ಎಂದು ನಾನು ಸಲಹೆ ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತವು ಈಗಾಗಲೇ ದೇಶದ ಜನರಿಗೆ ಸಾಕಾಗುವಷ್ಟು ಆಹಾರ ದಾಸ್ತಾನು ಹೊಂದಿದೆ ಆದರೆ "ನಮ್ಮ ರೈತರು ಜಗತ್ತಿಗೆ ಆಹಾರ ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ" ಎಂದು ಅವರು ಹೇಳಿದರು. ಆದ್ದರಿಂದ WTO ಯಾವಾಗ ಅನುಮತಿ ನೀಡುತ್ತದೆ ಮತ್ತು ನಾವು ಜಗತ್ತಿಗೆ ಆಹಾರವನ್ನು ಪೂರೈಸಬಹುದು ಎಂದು ನನಗೆ ತಿಳಿದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನು ಅನ್ನಪೂರ್ಣಧಾಮ ಟ್ರಸ್ಟ್ ಕುರಿತು ಮಾತನಾಡಿದ ನರೇಂದ್ರ ಮೋದಿ, "ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗುಜರಾತ್ ಯಾವಾಗಲೂ ಸಮಾಜಕ್ಕೆ ಕೊಡುಗೆ ನೀಡಿದೆ. ಪಾಟಿದಾರ್ ಸಮುದಾಯವೂ ಅದರ ಭಾಗವಾಗಿದೆ" ಎಂದು ಹೇಳಿದರು.

ಆರೋಗ್ಯಧಾಮದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, "ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ಉಚಿತ ಡಯಾಲಿಸಿಸ್ ಸೌಲಭ್ಯವು ಆರೋಗ್ಯಧಾಮದ ಉದ್ದೇಶವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಆರೋಗ್ಯಧಾಮದಲ್ಲಿ ಒಂದೇ ಸಮಯದಲ್ಲಿ ಡಯಾಲಿಸಿಸ್ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ "ದಶಕಗಳ ಹಿಂದೆ ಕಾಶಿಯಿಂದ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕದ್ದು ವಿದೇಶಕ್ಕೆ ಸಾಗಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಕೆನಡಾದಿಂದ ಕಾಶಿಗೆ ತಾಯಿ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಮರಳಿ ತಂದಿದ್ದೇವೆ. ಅಂತಹ ಹತ್ತಾರು ಸಾಂಸ್ಕೃತಿಕ ಸಂಕೇತಗಳನ್ನು ವಿದೇಶದಿಂದ ಮರಳಿ ತರಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

Small Savings ಬಡ್ಡಿ ದರ..ಮಹತ್ವದ ಮಾಹಿತಿ ನೀಡಿದ ಹಣಕಾಸು ಸಚಿವಾಲಯ