News

ಹೊಸ ವರ್ಷಕ್ಕೆ ಮೋದಿ ಬರೆದ ಪ್ರೇರಣಾದಾಯಕ ಕವಿತೆ ಇಲ್ಲಿದೆ

02 January, 2021 9:39 AM IST By:
PM Narendra Modi

ಚುನಾವಣಾ ಪ್ರಚಾರಗಳಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಲೋಚನೆಗಳನ್ನು ಕವಿತೆಗಳ ರೂಪದಲ್ಲಿ ಬರೆಯುತ್ತಾರೆ. ಸೌಗಂಧ್ ಮುಜೆ ಇಸ್ ಮಿಟ್ಟಿ ಕಿ ಹಾಡು ಕೂಡ ಕೂಡ ವೈರಲ್ ಆಗಿತ್ತು. ಈಗ ಹೊಸ ವರ್ಷವನ್ನು ಈಗ ಅಭೀ ತೋ ಸೂರಜ್ ಉಗಾ ಹೈ (ಸೂರ್ಯ ಈಗ ತಾನೇ ಉದಯಿಸಿದ್ದಾನೆ... )ಎಂಬ ಕವಿತೆ ಬರೆದು ಹೊಸ ವರ್ಷಕ್ಕೆ ಶ್ರೀಕಾರ ಬರೆದಿದ್ದಾರೆ.

ಹೊಸ ವರ್ಷದ ಆರಂಭದ ಅಂಗವಾಗಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಹೆಮ್ಮೆ ಪಡುವಂತೆ ಮಾಡಿದ ದೇಶದ ವೀರಯೋಧರಿಗೆ ನಾಯಕರಿಗೆ ನಮನ ಸಲ್ಲಿಸಿದ್ದಾರೆ.

 ಮೋದಿ ರಚಿತ ಈ ಪದ್ಯವನ್ನು ಮೈಗೌವ್ಇಂಡಿಯಾ ಟ್ವೀಟರ್ ಖಾತೆ ಹಂಚಿಕೊಂಡಿದೆ. ಬಾಹ್ಯಕಾಶಕ್ಕೆ ಚಿಮ್ಮುತ್ತಿರುವ ರಾಕೇಟ್, ಯುದ್ದ ವಿಮಾನಗಳ ಗರ್ಜನೆ, ಕೊರೋನಾ ಯುದ್ದ ಕಣದ ಯೋಧರು, ಕರ್ತವ್ಯನಿರತ ಪೌರಕಾರ್ಮಿಕರು, ಹೊಲ ಊಳುತ್ತಿರುವ ರೈತ ಮುಂತಾದ ಸಂಗತಿಗಳ್ನು ಸ್ಮರಿಸುತ್ತಾ ನಮ್ಮೆಲ್ಲರ ಸಂಕಲ್ಪವನ್ನು ಸಾಕಾರಗೊಳಿಸಲು ಈಗ ತಾನೇ ಸೂರ್ಯ ಉದಯಿಸಿದ್ದಾನೆ ಎಂದು ಪ್ರಧಾನಿ ಹಾಡಿದ್ದಾರೆ.

ಗಗನದಲ್ಲಿ ತಲೆಯತ್ತಿ

ದಟ್ಟ ಮೋಡಗಳ ಸೀಳುತ್ತಾ

ಬೆಳಗಿನ ಸಂಕಲ್ಪ ಹೊತ್ತು ಈಗಷ್ಟೇ ಉದಯಿಸಿದ್ದಾನೆ ಸೂರ್ಯ

ದೃಢ ನಿಶ್ಚಯದಿಂದ ಜತೆಯಲ್ಲೇ ಸಾಗಿ

ಎಲ್ಲಾ ಕಷ್ಟಗಳ ಹಿಂದೂಡಿ ಮುಂದಾಗಿ

ಗಾಢ ಅಂಧಕಾರವ ಅಳಿಸಲು

ಈಗಷ್ಟೇ ಉದಯಿಸಿದ್ದಾನೆ ಸೂರ್ಯ

ವಿಶ್ವಾಸದ ಕಿರಣಗಳ ಬೆಳಗಿಸಿ

ವಿಕಾಸದ ದೀಪವ ಹೊತ್ತಿಸಿ

ಕನಸುಗಳ ಸಾಕಾರಗೊಳಿಸಲು

ಈಗಷ್ಟೇ ಉದಯಿಸಿದ್ದಾನೆ ಸೂರ್ಯ

ನಾವು-ನಮ್ಮವರೆನ್ನದೆ, ನಾನು ನನ್ನವೆರನ್ನದೆ ಎಲ್ಲರಿಗೂ ಬೆಳಕಾಗುತ್ತಾ

ಈಗಷ್ಟೇ ಉದಯಿಸಿದ್ದಾನೆ ಸೂರ್ಯ

asman me sir uthakar

ghane badalon ko cheerkar

roshni ka sankalp le

abhi toh suraj uga hai, 

dhrud nishchay ke sath chalkar

har mushkil to par kar

ghor andhere ko mitane

abhi toh suraj uga hai,

vishwas ki lau jalakar

vikas ka deepak lekar

sapno ko saaakar karne

abhi toj suraj uga hai

na apna na paraya

na mera na tera

sabka tej bankar

abhi toh suraj uga hai

aag ko samette

prakash ko bikherta

chalta aur chalata

abhi toh suraj uga hai