2025ರ ಒಳಗಡೆ ದೇಶದ 24 ನಗರಗಳಲ್ಲಿ ಮೆಟ್ರೋ ಸೇವೆ ಆರಂಭಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಭಾರತ ಮೊಟ್ಟಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಆನ್ ಲೈನ್ ಮೂಲಕ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು.
ಪೂರ್ಣ ಅಟೋಮ್ಯಾಟಿಕ್ ಚಾಲಕರಹಿತ ಈ ಮೆಟ್ರೋ ರೈಲು ಜನಕಪುರಿ ವೆಸ್ಟ್ ನಿಂದ ಬೊಟಾನಿಕಲ್ ಗಾರ್ಡನ ವರೆಗಿನ 37 ಕಿ. ಮೀ ನೀಲಿ ಮಾರ್ಗದಲ್ಲಿ ಸಂಚರಿಸಲಿದೆ.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮೆಟ್ರೋ ರೈಲು ಕಾರ್ಯಾಚರಣೆ ಮಾಡಿದ್ದರು. ಆ ಸಮಯದಲ್ಲಿ 2014ರಲ್ಲಿ ಕೇವಲ ಐದು ನಗರಗಳಿಗೆ ಮಾತ್ರ ಮೆಟ್ರೋ ಸೇವೆ ಇತ್ತು, ಆದರೆ ಇವತ್ತಿನ 2020ರಲ್ಲಿ ಸುಮಾರು 18 ಮೆಟ್ರೋರೈಲು ಸೇವೆ ಏರಿಕೆಯಾಗಿದೆ. 2025ರ ಒಳಗಡೆ ದೇಶದಲ್ಲಿ 25ಕ್ಕೂ ಹೆಚ್ಚು ನಗರಗಳಲ್ಲಿ ಒಂದು ಮೆಟ್ರೋ ಸೇವೆಯನ್ನು ವಿಸ್ತರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
2014ರಲ್ಲಿ ಕೇವಲ ಎರಡು 248 ಕಿಲೋಮೀಟರ್ ಮೆಟ್ರೋ ರೈಲು ಕಾಲವಿತ್ತು ಆದರೆ ಮುಂಬರುವ ದಿನಗಳಲ್ಲಿ ಇದು 700 ಕಿಲೋಮೀಟರಿಗೂ ಹೆಚ್ಚು ದಾಟಲಿದೆ.ಮೊದಲು ಇದು ಕೇವಲ 17 ಲಕ್ಷ ಜನರು ಮೆಟ್ರೊ ಸೇವೆಯನ್ನು ಬಳಸುತ್ತಿದ್ದರು ಆದರೆ ಇದೀಗ ಐದು ಪಟ್ಟು ಜಾಸ್ತಿಯಾಗಿದೆ. ಇದರಿಂದ ಒಂದು ಮೆಟ್ರೋ ರೈಲುಗಳು ಎಷ್ಟು ಜನರ ಪ್ರಯಾಣವನ್ನು ಸುಲಭಗೊಳಿಸುತ್ತವೆ.
ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ಇದೇ ಸಂದರ್ಭದಲ್ಲಿ,ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸಲು ಏಕೀಕೃತ ಮೊಬಿಲಿಟಿ ಕಾರ್ಡ್(NCMC),ಸೇವೆಯನ್ನು ಉದ್ಘಾಟಿಸಿದರು. ದೇಶದ ಯಾವುದೇ ಸ್ಥಳದಲ್ಲಿ ನೀಡಿದ ರುಪೇ ದೇಬಿಟ್ ಕಾರ್ಡ್ ಬಳಸಿಕೊಂಡು. ಈ ಮಾರ್ಗದಲ್ಲಿ ಪ್ರಯಾಣಿಕರು ಎಲ್ಲಾ ಕಡೆ ಪ್ರಯಾಣಿಸಬಹುದು.2022ರ ಒಳಗಾಗಿ ಇವಂದು ಸೌಲಭ್ಯ ಮೆಟ್ರೋ ಜಾಲದ ಎಲ್ಲಾ ಭಾಗಗಳಲ್ಲಿ ಬಳಕೆಗೆ ಲಭ್ಯವಾಗುತ್ತದೆ,ಎಂದು ತಿಳಿಸಿದ್ದಾರೆ.