News

ಪಿಎಂ ಮತ್ಸ್ಯ ಸಂಪದ ಯೋಜನೆ: ಮೀನುಗಾರರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

08 August, 2023 5:40 PM IST By: Kalmesh T
Pm matsya sampada scheme : applications invited for grants

Pm matsya sampada scheme : ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2020-21 ಮತ್ತು 2022-23ನೇ ಸಾಲಿನಲ್ಲಿ ಉಳಿದಿರುವ ವಿವಿಧ ಘಟಕಗಳಿಗೆ 2023-24 ಸಾಲಿನಲ್ಲಿ ಹೊಸ ಘಟಕಗಳಿಗೆ ಸಹಾಯಧನ ನೀಡಲು ಅಸಕ್ತಿ ಹೊಂದಿರುವ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ದಿನಾಂಕ 22-08-2023 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2020-21ನೇ ಸಾಲಿನಲ್ಲಿ ಜಲಾಶಯಗಳಿಗೆ ಬಲಿತ ಮೀನುಮರಿಗಳ ದಾಸ್ತಾನು ಮತ್ತು 2022-23ನೇ ಸಾಲಿನಲ್ಲಿ ಶೈತ್ಯಾಗಾರ/ಮಂಜುಗೆಡ್ಡೆ ಸ್ಥಾವರ ನಿರ್ಮಾಣ (ಕನಿಷ್ಟ 30ಟನ್ ಸಂಗ್ರಹ ಸಾಮರ್ಥ್ಯದ ಘಟಕ) ದಡಿ ಉಳಿದಿರುವ ಗುರಿಗಳಿಗೆ ಹಾಗೂ 2023-24ನೇ ಸಾಲಿನಲ್ಲಿ ಹೊಸ ಮೀನು ಕೃಷಿಕೊಳಗಳ ನಿರ್ಮಾಣ ಮತ್ತು ಹೂಡಿಕೆ ವೆಚ್ಚಗಳು, ಒಳನಾಡಿನಲ್ಲಿ 0.10 ಹೆಕ್ಟೇರ್ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಒಳನಾಡು ಪ್ರದೇಶದಲ್ಲಿ ಎಫ್.ಆರ್.ಪಿ ದೋಣಿಗಳ ಖರೀದಿಗೆ ಸಹಾಯಧನ ಮತ್ತು ಶೈತ್ಯಾಗಾರ/ಮಂಜುಗೆಡ್ಡೆ ಸ್ಥಾವರ ನಿರ್ಮಾಣ (ಕನಿಷ್ಟ 50ಟನ್ ಸಂಗ್ರಹ ಸಾಮರ್ಥ್ಯದ ಘಟಕ) ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಆಸಕ್ತಿ ಹೊಂದಿರುವ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 40ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 60ರಷ್ಟು ಸಹಾಯಧನ ನೀಡಲಾಗುವುದು.

ಅರ್ಜಿ ನಮೂನೆಯನ್ನು ಸಂಬಂಧಿಸಿದ ತಾಲ್ಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗಳಿಂದ ಪಡೆದು ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ:22-08-2023 ರೊಳಗೆ ಕಛೇರಿಯ ವೇಳೆಯಲ್ಲಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಹಾಗೂ ಹಿಂದಿನ ಸಾಲಿನಲ್ಲಿ ಮೇಲ್ಕಂಡ ಘಟಕಗಳಿಗೆ ಈಗಾಗಲೇ ಇಲಾಖೆಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಆಸಕ್ತಿ ಇದ್ದಲ್ಲಿ ಪುನಃ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು, ರಾಮನಗರ ಜಿಲ್ಲೆ ರವರಮೊ:9448655014, ಮೀನುಗಾರಿಕೆ ಸಹಾಯಕ ನಿರ್ದೇಶಕರು, ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕು ಮೊ:9880347733 ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕನಕಪುರ ಮತ್ತು ಮಾಗಡಿ ತಾಲ್ಲೂಕು ಮೊ:9449290091 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು, ರಾಮನಗರ ಜಿಲ್ಲೆ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Tree Man : 3 ಎಕರೆ ಜಮೀನು ಮಾರಿ, 1 ಕೋಟಿ ಸಸಿ ನೆಟ್ಟ ‘ಟ್ರೀ ಮ್ಯಾನ್ʼ ! ಯಾರಿದು ಗೊತ್ತೆ?