News

ಕೇಂದ್ರ ಸರ್ಕಾರದ ಕುಸುಮ ಯೋಜನೆ ಅಡಿಯಲ್ಲಿ ಸೋಲಾರ್ ಪಂಪ್ ಗಳಿಗಾಗಿ ಅರ್ಜಿ ಆಹ್ವಾನ

25 November, 2020 8:13 AM IST By:

ನಮ್ಮ ದೇಶದ ರೈತರು ಡೀಸೆಲ್ ಬಳಸಿ ಬೆಳೆಗಳಿಗೆ ನೀರು ಹಾಯಿಸುವುದು ಎಲ್ಲ ಕಡೆ ಸರ್ವೇಸಾಮಾನ್ಯ, ಆದರೆ ಇದೀಗ ನಮಗೆ ನೈಸರ್ಗಿಕ ಶಕ್ತಿಯಾದ ಸೌರಶಕ್ತಿಯನ್ನು ಉಪಯೋಗಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರಗಳ ಸಮ್ಮಿಶ್ರಣದಲ್ಲಿ ಪಿಎಂ ಕುಸುಮ  ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಸೋಲಾರ್ ಪಂಪ್ ಗಳನ್ನು ನೀಡಲು ನಿರ್ಧರಿಸಿದೆ.

 ಕೇಂದ್ರ ಸರ್ಕಾರದ ಯೋಜನೆಯಾದ ಪಿಎಂ ಕುಸುಮ  ಯೋಜನೆಯಡಿಯಲ್ಲಿ ನೀರಾವರಿಗಾಗಿ ಸೋಲಾರ್ ಪಂಪ್ ಸೆಟ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ ಹೇಳದ ಸಂಯೋಗದೊಂದಿಗೆ ನಡೆಸಲಾಗುತ್ತಿದೆ.

ಯೋಜನೆ ಅಡಿಯಲ್ಲಿ ತೆರೆದ ಬಾವಿಗಳಿಗೆ 3hp ಹಾಗೂ ಕೊಳವೆ ಬಾವಿಗಳಿಗೆ 7.5 hp  ಸಾಮರ್ಥ್ಯದ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಲಾಗುವುದು. ಪಂಪ್ಸೆಟ್ಗಳನ್ನು ಅಳವಡಿಸಲು ಕೇಂದ್ರ ಸರ್ಕಾರದಿಂದ 30 ಪರ್ಸೆಂಟ್ ಸಹಾಯಧನ ಬಂದರೆ ರಾಜ್ಯ ಸರ್ಕಾರದಿಂದ 50 ಪರ್ಸೆಂಟ್ ಹಾಗೂ ಉಳಿದ ಇಪ್ಪತ್ತು ಪರ್ಸೆಂಟ್ ಹಣವನ್ನು ರೈತರು ತುಂಬಬೇಕಾಗುತ್ತದೆ. ಸದರಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ, ಪ್ರಸ್ತುತ ಈ ಹಂತದಲ್ಲಿ ಸಾಮಾನ್ಯ ವರ್ಗದ ರೈತರು ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದವರು ಯೋಜನೆಗೆ ಅರ್ಹರಾಗುವುದಿಲ್ಲ.

 ರೈತರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಾಯಧನವನ್ನು ಬಿಟ್ಟು ಪ್ರತಿ ಸೌರ ಪಂಪ್ಸೆಟ್ಗೆ ಡಿಡಿ ಮುಖಾಂತರ 3hp ಸಾಮರ್ಥ್ಯದ ಪಂಪ್ಸೆಟ್ಗೆ  32, 300  ರೂಪಾಯಿ ಹಾಗೂ 7.5hp ಸಾಮರ್ಥ್ಯದ ಪಂಪ್ಸೆಟ್ಗೆ  63,380 ರೂಪಾಯಿ ಪಾವತಿಸಬೇಕಾಗುತ್ತದೆ

ಪರಿಶಿಷ್ಟ ಜಾತಿಯ ರೈತರಿಗೆ 3hp ತೆರೆದ ಬಾವಿಯ ವಿಭಾಗದಲ್ಲಿ 18 ಅರ್ಜಿಗಳು, ಹಾಗೂ 7.5 hp ಕೊಳವೆ ಭಾವಿ ವಿಭಾಗದಲ್ಲಿ 228 ಅರ್ಜಿಗಳನ್ನು ಸ್ವೀಕರಿಸಲಾಗುವುದು. ಇನ್ನು ಪರಿಶಿಷ್ಟ ಪಂಗಡದ ರೈತರಿಗೆ 3hp ವಿಭಾಗದಲ್ಲಿ  7 ಅರ್ಜಿಗಳು ಹಾಗೂ 7.5 hp ವಿಭಾಗದಲ್ಲಿ 93 ಅರ್ಜಿಗಳನ್ನು ಸ್ವೀಕರಿಸಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು,  ಅರ್ಜಿಯನ್ನು ಸಲ್ಲಿಸಿದ ನಂತರ ಪಡೆದುಕೊಂಡು ಸ್ವೀಕೃತಿ ಪ್ರತಿ ಹಾಗೂ ಎಲ್ಲಾ ಡಾಕ್ಯುಮೆಂಟ್ ಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ದಿನಾಂಕದಿಂದ ಐದು ದಿನಗಳಿಗಾಗಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯ ಉಪವಿಭಾಗೀಯ ಕಚೇರಿಗಳಲ್ಲಿ ಸಲ್ಲಿಸಬೇಕು.

 ಆಸಕ್ತಿಯುಳ್ಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು https://kredlinfo.in/ ಗೆ  ಭೇಟಿ ನೀಡಿ ಅಲ್ಲಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಸರ್ಕಾರದಿಂದ ಬಿಡುಗಡೆಯಾದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ-08022202100

ಲೇಖಕರು: ಚಿನ್ನಪ್ಪ ಎಸ್. ಅಂಗಡಿ