News

PM KISAN ಜೊತೆಗೆ 'KARNATAKA' ಸರ್ಕಾರದಿಂದಲೂ 4000ರೂ!

05 January, 2022 11:43 AM IST By: Ashok Jotawar
Farmer

ಭಾರತ ಸರ್ಕಾರದ PM KISAN ಸಮ್ಮಾನ್ ನಿಧಿ ಯೋಜನೆಯಂತೆ ಕರ್ನಾಟಕ ಸರ್ಕಾರವು ರೈತರಿಗೆ  4000ರೂ. ಸಹಾಯಧನ ನೀಡುತ್ತಿದೆ. ಭಾರತ ಸರ್ಕಾರ  PM KISAN ಸಮ್ಮಾನ್ ನಿಧಿ ಯೋಜನಯಲ್ಲಿ ಸುಮಾರು 6000 ರೂ. ಗಳಷ್ಟು ರೈತರ ಖಾತೆಗೆ ಪ್ರತಿ ವರ್ಷ ನೀಡುತ್ತೆ.  ಅದು ಕೂಡ 3 ಕಂತುಗಳಲ್ಲಿ. ಅದೇ ರೀತಿ ಕರ್ನಾಟಕ ಸರ್ಕಾರವು ಕೂಡ ಬಡ ರೈತರಿಗೆ ಸುಮಾರು  4000ರೂ.  ಗಳಷ್ಟು ಪ್ರತಿ ವರ್ಷದಲ್ಲಿ 2  ಕಂತುಗಳಲ್ಲಿ ನೀಡುತ್ತೆ.

ಆದರೆ ಈಗ ಪ್ರಶ್ನೆ ಏನಪ್ಪಾ ಅಂದರೆ.  ಈ ಹಣ ರೈತರ ಪಾಲಿಗೆ ಸಹಾಯಕ ಮಾರ್ಗ ಹೌದಾ?

ಭಾರತ ಸರ್ಕಾರ ನೀಡುವ 6,000 ರೂ. ಮತ್ತು ಕರ್ನಾಟಕ ಸರ್ಕಾರ ನೀಡುವ  4,000ರೂ. ಸುಮಾರು10,000 ರೂ. ಗಳು ರೈತರ ಪಾಲಿಗೆ ಸರಿದೂಗುತ್ತೆಯೇ?

ಏಕೆಂದರೆ ಈಗಿನ ಮಾರುಕಟ್ಟೆ. ಮಾರುಕಟ್ಟೆಯಲ್ಲಿ ಏನಾದರೂ ತಗೆದು ಕೊಳ್ಳಲು ಹೋದರೆ ಅವಶ್ಯಕ ವಸ್ತುಗಳ ಬೆಲೆಯಂತೂ ಗಗನ ಚುಕ್ಕಿ ಯಾಗಿವೆ. ಗಗನದ ಚುಕ್ಕಿಯನ್ನು ಹಿಡಿಯಲು ಹೇಗೆ ಸಾಧ್ಯವಿಲ್ಲವೋ ಅದೇರೀತಿ ಇವತ್ತಿನ ಮಾರುಕಟ್ಟೆಯಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸುವುದು. ನಿಮ್ಮ ಮುಂದೆ ಕೆಲವಷ್ಟು ಸಾಮಾನುಗಳ ಬೆಲೆಯನ್ನು ನೀಡಬೇಕು ಅನಿಸುತ್ತಿದೆ.

ಮೊದಲಿಗೆ

ದಿನಸಿ ಎಣ್ಣೆ ಸುಮಾರು180ರೂ. ಮತ್ತೆ ಜಾಸ್ತಿಯಾಗುವ ನಿಟ್ಟಿನಲ್ಲಿ ಇದೆ.

ಬೇಳೆಗಳು ಸುಮಾರು 100ರೂ. ಗಳಿಗಿಂತ ಜಾಸ್ತಿಯಾಗಿಯೇ ಸಿಗುತ್ತೆ.  

ಮತ್ತು ಗೋದಿ ಹಿಟ್ಟು ಸುಮಾರು40-50ರೂ. ಕೆಜಿ.  ಪ್ರತಿ ವ್ಯಕ್ತಿಗೂ ಪ್ರತಿ ತಿಂಗಳು ಸುಮಾರು 5-10ಕೆಜಿ ಯಷ್ಟು ಗೋದಿ ಹಿಟ್ಟಿನ ಅವಶ್ಯಕತೆ ಇರುತ್ತೆ.

ಮತ್ತು ಖಾರ ಮಸಾಲೆಯಂತು ಸುಮಾರು 200ರೂ ಗಳ ಗಡಿ ದಾಟಿದವೆ.

ಇನ್ನು ಗ್ಯಾಸ್ ಅಂತೂ ಕೇಳಲೇ ಬೇಡಿ ಏಕೆಂದರೆ ಗ್ಯಾಸ್ ರೇಟ್ ಅಂತೂ ಸುಮಾರು 1,000ರೂ. ಆಗಿದೆ ಮತ್ತು ಬಂದ ಸೂತ್ರಗಳ ಪ್ರಕಾರ ಗ್ಯಾಸ್ ಪ್ರತಿ ಹಳ್ಳಿ ಹಳ್ಳಿಗೆ ತಲುಪಿದೆ ಯಂದು.

ಇದೆಲ್ಲ ನೋಡಿದರೆ  ಸುಮಾರು ಒಬ್ಬ ಮನುಷ್ಯನ ಖರ್ಚು ಪ್ರತಿತಿಂಗಳು ಸುಮಾರು 10,000 ರೂ. ಆಗುತ್ತೆ.

ಆದರೆ ಸರ್ಕಾರ ಪ್ರತಿ ರೈತ ಕುಟುಂಬಕ್ಕೆ ವರ್ಷಕ್ಕೆ10,000 ರೂ. ನೀಡುತ್ತಿದೆ. ಯೋಚಿಸಬೇಕಾದ ವಿಷಯಾನೇ ಹೌದು.

ಇನ್ನೊಂದು ಪ್ರಶ್ನೆ ಹುಟ್ಟುತ್ತೆ ಅದು ಏನು ಅಂದರೆ ಎಲ್ಲ ಸರ್ಕಾರಾನೇ ಕೊಟ್ಟರೆ ಜನತೆ, ಅಂದರೆ ರೈತ ಏನು ಕೆಲಸ ಮಾಡುತ್ತಾನೆ? ಮತ್ತು ಹೀಗೆ ಅವನಿಗೆ ಪುಗಸೆಟ್ಟೆ ಹಣ ಕೊಡುತ್ತ ಹೋದರೆ ಅವನು ಸೋಮಾರಿ  ಯಾಗುತ್ತಾನೆ. ಆದರೆ ಕೊಡುವಂತ ಹಣ ಅವನಿಗೆ ಸರಿಯಾದ ಪ್ರಮಾಣದಲ್ಲಿ

ಉಪಯೋಗಕ್ಕೆ ಬರುತ್ತಿದೆಯಾ? ಉತ್ತರ ಇಲ್ಲ.  ಏಕೆಂದರೆ ಇವತ್ತಿನ ಮಾರುಕಟ್ಟೆ ಯಲ್ಲಿ ರೈತನು ತನ್ನ ಹೊಲಕ್ಕೆ ಗೊಬ್ಬರ ಮತ್ತು ಮುಂತಾದ ಕೃಷಿಗೆ  ಅವಶ್ಯಕ ವಸ್ತು ತಗೆದು ಕೊಳ್ಳಲು ಮಾರುಕಟ್ಟೆಗೆ ಹೋದರೆ ಅವನಿಗೆ ಮತ್ತೆ ಆ ಗೊಬ್ಬರ, ಬೀಜಗಳು, ಬೇಕಾದ ಕೀಟನಾಶಕಗಳನ್ನು ಅಂಗಡಿಯವನ ಕಡೆಯಿಂದ ಸಾಲದ ರೂಪದಲ್ಲಿ ತರಬೇಕಾಗುತ್ತೆ.

ಹಾಗಾದರೆ ಇದಕ್ಕೆ ಪರಿಹಾರವೇನು ?  ಈ ಕೋವಿಡ್ ಸಮಯದಲ್ಲಿ ಕೃಷಿ ಒಂದೇ ಕ್ಷೇತ್ರವಾಗಿದೆ, ಇದು ಭಾರತದ ಆರ್ಥಿಕತೆಯನ್ನು ಸಮತೋಲನವಾಗಿ ನಿಭಾಯಿಸುತ್ತಿದೆ. ಕಾರಣ ಕೃಷಿ ಕ್ಷೇತ್ರಕ್ಕೆ ಸಹಾಯಧನವನ್ನು ನೀಡಿ ಸರ್ಕಾರ ಸಾಂತ್ವನ ಹೇಳುವ ನಾಟಕ ಮಾಡದೇ, ರೈತರಿಗೆ ಅವರ ಶ್ರಮದ ದುಡ್ಡನ್ನು ಕೊಡಿಸುವ  ಪ್ರಯತ್ನ ಪಡಬೇಕು. ಮತ್ತು ಸಹಾಯ ಮಾಡುವುದಾದರೆ ಅವರಿಗೆ ಸರ್ಕಾರೀ ಬೀಜದ, ಪೇಸ್ಟಿಸಿಡ್ಸ, ಮುಂತಾದ ಅವಶ್ಯಕ ವಸ್ತುಗಳನ್ನು ಅವರಿಗೆ ಸರಿಯಾದ ಸಮಯಕ್ಕೆ ಮತ್ತು ಸರಿಯಾಗಿ ಯಾವುದೇ ವ್ಯವಹಾರದ ಹೆರಾಫೆರಿ ಇಲ್ಲದೆ ನೀಡಿದರೆ ಸಾಕು. ನಮ್ಮ ದೇಶದ  ರೈತ ತುಂಬಾನೇ ಶಕ್ತಿಶಾಲಿ,  ಇಡೀ ನಮ್ಮ ದೇಶಕ್ಕೆ ವರ್ಷಾನು  ಪೂರ್ತಿ ಅನ್ನವನ್ನು ನೀಡುತ್ತಾರೆ.

ರೈತನಿಗೆ ಕರುಣೆಯಲ್ಲ ಸಹಾಯದ ಅವಶ್ಯಕತೆ ಇದೆ. ಸರ್ಕಾರ ಈ ವಿಚಾರ ಯಾವಾಗ ಅರ್ಥ ಮಾಡಿಕೊಳ್ಳುತ್ತೋ ಅವತ್ತು ನಮ್ಮ ದೇಶದ ರೈತ ಮತ್ತು ಅವನ ಜೊತೆ ದೇಶ ವಾಸಿಗಳು ಸುಖದಿಂದ ಇರುತ್ತಾರೆ.

ಇನ್ನಷ್ಟು  ಓದಿರಿ:

'DOUBLE' ರೈತರ INCOME 2022ರ ವೇಳೆಗೆ 'DOUBLE'?

(CHANGE IN WEATHER.) ಬದಲಾಗುತ್ತಿರುವ ನಿಸರ್ಗ! ಕೃಷಿಯಲ್ಲಿ ಹೊಸ ತಂತ್ರಜ್ಞಾನದ ಆಗಮನ!