News

ಪಿಎಂ ಕಿಸಾನ್ ಯೋಜನೆಯಡಿ ಅತ್ಯುತ್ತಮ ಸಾಧನೆ ಮಾಡಿದ 5 ರಾಜ್ಯಗಳು

25 February, 2021 11:27 AM IST By:
pm kisan

ನವದೆಹಲಿಯ ಪೂಸಾದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರರವರು ಕರ್ನಾಟಕದ  ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಇಲಾಖಾ ಅಧಿಕಾರಿಗಳಿಗೆ ಪಿಎಂ ಕಿಸಾನ್ ಯೋಜನೆಯಡಿ ಅತ್ಯುತ್ತಮ ಕೆಲಸ ಮಾಡಿದ್ದಕ್ಕೆ  ಪಿಎಂ ಕಿಸಾನ್ ಪ್ರಶಸ್ತಿ ನೀಡಿ ಗೌರವಿಸಿದರು.

ಪಿಎಂ ಕಿಸಾನ್ ಯೋಜನೆಯಡಿ ರೈತ ಬ್ಯಾಂಕ್ ಖಾತೆಗಳಿಗೆ ಶೇ. 97 ರಷ್ಟು ಆಧಾರ್ ಕಾರ್ಡ್ ಜೋಡಣೆಯ ಮೂಲಕ ಮೊದಲ ಸ್ಥಾನ ಪಡೆದ ರಾಜ್ಯ ಕೃಷಿ ಇಲಾಖೆಗೆ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಳೆ ಸಮೀಕ್ಷೆ ಕಾರ್ಯವುಪ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ. ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ  ಪ್ರಮುಖ ಪಾತ್ರವಹಿಸಿದ ಕರ್ನಾಟಕದ ಕೃಷಿ ಇಲಾಖೆಯು ತಂತ್ರಜ್ಞಾನ ಅಳವಡಿಕೆ ಹಾಗೂ ರೈತರಿಗೆ ಹೊಸಹೊಸ ಯೋಜನೆಗಳನ್ನು ಪರಿಚಯಿಸುತ್ತಿರುವುದಕ್ಕೆ ಬಿ.ಸಿ.ಪಾಟೀಲರನ್ನು ಕೇಂದ್ರ ಶ್ಲಾಘಿಸಿದೆ.

ಕರ್ನಾಟಕದಂತೆ ಇತರ ನಾಲ್ಕು ರಾಜ್ಯಗಳು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪ್ರಶಸ್ತಿಗಳು ಪಡೆದಿವೆ. ಅವುಗಳಸಂಪೂರ್ಣ ಮಾಹಿತಿ ಇಲ್ಲಿದೆ.

ಅರುಣಾಚಲ ಪ್ರದೇಶ ರಾಜ್ಯವು ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಅತಿ ಹೆಚ್ಚು ಆಧಾರ್ ವೆರಿಫಿಕೇಶನ್ ಗಳನ್ನು ಪೂರ್ಣಗೊಳಿಸಿದರಿಂದ ಆ ರಾಜ್ಯಕ್ಕೆ ಪ್ರಶಸ್ತಿ ಲಭಿಸಿದೆ. ಅರುಣಾಚಲ ಪ್ರದೇಶ, ಶೇ.98ರಷ್ಟು ಫಲಾನುಭವಿಳ ವೆರಿಫಿಕೇಷನ್ ಮಾಡಿದೆ.

ಮಹಾರಾಷ್ಟ್ರ ರಾಜ್ಯವು ಪರಿಣಾಮಕಾರಿ ಭೌತಿಕ ಪರಿಶೀಲನೆ ಮತ್ತು ಕುಂದುಕೊರತೆ ನಿವಾರಣೆಗಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಶಸ್ತಿ ಲಭಿಸಿದೆ. ಈ ರಾಜ್ಯವು ಶೇ.99ರಷ್ಟು ಭೌತಿಕ ಪರಿಶೀಲನೆ ಯನ್ನು ಪೂರ್ಣಗೊಳಿಸಿದೆ ಮತ್ತು 60 ಪ್ರತಿಶತ ದೂರುಗಳನ್ನು ಸರಿಯಾಗಿ ಪರಿಹರಿಸಿದೆ.

ಉತ್ತರ ಪ್ರದೇಶ ರಾಜ್ಯವು ಪಿಎಂ-ಕಿಸಾನ್ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಉತ್ತರ ಪ್ರದೇಶ ಪ್ರಶಸ್ತಿ ಪಡೆದಿತ್ತು. ಡಿಸೆಂಬರ್ 18 ರಿಂದ ಮಾರ್ಚ್ 19ರ ವರೆಗಿನ ಅವಧಿಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸುಮಾರು 15.3 ಮಿಲಿಯನ್ ರೈತರನ್ನು ಫಲಾನುಭವಿಗಳಾಗಿ ನೋಂದಣಿ ಮಾಡಿದೆ.

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ರಾಜ್ಯವು ಫಲಾನುಭವಿಗಳ ಭೌತಿಕ ಪರಿಶೀಲನೆ ಮತ್ತು ಕುಂದುಕೊರತೆ ನಿವಾರಣೆಯಲ್ಲಿ ಅತ್ಯುತ್ತಮ ಸಾಧನೆ ಗಾಗಿ ಪ್ರಶಸ್ತಿ ಯನ್ನು ಸ್ವೀಕರಿಸಿತು. ಆಧಾರ್ ವೆರಿಫಿಕೇಶನ್ ಪಟ್ಟಿಯಲ್ಲಿ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳು ಮೊದಲ ಸ್ಥಾನದಲ್ಲಿದ್ದು, ಕಂಗ್ರಾ ಜಿಲ್ಲೆಯು ಭೌತಿಕ ಪರಿಶೀಲನೆಯ ವಿಷಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.