News

ಬಜೆಟ್ನಲ್ಲಿ ಪಿಎಂ ಕಿಸಾನ್ ಮೊತ್ತ 6 ರಿಂದ 10,000ಕ್ಕೆ ಏರಿಕೆಯಾಗಲಿದೆಯೇ?

22 January, 2021 8:59 AM IST By:
PM Kisan

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೆ  ಈ ವರ್ಷದ ಅಂದರೆ 2021 ರ ಬಜೆಟ್ ಮುಖ್ಯವಾಗಿ ಕೃಷಿಕರ ಕೇಂದ್ರೀಕೃತವಾಗುವ ನಿರೀಕ್ಷೆಯಿದೆ.

ದೇಶದ್ಯಂತ ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದ ರೈತರ ಆಕ್ರೋಶವನ್ನು ಶಮನಗೊಳಿಸಲು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ನಿಧಿ ಯೋಜನೆಯಡಿ ನೀಡುವ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸುವ ಸಿದ್ದತೆ ನಡೆದಿದೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲು ಚಿಂತಿಸಿದೆ.ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ದೇಶದ ಪ್ರತಿಯೊಬ್ಬ ಸಣ್ಣ, ಮಾಧ್ಯಮ ರೈತನಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡುತ್ತಾ ಬಂದಿದೆ.ಈ ಯೋಜನೆ ಈಗಾಗಲೇ 7 ಕಂತುಗಳನ್ನು ಮುಗಿಸಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಲ್ಲವೇ? 6 ಸಾವಿರ ಸಹಾಯಧನ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಈ ಬಾರಿ ಮಂಡನೆಯಗಲಿರುವ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರ ಮನವೊಲಿಸಲು ಹಾಗೂ ಈಗ ಕೊಡುತ್ತಿರುವ ಮೊತ್ತ ತೀರಾ ಕಡಿಮೆ ಇರುವ ಕಾರಣದಿಂದ 6 ರಿಂದ 10 ಸಾವಿರ ರೂಪಾಯಿಗೆ ಏರಿಸುವ ಚಿಂತನೆಯನ್ನು ನೆಡೆಸಿದೆ. ಆದರೆ ಬಜೆಟ್ ಮಂಡನೆಯದ ಬಳಿಕವಷ್ಟೇ ಇದರ ಬಗ್ಗೆ ನಮಗೆ ಖಾತಾರಿಯಾಗುತ್ತದೆ.

ಹಣಕಾಸಿನ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ವಲಯವನ್ನು ಕೇಂದ್ರೀಕರಿಸಿ ಈ ಬಾರಿ ಬಜೆಟ್ ಮಂಡಿಸಲಿದ್ದಾರೆ, ಇದಕ್ಕಾಗಿಯೇ ಈ ಬಾರಿ ಪಿಎಂ ಕಿಸಾನ್ ಸಮ್ಮಾನ್ ನಿದಿಯಡಿ ರೈತರಿಗೆ ಹೆಚ್ಚಿನ ಹಣ ಘೋಷಣೆ ಮಾಡಬಹುದು ಎನ್ನಲಾಗುತ್ತಿದೆ.ಏನೇ ಆಗಲಿ ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನ ದೂರಮಾಡುವಂತ ಯೋಜನೆಗಳನ್ನು ರೈತರಿಗೆ ನೀಡಬೇಕು ಎಂಬುದು ನಮ್ಮನಿಮ್ಮೆಲ್ಲರ ಆಶಯ.