News

ಪಿಎಂ ಕಿಸಾನ್‌ ಯೋಜನೆಯಡಿ 54 ಲಕ್ಷ ರೈತರ ಖಾತೆಗೆ ₹16000 ಕೋಟಿ ಜಮಾ!

26 April, 2023 10:02 AM IST By: Kalmesh T
PM Kisan scheme: 16,000 crore deposited in the accounts of 54 lakh farmers

PM Kisan scheme: ಪಿಎಂ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ 54 ಲಕ್ಷ ರೈತರಿಗೆ ₹16000 ಕೋಟಿ ಅನುದಾನ ನೇರವಾಗಿ ರೈತರ ಅಕೌಂಟ್‌ಗೆ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

PM-Kisan Samman Nidhi: ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಪಿಎಂ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ 54 ಲಕ್ಷ ರೈತರಿಗೆ ₹16000 ಕೋಟಿ ಅನುದಾನ ನೇರವಾಗಿ ರೈತರ ಅಕೌಂಟ್ ಗೆ ಜಮೆ ಮಾಡಲಾಗಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿ ನಾಲ್ಕು ಗಂಟೆಯಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮಾಡಿದ್ದೇನೆ. 11 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ತಲುಪಿದೆ.

ಸ್ವಚ್ಚ ಭಾರತ ಯೋಜನೆ ಅಡಿ 11 ಲಕ್ಷ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಎಸ್ಸಿ,ಎಸ್ಟಿ ಯವರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ.

ಕಾಂಗ್ರೆಸ್‌ನವರು ಮೂವತ್ತು ವರ್ಷದಿಂದ ಎಸ್ಸಿ,ಎಸ್ಟಿಯವರ ಮೂಗಿಗೆ ತುಪ್ಪ ಹಚ್ಚಿದರು. ಸಿದ್ದರಾಮಯ್ಯ ಮೀಸಲಾತಿ ಕೊಡಲು ಹೆದರಿ ಓಡಿ ಹೋದರು.

ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಜೇನು ಗೂಡಿಗೆ ಕೈ ಹಾಕಿ, ಹಿಂದುಳಿದವರು, ಎಸ್ಸಿ ಎಸ್ಟಿಯವರಿಗೆ ಜೇನು ತಿನ್ನಿಸಿದ್ದೇನೆ ಎಂದು ಹೇಳಿದರು.

ಹೆಣ್ಣು ಮಕ್ಕಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಯುವ ಶಕ್ತಿ ಯೋಜನೆ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ , ಬಸ್ ನಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕೊಟ್ಡಿದ್ದೇವೆ.

ಬೆಳವಡಿ ಮಲ್ಲಮ್ಮನ ಅಭಿವೃದ್ಧಿ ಪ್ರಾಧಿಕಾರ ರಚನೆ

ಬೆಳವಡಿ ಮಲ್ಲಮ್ಮನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, ಬೆಳವಡಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಬೈಲಹೊಂಗಲ ಗಂಡು ಮೆಟ್ಟಿನ ನಾಡು. ಬೈಲಹೊಂಗಲ ಜನರು ಪ್ರಬುದ್ದ ಮತದಾರರು. ಕಳೆದ ಬಾರಿ ನಮ್ಮ ಒಡಕಿನಿಂದ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ‌.

ಅವರು ಅಭಿವೃದ್ಧಿ ‌ಕೆಲಸ ಮಾಡಲಿಲ್ಲ.‌ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಈ ಬಾರಿ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದರು.

ರೈತರ ಸಂಕಷ್ಟಕ್ಮೆ ಸ್ಪಂದಿಸುವ ಸರ್ಕಾರ ನಮ್ಮದು : ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿ ಯಾವುದೇ ಜಾತಿ ರಾಜಕಾರಣ ಮಾಡುವುದಿಲ್ಲ!

ಕಾಂಗ್ರೆಸ್‌ನವರು ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ. ಅದು ಬೋಗಸ್ ಕಾರ್ಡ್, 10 ಕೆಜಿ ಅಕ್ಕಿ ಕೊಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ.

ನಮ್ಮ ಸರ್ಕಾರ ಹೆಣ್ಣುಮಕ್ಕಳ ಪರ, ದೀನ ದಲಿತರ ಪರವಾಗಿದೆ. ನಿಮ್ಮೆಲ್ಲರ ಆಶಿರ್ವಾದದಿಂದ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.