ಪಿಎಂ ಕಿಸಾನ್ ಯೋಜನೆ: ದೇಶದ ಕೋಟ್ಯಾಂತರ ರೈತರು ಕಾಯುತ್ತಿದ್ದ ಪಿಎಂ ಕಿಸಾನ್ 11ನೇ ಕಂತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದಾರೆ. ಇಂದು ಹಿಮಾಚಲ ಪ್ರದೇಶದಲ್ಲಿ ನಡೆದ ಸಮಾರಂಭವೊಂದರಲ್ಲಿ ಪಿಎಂ ಮೋದಿ 11ನೇ ಕಂತಿನ ಹಣ ಜಮಾವಣೆಗೆ ಚಾಲನೆ ನೀಡಿದ್ದಾರೆ..
ಇದಕ್ಕಾಗಿ ಸ್ವತಃ ಪ್ರಧಾನಿ ಮೋದಿ ಶಿಮ್ಲಾ ತಲುಪಿ ಇಲ್ಲಿಂದ ಅವರು ಪ್ರತಿ ಜಿಲ್ಲೆಯಿಂದ ಆಯ್ಕೆಯಾದ ಫಲಾನುಭವಿಗಳೊಂದಿಗೆ ಅರ್ಧ ಗಂಟೆ ಕಾಲ ಸಂವಾದ ನಡೆಸಿದ್ದಾರೆ, ನಂತರ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತು ಬಿಡುಗಡೆ ಮಾಡಿದ್ದಾರೆ.
ಇಂದು ಬಿಡುಗಡೆಯಾಗಲಿರುವ 11ನೇ ಕಂತಿನಲ್ಲಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 2 ಸಾವಿರ ರೂ. ಈ ಹಣವನ್ನು ಸರ್ಕಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.
ಕೇಂದ್ರ ಸರ್ಕಾರವು 8 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ರಾಷ್ಟ್ರಮಟ್ಟದಲ್ಲಿ 'ಗರೀಬ್ ಕಲ್ಯಾಣ್ ಸಮ್ಮೇಳನ'ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 11ನೇ ಕಂತಿಗೆ ಮೋದಿ ಅವರು ಚಾಲನೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತು ಅಡಿಯಲ್ಲಿ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳು ಸುಮಾರು 21 ಸಾವಿರ ಕೋಟಿಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಈ ಯೋಜನೆಯ 11 ನೇ ಕಂತು ಸರ್ಕಾರದಿಂದ ಬಿಡುಗಡೆಯಾದಾಗ, ನಿಮ್ಮ ಖಾತೆಗೆ ಹಣ ಬಂದರೆ, ಈ ಸಂದೇಶವನ್ನು ನೀವು ಪಡೆಯುತ್ತೀರಿ. ನೀವು ಕಂತು ಪಡೆದಿದ್ದೀರಿ ಎಂಬುದನ್ನು ಈ ಸಂದೇಶದ ಮೂಲಕ ತಿಳಿಯಬಹುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ 11 ನೇ ಕಂತು ಇಂದು ಬಿಡುಗಡೆ: ಪಿಎಂ ಕಿಸಾನ್ ಯೋಜನೆಯ 11 ನೇ ಕಂತನ್ನು ಹೇಗೆ ಪರಿಶೀಲಿಸುವುದು.
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಯೋಜನೆಯ 10 ಕಂತುಗಳು ಬಿಡುಗಡೆಯಾಗಿದ್ದು, ಈಗ ಇದು 11 ನೇ ಕಂತು. ಈ ಸಂದರ್ಭದಲ್ಲಿ ಕಂತು ಬಿಡುಗಡೆಯಾದ ನಂತರ, ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಹೇಗೆ ಪರಿಶೀಲಿಸಬಹುದು? ಹಾಗಾದರೆ ಇದಕ್ಕೆ ದಾರಿಗಳು ಏನು..?
ATM ಮೂಲಕ
ಕೆಲವು ಕಾರಣಗಳಿಂದ ನಿಮಗೆ ಸಂದೇಶ ಬರದಿದ್ದರೆ, ನಿಮ್ಮ ಖಾತೆಗೆ 11 ನೇ ಕಂತಿನ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ನಿಮ್ಮ ಹತ್ತಿರದ ಎಟಿಎಂಗೆ ಹೋಗಬಹುದು.
Passbook ಸಹಾಯದಿಂದ
ನೀವು ಇನ್ನೂ ನಿಮ್ಮ ಎಟಿಎಂ ಕಾರ್ಡ್ ಅನ್ನುಹೊಂದಿರದಿದ್ದರೆ , ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಅದನ್ನು ನಿಮ್ಮ ಪಾಸ್‌ಬುಕ್‌ನಲ್ಲಿ ನಮೂದಿಸಬಹುದು. ಇದರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದಾಗಿದೆ.
PM Kisan ಹಣ ಬಾರದಿದ್ದಾಗ ಏನು ಮಾಡಬೇಕು
PM Kisan 11ನೇ ಕಂತಿನ ಹಣ ನಿಮ್ಮ ಖಾತೆಗೆ ಬರದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 011-24300606ಗೆ ಕರೆ ಮಾಡಿ ಕಾರಣ ತಿಳಿಯಬಹುದು.
ಪಿಎಂ ಕಿಸಾನ್ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!
PM-CARES ಕೊರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಗುಡ್ನ್ಯೂಸ್!
ಜೊತೆಗೆ ನೀವು ಈ ಸಂಖ್ಯೆಗಳಿಗೆ ಸಹ ಕರೆ ಮಾಡಬಹುದು:-
PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261
PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401
ಪಿಎಂ ಕಿಸಾನ್‌ನ ಹೊಸ ಸಹಾಯವಾಣಿ: 011-24300606
PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109
ಇ-ಮೇಲ್ ಐಡಿ: pmkisan-ict@gov.in
Breaking: ರೈತ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದ ಕಿಡಿಗೇಡಿಗಳು!
Pm Kisan 11ನೇ ಕಂತು.. ರೈತರಿಗೆ ಮಹತ್ವದ ಮಾಹಿತಿ..! ಇಕೆವೈಸಿ ಮಾಡಲು ಮೇ 31 ಅಂತಿಮ ಗಡುವು!