ಪಿಎಂ ಕಿಸಾನ್‌ನ 13ನೇ ಕಂತಿಗಾಗಿ ರೈತರು ಕಾಯುತ್ತಿದ್ದು, ಅವರ ಕಾಯುವಿಕೆ ಇದೇ ವಾರದಲ್ಲಿ ಕೊನೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ 13ನೇ ಕಂತಿನ 2000 ರೂಪಾಯಿಗಳ ಸಹಾಯಧನವನ್ನು ಇದೇ ದಿನಾಂಕದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
Children Missing Case 9,018 ಮಕ್ಕಳು ರಾಜ್ಯದಲ್ಲಿ ನಾಪತ್ತೆ: ಆತಂಕಕ್ಕೆ ಕಾರಣವಾದ ಅಂಕಿ- ಅಂಶ!
6,000 ಸಾವಿರ ರೂಪಾಯಿ ಸಹಾಯಧನ
ರೈತರಿಗೆ ಆರ್ಥಿಕ ನೆರವು ನೀಡಲು ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019 ರಲ್ಲಿ ಪರಿಚಯಿಸಲಾಗಿತ್ತು.
ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ 6000 ರೂ. ತ್ರೈಮಾಸಿಕಕ್ಕೆ ಒಮ್ಮೆ ರೈತರಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ.
ಪಿಎಂ ಕಿಸಾನ್ 12ನೇ ಕಂತು
ಈಗಾಗಲೇ 11 ಕಂತುಗಳ ಪಿಎಂ ಕಿಸಾನ್ ರೈತರಿಗೆ ಕಳುಹಿಸಲಾಗಿದೆ.
ಈ ಸಂದರ್ಭದಲ್ಲಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 12 ನೇ ಕಂತು ಬಿಡುಗಡೆ ಮಾಡಿದರು.
ಸುಮಾರು 11 ಕೋಟಿ ಅರ್ಹ ರೈತರಿಗೆ 16,000 ಕೋಟಿ ಪಿಎಂ ಕಿಸಾನ್ ಪಾವತಿಸಲಾಗಿದೆ.
ಇದರ ಪ್ರಕಾರ 11 ಕೋಟಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2000 ರೂಪಾಯಿಗಳನ್ನು ನೀಡಲಾಗುತ್ತಿದೆ.
Aadhar Card -Sim Card Link ಸಿಮ್ ಕಾರ್ಡ್‌ಗೂ ಆಧಾರ್ ಕಾರ್ಡ್ ಜೋಡಣೆ: ಕಾರಣ ಏನು ಗೊತ್ತೆ ?
13ನೇ ಕಂತು
ಪಿಎಂ ಕಿಸಾನ್ ಯೋಜನೆಯಡಿ 13ನೇ ಕಂತಿನ ಮೊತ್ತವನ್ನು ಈ ವಾರ ಅಂದರೆ ಫೆಬ್ರವರಿ 24 ರಿಂದ 27 ರ ನಡುವೆ
ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಈ 2000 ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಸಬೇಕು.
ಕಳೆದ ವರ್ಷ ಈ ಮೊತ್ತವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ಮಾಡ್ತಿದೆ ಕೇಂದ್ರ; ಪೆಟ್ರೋಲ್, ಡಿಸೇಲ್ ದರ ಇಳಿಕೆ ?!
ಮಾಹಿತಿ ನೀಡದಿದ್ದರೆ ಹಣ ಕಡಿತ
ಇನ್ನೂ ತಮ್ಮ ಭೂ ದಾಖಲೆ ಮಾಹಿತಿ ಮತ್ತು ಇ-ಕೆವೈಸಿ ಮಾಹಿತಿ ನೋಂದಣಿ ಮಾಡದ ರೈತರು ಈ 13ನೇ ಕಂತು
ಪಡೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆ
ಈ ಯೋಜನೆಯಡಿ ವಂಚನೆಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ದೇಶದ ಲಕ್ಷಾಂತರ ಅನರ್ಹರು ಸರ್ಕಾರದ ಈ ಯೋಜನೆಯನ್ನು ಪಡೆಯುತ್ತಿದ್ದಾರೆ.
weather update ರಾಜ್ಯದಲ್ಲಿ ಇಂದು ಹವಾಮಾನ ಹೇಗಿದ, ಇಲ್ಲಿದೆ ಅಪ್ಡೇಟ್
ನೀವು ಎನು ಮಾಡಬೇಕು ಗೊತ್ತೆ ?
ಮೊದಲು ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಪರಿಶೀಲಿಸಬೇಕು.
ಯಾವುದೋ ಕಾರಣದಿಂದ ಹಣ ಬರದೇ ಇರಬಹುದು.
ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿಯೇ ನೀವು ಸ್ಥಿತಿಯನ್ನು ಪರಿಶೀಲಿಸಬಹುದು.
ಮೊದಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅದರ ನಂತರ, ಫಲಾನುಭವಿ ಸ್ಥಿತಿ (BeneficiaryStatus.aspx) ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಸಲ್ಲಿಸಿ.