ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ರೈತರ ಪಾಲಿಗೆ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ಬಿಜೆಪಿ ಸರ್ಕಾರದ ಜಾರಿಗೆ ತಂದಂತಹ ಎಲ್ಲಾ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆ ಅತೀ ಹೆಚ್ಚು ಪ್ರಸಿದ್ಧಿಯೂ ಪಡೆದಿದೆ. ಆದರೆ ಸುಳ್ಳು ಮಾಹಿತಿ ನೀಡಿದ ಫಲಾನುಭವಿಗಳು ಪಿಎಂ ಕಿಸಾನ್ ಮೊತ್ತ ವಾಪಸ್ಸು ಮಾಡುವ ಸಾಧ್ಯತೆಯಿದೆ.
ವಾಸ್ತವವಾಗಿ ಈ ಯೋಜನೆಯಡಿ 32.91 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ 2,326 ಕೋಟಿ ರೂಪಾಯಿ ಈಗಾಗಲೇ ಜಮೆಯಾಗಿದೆ. ಆದರೆ ಕೆಲವು ಸುಳ್ಳು ದಾಖಲೆ ನೀಡಿ ಪಿಎಂ ಕಿಸಾನ್ ಹಣ ಪಡೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹಣ ವಾಪಸ್ಸು ಕೊಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ..
ಪ್ರಸ್ತುತ ದೇಶದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 1153 ಲಕ್ಷ ಫಲಾನುಭವಿಗಳಿದ್ದಾರೆ. ಪ್ರತಿ ವರ್ಷ ಈ ಫಲಾನುಭವಿಗಳಿಗೆ ಪ್ರತಿ ಕಂತಿನ 2ಸಾವಿರದಂತೆ ಒಟ್ಟು 6 ಸಾವಿರ ರುಪಾಯಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಅನರ್ಹ ಫಲಾನುಭವಿಗಳು ಸಹ ಪಡೆಯುತ್ತಿದ್ದಾರೆ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ. ಆದಾಯ ತೆರಿಗೆ ಪಾವತಿಸುವ ಕೆಲ ರೈತರು ಯೋಜನೆಯ ಲಾಭ ಪಡೆಯುತ್ತಿದ್ದಾರೆ, ಆದ್ದರಿಂದ ರಾಜ್ಯ ಸರ್ಕಾರಗಳು ಅಂತಹ ರೈತರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು. ಸುಳ್ಳು ಮಾಹಿತಿ ಕೊಟ್ಟು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ಪಡೆದಿದ್ದರೆ ನಿಮಗೆ ಸರ್ಕಾರ ಯಾವುದೇ ಸಂದರ್ಭದಲ್ಲಿ ನೋಟಿಸ್ ನೀಡಬಹುದು.
ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳ ಪಟ್ಟಿ ಇಲ್ಲಿದೆ.
ಕೃಷಿ ಕೂಲಿ ಕಾರ್ಮಿಕರಿಗೆ ಈ ಹಣ ಸಿಗುವುದಿಲ್ಲ.
ಹಾಲಿ ಅಥವಾ ಮಾಜಿ ಸಂಸದರು, ಶಾಸಕರು, ಸಚಿವರು,
ನೋಂದಾಯಿತ ಇಂಜನೀಯರ್, ವೈದ್ಯರು, ವಕೀಲರು ಹಾಗೂ ಚಾರ್ಟಡ್ ಅಕೌಂಟೆಂಟ್
ಆದಾಯ ತೆರಿಗೆ ನೀಡುತ್ತಿರುವ ರೈತ ಪರಿವಾರದವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.
ರೈತ ನೊಬ್ಬ ಕೃಷಿ ಜಮೀನು ಹೊಂದಿದ್ದರೆ ತಿಂಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿದ್ದರೆ, ಯೋಜನೆಯ ಫಲಾನುಭವಿಯಾಗಲು ಸಾಧ್ಯವಿಲ್ಲ. ಮೇಲಿನವರು ಯಾರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುವುದಕ್ಕಾಗುವುದಿಲ್ಲ.
ಪಿಎಂ ಕಿಸಾನ್ (PM-Kisan) ಹಣ ಜಮೆಯಾಗಿದೆಯೇ? ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://pmkisan.gov.in/beneficiarystatus.aspx ಅಥವಾ ಗೂಗಲ್ ನಲ್ಲಿ pm kisan samman status ಅಂತ ಟೈಪ್ ಮಾಡಿ, know Beneficiary status-pm kisan ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್, ಅಕೌಂಟ್ ಅಥವಾ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬಹುದು.