News

ರೈತರಿಗೆ ಸಿಹಿ ಸುದ್ದಿ: ರೈತರ ಖಾತೆಗೆ 2 ಸಾವಿರ ರೂ. ಜಮಾ

19 December, 2020 12:12 PM IST By:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಪಿಎಂ-ಕಿಸಾನ್ ಎಂದೇ ಹೆಸರಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 7ನೇ ಕಂತಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಇಲ್ಲಿದೆ ಸಿಹಿ ಸುದ್ದಿ.

ಶುಕ್ರವಾರ ಮಧ್ಯಪ್ರದೇಶದ ರೈತರನ್ನುದ್ದೇಶಿಸಿ ಮಾತನಾಡಿ,  ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣ ನೀಡುವುದಾಗಿ ಅವರು ಹೇಳಿದರು. ಅಂದರೆ ಡಿಸೆಂಬರ್ 25ರಂದು ಪಿಎಂ-ಕಿಸಾನ್ ಯೋಜನೆಯ 7ನೇ ಕಂತು ರೈತರ ಖಾತೆಗೆ ಜಮೆಯಾಗಲಿದೆ

ದೇಶದ 14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಸದ್ಯದಲ್ಲೇ ರೈತರ ಖಾತೆಗೆ ಮತ್ತೊಂದು ಕಂತಿನ ಹಣ ಜಮಾ ಮಾಡಲಾಗುತ್ತದೆ.

ಈಗ ಮನೆಯಲ್ಲಿಯೇ ಕುಳಿತು 7ನೇ ಕಂತಿನ ಹಣದ ಸ್ಟೇಟಸ್ ನೋಡಿಕೊಳ್ಳಬಹುದು. ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್. https://pmkisan.gov.in/beneficiarystatus.aspx ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ PM KISSAN ಯೋಜನೆಯ 7 ನೆ ಕಂತಿನ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಬಹುದು.

ಏನಾದರೂ ತಾಂತ್ರಿಕ ದೋಷವಿದ್ದರೆ ಈ ಕೆಳಗೆ ನೀಡಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು.ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು.