News

ಮಾರ್ಚ್ 31ರೊಳಗೆ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿ4 ಸಾವಿರ ಪಡೆಯಿರಿ

27 March, 2021 6:05 PM IST By:
pm kisan

ದೇಶದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು 2 ಸಾವಿರ ರೂಪಾಯಿ ಜಮೆ ಮಾಡುತ್ತಿದೆ. ಈಗಾಗಲೇ ಏಳು ಕಂತಿನ ಹಣ ಜಮೆಯಾಗಿದೆ.

ಎಂಟನೇ ಕಂತಿನ ಹಣ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆದರೆ ಇಲ್ಲಿ ಇನ್ನೊಂದು ಸಂಗತಿ ಏನಂದರೆ, ಯಾರು ನೋಂದಣಿ ಮಾಡಿಸಿಕೊಂಡಿಲ್ಲವೋ ಅವರು ಮಾರ್ಚ್ 31ರೊಳಗೆ ನೋಂದಣಿ ಮಾಡಿಸಿದರೆ  7ನೇ ಕಂತಿನ ಹಣ ಹಾಗೂ ಏಪ್ರೀಲ್ ತಿಂಗಳಲ್ಲಿ 8ನೇ ಕಂತಿನ ಹಣ ಜಮೆಯಾಗಲಿದೆ.

ನೀವು ಇನ್ನೂ ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಳ್ಳದಿದ್ದರೆ ಕೂಡಲೇ ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾರ್ಚ್ 31ರೊಳಗೆ ನಿಮ್ಮ ಅರ್ಜಿ ಸ್ವೀಕೃತವಾದರೆ, ನೀವು ಎರಡು ಕಂತುಗಳನ್ನು ಅಂದರೆ 7 ಮತ್ತು 8ನೇ ಕಂತುಗಳನ್ನು ಒಟ್ಟಿಗೆ ಪಡೆಯುತ್ತೀರಿ. ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ನೋಂದಣಿ ಮಾಡಿಸುವುದು ಹೇಗೆ (How to Register for pm kisan Scheme)

ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ಗೆ ಹೋಗಿ https://pmkisan.gov.in/ ನಂತರ ಫಾರ್ಮರ್ಸ್ ಕಾರ್ನರ್ ಗೆ ಕ್ಲಿಕ್ ಮಾಡಬೇಕು. ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದು ಮಾಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು.

ಬ್ಯಾಂಕ್ ಖಾತೆ ವಿವರ ಹಾಗೂ ಜಮೀನಿನ ಮಾಹಿತಿ ಯನ್ನೂ ನೀಡಬೇಕು.  ಒಂದು ವೇಳೆ ನಿಮಗೆ ಆನ್ಲೈನ್ ನಲ್ಲಿ ಸಮಸ್ಯೆಯಾಗುತ್ತಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಕೃಷಿ ಇಲಾಖೆಗೆ ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸಬಹುದು.

ದಾಖಲಾತಿಗಳು(Documents):

ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಬೇರೆ ಗುರುತಿನ ದಾಖಲೆ ಒದಗಿಸಬೇಕಿದೆ. ಮೊದಲನೇ ಕಂತಿನ ಸಹಾಯ ಧನ ಪಡೆಯಲು ಆಧಾರ್ ಇಲ್ಲದ ರೈತರು ಮತದಾರರ ಗುರುತಿನ ಚೀಟಿ, ಡಿಎಲ್ ಇಲ್ಲವೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಫೋಟೋ ಸಹಿತ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ (for more information):

ಪಿಎಂ. ಕಿಸಾನ್ ಯೋಜನಾ ಹೆಲ್ಪ್ ಲೈನ್ ನಂಬರ್ 011-24300606, ಅಥವಾ ಪಿಎಂ ಕಿಸಾನ್ ಯೋಜನೆ ಟೋಲ್ ಫ್ರಿ ನಂ. 1800115526 ಗೆ ಸಂಪರ್ಕಿಸಬಹುದು.ಇದಲ್ಲದೆ ಹೆಲ್ಪ್ ಲೈನ್ 155261 ಕರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದು ಬಿಟ್ಟು ಕೇಂದ್ರ ಕೃಷಿ ಸಚಿವಾಲಯ 011-23381092 ಗೆ ಕರೆ ಮಾಡಬಹುದು.