News

ರೈತರಿಗೆ ಸಂತಸದ ಸುದ್ದಿ- ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನ 20 ಸಾವಿರ ಕೋಟಿ ರೈತರ ಖಾತೆಗೆ ಜಮೆ

14 May, 2021 5:25 PM IST By:

ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನ ಹಣ ತಡವಾದರೂ ಮೇ 14 ರಂದು ದೇಶದ ರೈತರ ಖಾತೆಗೆ 8ನೇ ಕಂತಿನ ಹಣ ಜಮೆಯಾಗಿದೆ. 8ನೇ ಕಂತಿನ ಶುಕ್ರವಾರ 9.5 ಕೋಟಿಗಿಂತ ಹೆಚ್ಚಿನ ರೈತರ ಖಾತೆಗೆ  ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ.

ಸುಮಾರು 20 ಸಾವಿರ ಕೋಟಿ ಮೊತ್ತ ಬಿಡುಗಡೆ ಮಾಡಲಾಗಿದ್ದು, 9.5 ಕೋಟಿಗೂ ಹೆಚ್ಚು ರೈತರಿಗೆ ಇದರ ಪ್ರಯೋಜನ ದೊರೆಯಲಿದೆ.  ಏಪ್ರೀಲ್ ತಿಂಗಳ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರ ರೈತರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡು ವಾರಗಳ ನಂತರ ಫಲಾನುಭವಿಗಳ  ಖಾತೆಗೆ ಹಣ ಜಮೆಯಾಗಿದೆ.

ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಸಹ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿ, ಪಶ್ಚಿಮ ಬಂಗಾಳವೂ ಯೋಜನೆಯಲ್ಲಿ ಸೇರಿಕೊಂಡಿದೆ. ಬಂಗಾಳದ 7 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನೆ ದೊರೆಯುತ್ತಿದೆ ಎಂದು ಹೇಳಿದ್ದಾರೆ.

ಹಣ ಬಿಡುಗಡೆ ಮಾಡಿದ ಬಳಿಕ ಮೋದಿಯವರು ಉತ್ತರ ಪ್ರದೇಶ, ಮಹಾರಾಷ್ಟ್ರ. ಆಂಧ್ರಪ್ರದೇಶ, ಮೇಘಾಲಯ, ಜಮ್ಮುಕಾಶ್ಮೀರ ಹಾಗೂ ಅಂಡಮಾನ್ ನಿಕೋಬಾರ ರೈತರ ಜೊತೆ ಸಂವಾದ ನಡೆಸಿದರು.

ದೇಶಾದ್ಯಂತ ಸುಮಾರು 9 ಕೋಟಿ ರೈತರ ಖಾತೆಗೆ  7ನೇ ಕಂತಿನ ಹಣ ಕಳೆದ ವರ್ಷ ಡಿಸೆಂಬರ್ 25 ರಂದು ಜಮೆ ಮಾಡಲಾಗಿತ್ತು. ನಿಮ್ಮ ಖಾತೆಗೆ  ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನಹಣ ಜಮೆಯಾಗಿರುವ  ಸ್ಟೇಟಸ್ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು.

ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ. ಸ್ಟೇಟಸ್ ನೋಡಲು ಈ ಮುಂದಿನ ಲಿಂಕ್  https://pmkisan.gov.in/beneficiarystatus.aspx  ಮೇಲೆ ಕ್ಲಿಕ್ ಮಾಡಿದರೆ ಸಾಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿ ಮೊಬೈಲ್ ನಂಬರ್ ನಮೂದಿಸಿ ಗೋ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಸ್ಟೇಟಸ್ ನೋಡಬಹುದು.

ನಿಮ್ಮ ಖಾತೆಗೆ ಹಣ ಜಮೆಯಾಗಿದ್ದಲ್ಲವೆಂದರೆ ಈ ಕೆಳಗೆ ನೀಡಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು. ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು.