News

kisan samman: ರೈತರ ಖಾತೆಗೆ ಈ ದಿನಾಂಕದಂದು 11ನೇ ಕಂತಿನ ಹಣ ಬರೋದು ಫಿಕ್ಸ್

22 March, 2022 2:29 PM IST By: KJ Staff
PM Kisan: Farmers Will Get 11th Installment on This Date

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಯ 11 ಕಂತನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ವರದಿಗಳಾಗಿವೆ. ಮೂಲಗಳ ಪ್ರಕಾರ, ಅಗತ್ಯವಿರುವ ಎಲ್ಲಾ ದಾಖಲೆಗಳು ಅಥವಾ ದಾಖಲಾತಿಗಳನ್ನು ಪೂರ್ಣಗೊಳಿಸಿರುವುದರಿಂದ, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ರೈತರ ಖಾತೆಗೆ ಯಾವಾಗ ಬೀಳುತ್ತೆ ಹಣ..?
11ನೇ ಕಂತು (ಏಪ್ರಿಲ್ ನಿಂದ ಜುಲೈ) ಏಪ್ರಿಲ್ ಮೊದಲ ವಾರದಲ್ಲಿ ವರ್ಗಾವಣೆಯಾಗಲಿದೆ ಎನ್ನಲಾಗುತ್ತಿದೆ .ಈ ಕಂತಿನಲ್ಲಿ ಒಟ್ಟು 11 ಕೋಟಿ ರೈತರ ಬ್ಯಾಂಕ್ ಖಾತೆಗೆ 2000 ರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವರ್ಗಾವಣೆಯಾಗಲಿದೆ .ಜನವರಿ 1, 2022 ರಂದು, ಫಲಾನುಭವಿಗಳು PM ಕಿಸಾನ್ ಯೋಜನೆಯಡಿಯಲ್ಲಿ ತಮ್ಮ 10 ನೇ ಕಂತಿನ ಹಣವನ್ನ ತಮ್ಮ ಖಾತೆಗಳಿಗೆ ಪಡೆದುಕೊಂಡಿದ್ದರು. ಕಂತನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಮೋದಿ ಅವರು 2018 ರಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದರು.
ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಸಂಪೂರ್ಣವಾಗಿ ಭಾರತ ಸರ್ಕಾರದಿಂದ ಧನಸಹಾಯ ಪಡೆದಿದೆ. ಈ ಯೋಜನೆಯಡಿ, ಅರ್ಹ ರೈತರಿಗೆ ವಾರ್ಷಿಕ 6,000 ರೂ.ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳ ಕಂತುಗಳಲ್ಲಿ ವಿತರಿಸಲಾಗುತ್ತದೆ.ಮತ್ತು ಇದುವರೆಗೆ ಅನೇಕ ಅರ್ಹ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಇಲ್ಲಿಯವರೆಗೆ ಸುಮಾರು 20,900 ಕೋಟಿ ರೂ.ಗಳನ್ನು 10.09 ಕೋಟಿಗೂ ಹೆಚ್ಚು ರೈತರಿಗೆ ವರ್ಗಾಯಿಸಲಾಗಿದೆ.

PM ಕಿಸಾನ್ ಇತ್ತೀಚಿನ ಅಪ್‌ಡೇಟ್‌ ಏನು..?
ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಪ್ರಕಾರ , ಯೋಜನೆಯಡಿ ನೋಂದಾಯಿಸಲಾದ ರೈತರಿಗೆ ಇ-ಕೆವೈಸಿ ಅಗತ್ಯವಾಗಿದೆ. eKYC ಅನ್ನು ಪೂರ್ಣಗೊಳಿಸಲು, ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ, ನೀವು 'ಫಾರ್ಮರ್ಸ್ ಕಾರ್ನರ್' ಅನ್ನು ಕಾಣಬಹುದು, ಇಲ್ಲಿ ಆಧಾರ್ ಆಧಾರಿತ OTP ಪರಿಶೀಲನೆಗಾಗಿ e-KYC ಆಯ್ಕೆಯನ್ನು ಕ್ಲಿಕ್ ಮಾಡಿ. ಮತ್ತು ಬಯೋಮೆಟ್ರಿಕ್ ಪರಿಶೀಲನೆಗಾಗಿ, ನಿಮ್ಮ ಹತ್ತಿರದ CSC ಕೇಂದ್ರವನ್ನು ಸಂಪರ್ಕಿಸಿ. ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುವ ರೈತರು ಆದಷ್ಟು ಬೇಗ ಪಿಎಂ ಕಿಸಾನ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬೇಕು. ಇನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಇಕೆವೈಸಿ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ. ಮುಂದಿನದನ್ನು ಪಡೆಯಲು ಎಲ್ಲಾ ಫಲಾನುಭವಿಗಳು ತಮ್ಮ ವಿವರಗಳನ್ನು ಪೂರ್ಣಗೊಳಿಸಬೇಕು..

ಸಾಮಾನ್ಯವಾಗಿ, ಒಂದನೇ ಅವಧಿ ಏಪ್ರಿಲ್-ಜುಲೈ ನಡುವೆ, ಎರಡನೇ ಅವಧಿ ಆಗಸ್ಟ್ ನಿಂದ ನವೆಂಬರ್ ನಡುವೆ ಮತ್ತು ಮೂರನೇ ಅವಧಿ ಡಿಸೆಂಬರ್ ನಿಂದ ಮಾರ್ಚ್ ನಡುವೆ ಬರುತ್ತದೆ. ಈಗ ಯಾವುದೇ ಸಮಯದಲ್ಲಿ ಸರ್ಕಾರವು 11 ನೇ ಕಂತನ್ನು ಘೋಷಿಸಬಹುದು ಎನ್ನಲಾಗ್ತಿದೆ.