News

PM KISSAN ಯೋಜನೆಯ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ..ಚೆಕ್ ಮಾಡಿ

31 March, 2021 4:37 PM IST By:
farmer

ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಗುಡ್ ನ್ಯೂಸ್ . ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತು (ಪಿಎಂ ಕಿಸಾನ್) ಅನ್ನು ಸರ್ಕಾರ ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. 

ಪ್ರಧಾನಿ ನರೇಂದ್ರ ಮೋದಿ ಅವರು 2020ರ ಡಿಸೆಂಬರ್ 25ರಂದು ಪಿಎಂ ಕಿಸಾನ್ ಯೋಜನೆಯ ಏಳನೇ ಕಂತು ಬಿಡುಗಡೆ ಮಾಡಿದ್ದರು. ಈಗ 8ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.  ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪಿಎಂ ಕಿಸಾನ್ 8ನೇ ಕಂತಿನ ಹಣ ಬಿಡುಗಡೆ (PM kisan 8th installment fund will release) ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಹೀಗೆ ಮಾಡಿ. ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/Rpt_BeneficiaryStatus_pub.aspx ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ನ ಹೊಸ beneficiary ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ, ಇಲ್ಲಿ A to zಕ್ರಮವಾಗಿ ಹೆಸರು ಇರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿ ಕೆಳಗಡೆ ಕ್ಲಿಕಿ ಮಾಡಿದರೆ ಸಾಕು ಅಲ್ಲಿ ನಿಮ್ಮ ಹೆಸರು ಇರುವುದನ್ನು ನೋಡಿಕೊಳ್ಳಬಹುದು.

ಹೊಸ benificiary  ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಅಥವಾ ಏನಾದರೂ ತಾಂತ್ರಿಕ ದೋಷವಿದ್ದರೆ ಈ ಕೆಳಗೆ ನೀಡಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು.ನಿಮಗೆ ಹಣ ಜಮೆಯಾಗುವಲ್ಲಿ, ಅಥವಾ ನೋಂದಣಿಯಲ್ಲಿ ಸಮಸ್ಯೆಯುಂಟಾದರೆ ಈ ಕೆಳಗಿನ ನಂಬರಿಗೆ ಸಂಪರ್ಕಿಸಬಹುದು.

ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು.

ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡು ಈ ಲಿಂಕ್ ಕ್ಲಿಕ್ ಮಾಡಿ. https://pmkisan.gov.in/beneficiarystatus.aspx ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿ ಮೊಬೈಲ್ ನಂಬರ್ ನಮೂದಿಸಿ ಗೋ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಸ್ಟೇಟಸ್ ನೋಡಬಹುದು.

ಪಿಎಂ ಕಿಸಾನ್ ಯೋಜನೆಯಡಿ ನಿಮ್ಮ ಹೆಸರು ನೋಂದಾಯಿಸಿದ್ದರೆ ಇದೇ ಮಾರ್ಚ್ 31 ರೊಳಗೆ ನೋಂದಣಿ ಮಾಡಿಸಿ ಎರಡು ಕಂತಿನ 4 ಸಾವಿರ ರೂಪಾಯಿ ಲಾಭ ಪಡೆಯಬಹುದು.

ಪಿಎಂ ನೋಂದಾಯಿಸುವುದು ಹೇಗೆ ?

ಪ್ರಧಾನಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಸಾಕಷ್ಟು ಸುಲಭವಾಗಿದೆ. ನೋಂದಣಿ ಪಕ್ರಿಯೆ ಹೀಗಿದೆ :

https://pmkisan.gov.in/RegistrationForm.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ  ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ಕ್ಯಾಪ್ಚಾ ಕೋಡ್ ಬರೆದು  ರಾಜ್ಯ ಸೆಲೆಕ್ಟ್ ಮಾಡಿಕೊಂಡು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಬ್ಯಾಂಕ್ ಖಾತೆ ಮಾಹಿತಿ ಮತ್ತು ಕೃಷಿ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸೇವ್ ಕೊಳ್ಳಬೇಕು.

ಏನಾದರೂ ಸಮಸ್ಯೆಯುಂಟಾದರೆ ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು