ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಡಿಸೆಂಬರ್ 25 ರಂದು ಕ್ರಿಸ್‍ಮಸ್ ದಿನ ರೈತರ ಖಾತೆಗೆ ಹಣ ಜಮೆಯಾಗಲಿದೆ.
ಕಳೆದ ಶುಕ್ರವಾರ ಮಧ್ಯಪ್ರದೇಶದಲ್ಲಿ ರೈತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 7ನೇ ಕಂತಿನ ಹಣ ಅಂದೇ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದ್ದರಿಂದ ಎಲ್ಲಾ ರೈತರು ಡಿ. 25 ರಂದು ಹಣ ಜಮೆಯಾಗುತ್ತದೆಂಬ ಸಂತಸದಲ್ಲಿದ್ದಾರೆ.
2019 ರಲ್ಲಿ ಆರಂಭವಾದ ಈ ಯೋಜನೆಯಿಂದಾಗಿ ವಾರ್ಷಿಕವಾಗಿ ಪ್ರತಿ ರೈತರ ಖಾತೆಗೆ 6 ಸಾವಿರ ರೂಪಾಯಿ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ಜಮೆಯಾಗುತ್ತಿದೆ.
ಕ್ರಿಸ್ಮಸ್ ದಿನ ಪ್ರತಿ ಫಲಾನುಭವಿಗೆ ತಲಾ 2000 ರೂಪಾಯಿಯಂತೆ ಒಟ್ಟು 18,000 ಕೋಟಿ ರೂಪಾಯಿ ಜಮೆಯಾಗಲಿದೆ. ಕ್ರಿಸ್‍ಮಸ್ ದಿನ ರೈತರ ಖಾತೆಗೆ 2000 ರೂಪಾಯಿ ಜಮೆ ಪಾವತಿಗೆ ಚಾಲನೆ ನೀಡಿದೆ ಅವರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್. https://pmkisan.gov.in/beneficiarystatus.aspx ಕ್ಲಿಕ್ ಮಾಡಿ