ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳಲ್ಲಿ (PM Kisan) ಪಿ.ಎಂ ಕಿಸಾನ್ ಯೋಜನೆಯು ಮಹತ್ವದ್ದಾಗಿದೆ.
ಕೇಂದ್ರ ಸರ್ಕಾರವು ಇದೀಗ 15ನೇ ಕಂತಿನ PM Kisan ಹಣ ಬಿಡುಗಡೆ ಯಾವಾಗ ಆಗುತ್ತದೆ ಎನ್ನುವುದರ ಬಗ್ಗೆ ಮಹತ್ವದ ಸುಳಿವೊಂದನ್ನು ನೀಡಿದೆ.
ಈಗಾಗಲೇ ರೈತರು 14ನೇ ಕಂತಿನ ಪಿಎಂ ಕಿಸಾನ್ ಹಣವನ್ನು ಮೂರು ತಿಂಗಳುಗಳ ಹಿಂದೆ ಪಡೆದಿದ್ದು,
ಇದೀಗ 15ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಇದ್ದಾರೆ.
ರೈತರ ನಿರೀಕ್ಷೆಯನ್ನು ಕೇಂದ್ರ ಸರ್ಕಾರವೂ ಸಹ ಸುಳ್ಳು ಮಾಡಿಲ್ಲ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ದೇಶದ 9 ಕೋಟಿಗೂ ಅಧಿಕ
ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳ ಆರ್ಥಿಕ ಬೆಂಬಲವನ್ನು ನೀಡುತ್ತಿದೆ.
ಅದರಂತೆ ಇಲ್ಲಿಯವರೆಗೆ 14 ಕಂತುಗಳನ್ನು ಯಶಸ್ವಿಯಾಗಿ ವರ್ಗಾವಣೆ ಮಾಡಿದೆ.
ಸದ್ಯ ದೇಶದ ಕೋಟ್ಯಾಂತರ ರೈತರು 15 ಕಂತನ್ನು ಎದುರು ನೋಡುತ್ತಿದ್ದು,
ಇದೀಗ 15 ನೇ ಕಂತು ರಿಲೀಸ್ ಯಾವಾಗ ಎಂಬುದಕ್ಕೆ ಉತ್ತರ ದೊರಕಿದೆ.
ಹೌದು ಮೂಲಗಳ ಪ್ರಕಾರ ನವೆಂಬರ್ 30 ರ ಒಳಗಾಗಿ 15 ನೇ ಕಂತನ್ನು ಸರ್ಕಾರ ರೈತರ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ವರದಿಗಳಾಗಿವೆ.
ಆದರೆ, ಈ ಕುರಿತು ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಆದ್ಯಾಗೂ ನವೆಂಬರ್ 30ರ
ಒಳಗಾಗಿ ಹಣ ಖಾತೆಗೆ ಬರುವುದು ಫಿಕ್ಸ್ ಎನ್ನುತ್ತವೆ ಮೂಲಗಳು.
ಇನ್ನು ಅಕ್ಟೋಬರ್ 15ರ ಒಳಗಾಗಿ ಇಕೆವೈಸಿ ಮಾಡಿಸಲು ಅವಕಾಶ ಮಾಡಿಕೊಟ್ಟಿದ್ದು,
ಇಕೆವೈಸಿ ಮಾಡಿದ ಫಲಾನುಭವಿಗಳಿಗೆ ಮಾತ್ರ ಹಣ ಬರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಅರಿಶಿಣ ಮಂಡಳಿ ಸ್ಥಾಪನೆ: ಪ್ರಧಾನಿ ನರೇಂದ್ರ ಮೋದಿ
ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇನ್ನೂ ಹಲವು ಯೋಜನೆಗಳನ್ನು ತರಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ಅವರು ಪುನರುಚ್ಛರಿಸಿದ್ದಾರೆ.
ಅರಿಶಿಣ ಬೆಳೆವ ರೈತರ ಅಗತ್ಯತೆ ಹಾಗೂ ಅನುಕೂಲ ಮಾಡುವ ಉದ್ದೇಶದಿಂದ ರಾಷ್ಟ್ರೀಯ
ಅರಿಶಿಣ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.
ಇದರಿಂದಾಗಿ ಪೂರೈಕೆಯಲ್ಲಿ ಮೌಲ್ಯವರ್ಧನೆ, ಮೂಲಸೌಕರ್ಯದ ವರೆಗೆ ದೇಶದ ವಿವಿಧ ಭಾಗದ ರೈತರಿಗೆ ಸಹಾಯವಾಗಲಿ ಎಂದಿದ್ದಾರೆ.
ಇನ್ನು ಕೇಂದ್ರ ಸರ್ಕಾರವು ರೈತರ ಯೋಗಕ್ಷೇಮ ಮತ್ತು ಸಮೃದ್ಧಿಗೆ ಆದ್ಯತೆ ನೀಡುತ್ತದೆ.
ಅರಿಶಿಣ ಬೆಳೆವ ರೈತರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮತ್ತು ಅವರಿಗೆ ಸೂಕ್ತವಾದ ಬೆಂಬಲವನ್ನು
ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಈಚೆಗೆ ಹೇಳಿದ್ದಾರೆ.