News

PM Kisan: ಪಿಎಂ ಕಿಸಾನ್‌ 11ನೇ ಕಂತು ವಿಳಂಬವಾಗ್ತಿರೋದ್ಯಾಕೆ..?ಇಲ್ಲಿವೆ ಕಾರಣ

14 May, 2022 11:43 AM IST By: Maltesh
PM kisan

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ದೇಶದ ಪ್ರತಿ ರೈತ ಕುಟುಂಬವು ಸರ್ಕಾರದಿಂದ ವಾರ್ಷಿಕ 6,000 ರೂಪಾಯಿಗಳನ್ನು ಆರ್ಥಿಕ ನೆರವು ಪಡೆಯಲು ಅರ್ಹವಾಗಿದೆ. ಈ ಹಣವನ್ನು 3 ಸಮಾನ ಕಂತುಗಳಲ್ಲಿ ತಲಾ 2,000 ರೂಗಳಂತೆ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಈ ಮೊದಲು 11ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ ಹಾಗೂ  ಕಳೆದ ವರ್ಷದಂತೆ ಈ ಬಾರಿಯೂ ಮೇ ತಿಂಗಳಿನಲ್ಲಿಯೇ ಕಂತು ಬರುವ ನಿರೀಕ್ಷೆ ಇದೆ. ಮೇ 3 ರಂದು 11 ನೇ ಕಂತು ಬರುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಸದ್ಯ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತು ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ.

ಕಳೆದ ವರ್ಷ, ಏಪ್ರಿಲ್-ಜುಲೈ ಕಂತನ್ನು ಮೇ 15 ರಂದು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಷ, ಮೇ 31 PM ಕಿಸಾನ್ eKYC ಅನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವಾಗಿದೆ. ಕಳೆದ ವರ್ಷ ಈ ಪ್ರಕ್ರಿಯೆ ಕಡ್ಡಾಯವಾಗಿರಲಿಲ್ಲ.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

ಪಿಎಂ ಕಿಸಾನ್‌ 11ನೇ ಕಂತು ವಿಳಂಬವಾಗ್ತಿರೋದ್ಯಾಕೆ..?

ಪಿಎಂ ಕಿಸಾನ್ ಇಕೆವೈಸಿ: ಪಿಎಂ ಕಿಸಾನ್ ಯೋಜನೆ (PM Kisan): ನೀವು ಪಿಎಂ ಕಿಸಾನ್‌ನ ಫಲಾನುಭವಿಯಾಗಿದ್ದರೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ಮುಂದಿನ ಕಂತು ನಿಮ್ಮ ಖಾತೆಗೆ ಬರಬೇಕಾದರೆ ನಿಮ್ಮ ಇಕೆವೈಸಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ. ಎಲ್ಲಾ PM ಕಿಸಾನ್ ಫಲಾನುಭವಿಗಳಿಗೆ 31 ಮೇ 2022 ರ ಮೊದಲು eKYC ಅನ್ನು ಪೂರ್ಣಗೊಳಿಸಲು ಸರ್ಕಾರವು ಈ ಮೊದಲೇ ತಿಳಿಸಿದೆ. ಇದು ಯಾವುದೇ ದೋಷಗಳಿಲ್ಲದೆ ಪೂರ್ಣಗೊಂಡಿದ್ದರೆ 11 ನೇ ಕಂತು ನೇರವಾಗಿ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ..

ಅನರ್ಹ ಫಲಾನುಭವಿಗಳಿಂದ ಹಣ ವಸೂಲಿ:  ಪಿಎಂ ಕಿಸಾನ್ (PM Kisan ) ಹಣವನ್ನು ಅನ್ಯ ಮಾರ್ಗಗಳ ಮೂಲಕ ಪಡೆಯುತ್ತಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಚಾಟಿ ಬೀಸಿದೆ. ಹೌದು ಇತ್ತೀಚಿಗೆ ಕೆಲ ಫಲಾನುಭವಿಗಳು ಒಂದೇ ಜಮೀನಿನ ಹೆಸರಿನ ಮೇಲೆ ಇಬ್ಬಿಬ್ಬರು  ಪಿಎಂ ಕಿಸಾನ್ (PM Kisan ) ಹಣವನ್ನು ಪಡೆದಿರುವುದು ಖಾತ್ರಿಯಾಗಿದೆ.  ಇದನ್ನು ಗಂಭಿರವಾಗಿ ಪರಿಗಣಿಸಿರುವ ಕೇಂದ್ರವು ಅನರ್ಹ ಫಲಾನುಭವಿಗಳ ಪತ್ತೆಗೆ ತೀವ್ರವಾದ ಪರಿಶೀಲನೆಯನ್ನು ನಡೆಸಿದೆ ಎನ್ನಲಾಗುತ್ತಿದೆ.

ಕೆವೈಸಿ ನಂತರ, ಅನರ್ಹ ಫಲಾನುಭವಿಗಳು ಯೋಜನೆಯಡಿ ಪಡೆದ ಹಣವನ್ನು ಹಿಂತಿರುಗಿಸಲು ಕೇಳಲಾಗುತ್ತದೆ. ಪಿಎಂ ಕಿಸಾನ್ ಪೋರ್ಟಲ್, https://pmkisan.gov.in/ ಮೂಲಕ ಹಣವನ್ನು ಆನ್‌ಲೈನ್‌ನಲ್ಲಿ ಮರುಪಾವತಿ ಮಾಡಬಹುದು.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

ಭೂ ಹಿಡುವಳಿ ಮಿತಿ : ಈ ಹಿಂದೆ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತ ಕುಟುಂಬಗಳು ಮಾತ್ರ ಕಂತು ಪಡೆಯಲು ಅರ್ಹರಾಗಿದ್ದರು. ಇದೀಗ ಇದಕ್ಕೆ,  ಮಿತಿಯನ್ನು ಮಾಡಲಾಗಿದೆ. ಎಲ್ಲಾ ರೈತ ಕುಟುಂಬಗಳು ಈಗ ಅರ್ಹವಾಗಿವೆ. ಇದು ವಿಳಂಬಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಡಿಜಿಟಲ್ ನಿರ್ವಹಣೆಗೆ ಒತ್ತು : ರೈತರ ಸಂಕಷ್ಟ ನಿವಾರಿಸಲು ಲೆಕ್ಕಾಧಿಕಾರಿಗಳು, ಕನುಂಗೋರು ಹಾಗೂ ಕೃಷಿ ಅಧಿಕಾರಿಗಳಿಂದ ಪರಿಶೀಲನೆ ನಡೆಸುವ ಅಗತ್ಯವನ್ನು ಸರಕಾರ ದೂರ ಮಾಡಿದೆ . ಈಗ, ರೈತರು ತಮ್ಮ ಆಧಾರ್ ಕಾರ್ಡ್ ಬಳಸಿ ತಮ್ಮ ಮನೆಯಲ್ಲಿ ಕುಳಿತು ಯೋಜನೆಗೆ ನೋಂದಾಯಿಸಿಕೊಳ್ಳಬಹುದು. 

ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ಬದಲಾವಣೆಗಳು : ಈಗ, ಕೆಸಿಸಿಯನ್ನು ಪಿಎಂ ಕಿಸಾನ್ ಯೋಜನೆಯೊಂದಿಗೆ ಜೋಡಿಸಲಾಗಿದೆ. ಕಾರ್ಡ್ ಬಳಸಿ, ರೈತರು ವಾರ್ಷಿಕ ಶೇ 4 ಬಡ್ಡಿ ದರದಲ್ಲಿ 3 ಲಕ್ಷ ರೂ. ಯೋಜನೆಯಡಿ ಪಡೆದ ಹಣವನ್ನು ಖರ್ಚು ಮಾಡಲು ರೈತರು ಈಗ ಕಾರ್ಡ್ ಅನ್ನು ಬಳಸಬಹುದು. ಇವೆಲ್ಲ ಕಾರಣಗಳಿಂದಾಗಿ ಕೆಲಸಗಳು ಇನ್ನು ಪ್ರಗತಿಯಲ್ಲಿದ್ದು 11ನೇ ಕಂತಿನ ಬಿಡುಗಡೆಗೆ ತಡವಾಹಗತಿದೆ ಎಂದು ಹೇಳಲಾಗುತ್ತಿದೆ.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!