News

ಇನ್ನು 4 ದಿನದಲ್ಲಿ ಈ ಕೆಲಸ ಪೂರ್ಣವಾಗದಿದ್ದರೆ ನಿಮ್ಮ ಅಕೌಂಟ್‌ಗೆ PM ಕಿಸಾನ್ ಹಣ ಬರೋದೆ ಇಲ್ಲ..!

27 May, 2022 11:41 AM IST By: Maltesh
PM Kisan

ಪಿಎಂ ಕಿಸಾನ್‌ನ 11 ನೇ ಕಂತನ್ನು(PM Kisan 11th Installmen)  ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಇತ್ತೀಚಿಗೆ ಹೇಳಿದ್ದಾರೆ. ಆದ್ದರಿಂದ ಅದಕ್ಕೂ ಮೊದಲು, ಎಲ್ಲಾ ಫಲಾನುಭವಿಗಳು eKYC ಅನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅವರಿಗೆ 11ನೇ ಕಂತಿನ ಹಣ ಖಾತೆಗೆ ಜಮೆ ಆಗುವುದಿಲ್ಲ.

ಈ ಸಮಯದಲ್ಲಿ eKYC ಪೂರ್ಣವಾಗಿಲ್ಲದಿದ್ದರೆ ಕೇಂದ್ರವು ನಿಮ್ಮ ಬ್ಯಾಂಕ್ ಖಾತೆಯಲ್ಲಿ 2000.ರೂ ಗಳು ಬರುವುದರಲ್ಲಿ ವಿಳಂಬ ಉಂಟಾಗಬಹುದಾಗಿದೆ. ಆದ್ದರಿಂದ ಅದಕ್ಕೂ ಮೊದಲು, ಎಲ್ಲಾ ಫಲಾನುಭವಿಗಳು ಅಗತ್ಯವಿರುವ ಕೆಲಸವನ್ನು ಪೂರ್ಣಗೊಳಿಸಬೇಕು.

ಪಿಎಂ ಕಿಸಾನ್ ಯೋಜನೆ (PM Kisan): ನೀವು ಪಿಎಂ ಕಿಸಾನ್‌ನ ಫಲಾನುಭವಿಯಾಗಿದ್ದರೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ಮುಂದಿನ ಕಂತು ನಿಮ್ಮ ಖಾತೆಗೆ ಬರಬೇಕಾದರೆ ನಿಮ್ಮ ಇಕೆವೈಸಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ. ಎಲ್ಲಾ PM ಕಿಸಾನ್ ಫಲಾನುಭವಿಗಳಿಗೆ 31 ಮೇ 2022 ರ ಮೊದಲು eKYC ಅನ್ನು ಪೂರ್ಣಗೊಳಿಸಲು ಸರ್ಕಾರವು ಈ ಮೊದಲೇ ತಿಳಿಸಿದೆ. ಇದು ಯಾವುದೇ ದೋಷಗಳಿಲ್ಲದೆ ಪೂರ್ಣಗೊಂಡಿದ್ದರೆ 11 ನೇ ಕಂತು ನೇರವಾಗಿ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ..

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

Pm Kisan ಬ್ರೇಕಿಂಗ್; ಈ ದಿನ ಫಿಕ್ಸ್ ಬರಲಿದೆ ರೈತರ ಖಾತೆಗೆ 11ನೇ ಕಂತಿನ ಹಣ! ಕೃಷಿ ಸಚಿವರಿಂದ ಸ್ಪಷ್ಟನೆ..

PM ಕಿಸಾನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, PMKISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ ಮತ್ತು ಇದಕ್ಕಾಗಿ ನೀವು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ನಿಮ್ಮ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬೇಕು.

eKYC ಏಕೆ ಕಡ್ಡಾಯವಾಗಿದೆ

ಕಳೆದ ವರ್ಷ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ರೈತರಿಗೆ eKYC ಅನ್ನು ಕಡ್ಡಾಯಗೊಳಿಸಿತ್ತು. ವಂಚಕರು ಮತ್ತು ಅನರ್ಹರು ಈ ಯೋಜನೆಯ ಲಾಭವನ್ನು ಪಡೆಯುವುದನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ರೈತರು 31 ಮೇ 2022 ರ ಮೊದಲು eKYC ಅನ್ನು ಭರ್ತಿ ಮಾಡಬೇಕು.

ಪಿಎಂ ಕಿಸಾನ್ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ

ಕೆಳಗೆ ನೀಡಲಾದ ಹಂತಗಳನ್ನು ಎಚ್ಚರಿಕೆಯಿಂದ ಅನುಸರಿಸಿ;

ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

PM Kisan: ಈ ವಾರಾಂತ್ಯದಲ್ಲಿ ರೈತರ ಬ್ಯಾಂಕ್‌ ಖಾತೆಗಳಿಗೆ ಜಮಾ ಆಗಲಿದೆಯೇ ಹಣ..?

Pm Kisan 11ನೇ ಕಂತು.. ರೈತರಿಗೆ ಮಹತ್ವದ ಮಾಹಿತಿ..! ಇಕೆವೈಸಿ ಮಾಡಲು ಮೇ 31 ಅಂತಿಮ ಗಡುವು!

'ಫಾರ್ಮರ್ಸ್ ಕಾರ್ನರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ 'ಫಲಾನುಭವಿ ಸ್ಥಿತಿ' ಮೇಲೆ ಕ್ಲಿಕ್ ಮಾಡಿ.

ಈಗ ನೀವು ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆ ಮಾಡಿದ ನಂತರ ವಿವರಗಳನ್ನು ಭರ್ತಿ ಮಾಡಿ

ನಂತರ ನಿಮ್ಮ ವಹಿವಾಟುಗಳು ಅಥವಾ ಪಾವತಿಗಳ ಎಲ್ಲಾ ವಿವರಗಳನ್ನು ಪಡೆಯಲು 'ಡೇಟಾ ಪಡೆಯಿರಿ' ಕ್ಲಿಕ್ ಮಾಡಿ.

PM ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ವೆಬ್‌ಸೈಟ್‌ಗೆ ಹೋಗಿ ಮತ್ತು ಮುಖಪುಟದಲ್ಲಿ ''ಫಾಮರ್ಸ್ ಕಾರ್ನರ್' ಎಂದು ಹುಡುಕಿ. ನಂತರ ' ಫಲಾನುಭವಿಗಳ ಪಟ್ಟಿ 'ಮೇಲೆ ಕ್ಲಿಕ್ ಮಾಡಿ. ಈಗ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮಗಳಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ. ಪಡೆಯಿರಿ ವರದಿಯ ಮೇಲೆ ಕ್ಲಿಕ್ ಮಾಡಿ. ಫಲಾನುಭವಿಗಳ ಪಟ್ಟಿಯು ಪರದೆಯ ಮೇಲೆ ಕಾಣಿಸುತ್ತದೆ, ಆದ್ದರಿಂದ ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?