News

PM Fasal Bima Scheme: ತಪ್ಪದೇ ಬೆಳೆ ವಿಮೆ ಪಡೆಯಲು ರೈತರಿಗೆ ಸಲಹೆ, ಅರ್ಜಿ ಸಲ್ಲಿಕೆಗೆ ಆ. 16 ಕೊನೆ ದಿನ

24 June, 2023 1:43 PM IST By: Kalmesh T
PM Fasal Bima Scheme: Agriculture department advises farmers to get crop insurance

PM Fasal Bima Scheme: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಪ್ಪದೇ ಬೆಳೆ ವಿಮೆ ಪಡೆಯುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.

ಕರ್ನಾಟಕ ಸರ್ಕಾರವು 2023 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಧಾರವಾಡ ಜಿಲ್ಲೆಯ ಎಂಟು ತಾಲ್ಲೂಕಿನ ಎಲ್ಲಾ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಆಸಕ್ತ ರೈತರು ಈ ಕುರಿತು ಬೆಳೆ ವಿಮೆ ಪಡೆಯಲು ಕೃಷಿ ಇಲಾಖೆಯ ಜಂಟಿನಿರ್ದೇಶಕ ಶಿವನಗೌಡ ಪಾಟೀಲ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಬೆಳೆಗಳು: ಹೋಬಳಿ ಮಟ್ಟದ ಬೆಳೆಗಳು: (14 ಬೆಳೆಗಳು) : ಭತ್ತ (ನೀ.), ಭತ್ತ (ಮ.ಆ.), ಮುಸುಕಿನ ಜೋಳ (ನೀ.), ಮುಸುಕಿನ ಜೋಳ (ಮ.ಆ.), ಜೋಳ(ಮ.ಆ.), ಸಾವೆ (ಮ.ಆ), ಉದ್ದು (ಮ.ಆ.), ತೊಗರಿ (ಮ.ಆ.), ಹೆಸರು (ಮ.ಆ.), ಸೋಯಾಅವರೆ (ಮ.ಆ.), ನೆಲಗಡಲೆ (ಶೇಂಗಾ) (ಮ.ಆ.), ನೆಲಗಡಲೆ (ಶೇಂಗಾ) (ನೀ.), ಹತ್ತಿ (ಮ.ಆ.), ಹತ್ತಿ (ನೀ.), ಈರುಳ್ಳಿ (ಮ.ಆ.), ಈರುಳ್ಳಿ (ನೀ.), ಆಲೂಗಡ್ಡೆ (ನೀ.), ಆಲೂಗಡ್ಡೆ (ಮ.ಆ.), ಟೊಮ್ಯಾಟೊ, ಕೆಂಪು ಮೆಣಸಿನಕಾಯಿ (ಮ.ಆ.) ಮತ್ತು ಕೆಂಪು ಮೆಣಸಿನಕಾಯಿ (ನೀ.)

ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳು:

ಧಾರವಾಡ ಮತ್ತು ಅಳ್ನಾವರ ತಾಲ್ಲೂಕು-ಭತ್ತ (ಮಳೆ ಆಶ್ರಿತ), ಕಲಘಟಗಿ ತಾಲ್ಲೂಕು-ಭತ್ತ (ಮಳೆ ಆಶ್ರಿತ), ಮುಸುಕಿನಜೋಳ (ಮಳೆ ಆಶ್ರಿತ) ಹುಬ್ಬಳ್ಳಿ, ಹುಬ್ಬಳ್ಳಿ ನಗರ ತಾಲ್ಲೂಕುಗಳಿಗೆ-ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಕುಂದಗೋಳ ತಾಲ್ಲೂಕು- ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಮತ್ತು ಹತ್ತಿ (ಮಳೆ ಆಶ್ರಿತ) ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು- ಮುಸುಕಿನಜೋಳ (ಮಳೆಆಶ್ರಿತ), ಹೆಸರು (ಮಳೆ ಆಶ್ರಿತ).

ಬೆಳೆಸಾಲ ಪಡೆಯುವ ಹಾಗೂ ಪಡೆಯದ ರೈತರಿಗೆ, ಇತರೆ ಬೆಳೆಗಳಿಗೆ ಜುಲೈ 31 ಮತ್ತು ಕೆಂಪು ಮೆಣಸಿನಕಾಯಿ (ನೀರಾವರಿ ಹಾಗೂ ಮಳೆ ಆಶ್ರಿತ) ಬೆಳೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಎಸ್‍ಬಿಐ ಜನರಲ್ ಇನ್‍ಷ್ಯೂರೆನ್ಸ್ ಕಂಪನಿ, 2ನೇ ಮಹಡಿ, ಕಲಬುರ್ಗಿ ಹಾಲ್ ಮಾರ್ಕ, ಪಿಂಟೋ ರೋಡ್, ದೇಸಾಯಿ ಕ್ರಾಸ್ ದೇಶಪಾಂಡೆ ನಗರ, ಹುಬ್ಬಳ್ಳಿ, ಸ್ಥಳಿಯ ತೋಟಗಾರಿಕೆ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ಕೃಷಿ ಇಲಾಖೆ ಸಿಬ್ಬಂದಿ ಮತ್ತು ಸ್ಥಳಿಯ ಹಣಕಾಸು ಸಂಸ್ಥೆಗಳಾದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸೇವಾ ಬ್ಯಾಂಕುಗಳ ಸಿಬ್ಬಂದಿಯವರನ್ನು ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.