News

ಕೊರೊನಾ ಸೋಂಕಿತರಿಗೆ ವರದಾನವಾಗಲಿರುವ ಪ್ಲಾಸ್ಮಾ ಚಿಕಿತ್ಸೆಯನ್ನು ಕರ್ನಾಟಕದಲ್ಲಿ ಆರಂಭ

25 April, 2020 8:22 PM IST By:

ಇಡೀ ಜಗತ್ತಿಗೆ ಆವರಿಸಿಕೊಂಡಿರುವ ಕೊರೋನಾ ಸೋಂಕನ್ನು ತಡೆಯಲು ಹಲವಾರು  ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ.  ಲಾಕ್‍ಡೌನ್ ಹೇರಿದ್ದರೂ ಸಹ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೋರೋನಾ ಸೋಂಕನ್ನು ತಡೆಯಲು ಲಸಿಕೆ ತಯಾರಿಕೆಯಲ್ಲಿ ಜಗತ್ತೇ ಪ್ರಯತ್ನಿಸುತ್ತಿದೆ.  ಕೊರೋನಾ ಸೋಂಕಿತರನ್ನು ಚಿಕಿತ್ಸೆ ನೀಡಲು ಈಗಾಗಲೇ ದೇಶದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪ್ರಾರಂಭವಾಗಿದ್ದರಿಂದ ಕರ್ನಾಟಕದಲ್ಲಿಯೂ ಪ್ರಾರಂಭಿಸಬೇಕೆಂದು ಶುಕ್ರವಾರ ರಾಜ್ಯದಲ್ಲೂ ಈ ಪ್ಲಾಸ್ಮಾ ಚಿಕಿತ್ಸೆ ಆರಂಭಕ್ಕೆ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್  ಒಪ್ಪಿಗೆ ನೀಡಿದ್ದರು.

 ಕೊರೊನಾ ಸೋಂಕಿತರಿಗೆ ವರದಾನವಾಗಲಿರುವ ಪ್ಲಾಸ್ಮಾ ಚಿಕಿತ್ಸೆಯನ್ನು ರಾಜ್ಯದಲ್ಲಿ ಶನಿವಾರ ನಡೆಸಲಾಯಿತು. ಕೊರೊನಾ ಸೋಂಕಿತರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ವೀಡಿಯೋ ಮೂಲಕ ವೀಕ್ಷಿಸಿದ ಸಚಿವರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಹೆಲ್ತ್ಕೇರ್ ಗ್ಲೋಬಲ್ (ಹೆಚ್‍ಸಿಜಿ) ಆಸ್ಪತ್ರೆಯ ಸಹಯೋಗದಲ್ಲಿ ಈ ಪ್ಲಾಸ್ಮಾ ಚಿಕಿತ್ಸೆಗೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಚಾಲನೆ ನೀಡಿ, ಈ ಚಿಕಿತ್ಸೆಯನ್ನು ವಿಡಿಯೋ ಮೂಲಕ ವೀಕ್ಷಿಸಿದರು.

ಕೊರೊನಾ ಸೋಂಕಿತರಾಗಿ ವೆಂಟಿಲೇಟನಲ್ಲಿರುವ 5 ಮಂದಿ ಕೊರೊನಾ ರೋಗಿಗಳಿಗೆ ಈ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಯಿತು.ಪ್ರಾಯೋಗಿಕ ನೆಲೆಯಲ್ಲಿ ಚಿಕಿತ್ಸೆಯನ್ನು ಆರಂಭಿಸಲಾಗಿದ್ದು, ಕೊರೊನಾ ಸೋಂಕಿತರು ಈ ಪ್ಲಾಸ್ಮಾ ಚಿಕಿತ್ಸೆಯ ಮೂಲಕ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ ಎಂಬುದು ಈಗಾಗಲೇ ದೃಢಪಟ್ಟಿದೆ.

ಕೇರಳ, ದೆಹಲಿಯಲ್ಲಿ ಈಗಾಗಲೇ ಪ್ರಾಸ್ಮಾ ಚಿಕಿತ್ಸೆ ಯಶಸ್ವಿ: ಕೇರಳ, ದೆಹಲಿಯಲ್ಲಿ ಈ ಪ್ಲಾಸ್ಮಾ ಚಿಕಿತ್ಸೆಯನ್ನು ಕೊರೊನಾ ಸೋಂಕಿತರ ಮೇಲೆ ಈಗಾಗಲೇ ನಡೆಸಲಾಗಿದ್ದು, ಸಾಕಷ್ಟು ಉತ್ತಮ ಫಲಿತಾಂಶವೂ ಈ ಚಿಕಿತ್ಸೆಯಿಂದ ಸಿಕ್ಕಿದೆ.

ರಾಜ್ಯದಲ್ಲೂ ಈ ಪ್ಲಾಸ್ಮಾ ಚಿಕಿತ್ಸೆ ಆರಂಭಕ್ಕೆ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ಒಪ್ಪಿಗೆ ನೀಡಿದ್ದರು. ಕೇಂದ್ರದಿಂದ ಅನುಮತಿ ಸಿಕ್ಕಿದ ಬೆನ್ನಲ್ಲೆ ಶನಿವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಕೊರೊನಾ ಸೋಂಕಿತರಿಗೆ ನಡೆಸಲಾಯಿತು. ಚಿಕಿತ್ಸೆಗಾಗಿ ತಮ್ಮ ರಕ್ತದ ಪ್ಲಾಸ್ಮಾ ನೀಡಲು ದಾನಿ ಸಹ ಒಪ್ಪಿದ್ದು, ಪ್ಲಾಸ್ಮಾ ಚಿಕಿತ್ಸೆ ಆರಂಭಕ್ಕೆ ಅನುಕೂಲವಾಗಿದೆ.

ಈ ಪ್ಲಾಸ್ಮಾ ಥೆರಪಿ ಚಕಿತ್ಸೆ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್, ಡಾ. ಸಿ.ಆರ್. ಜಯಂತಿ ಇದ್ದರು.

ಏನಿದು ಪ್ಲಾಸ್ಮಾ ಥೆರಪಿ: ರಿವರ್ಸ್ ಫ್ರಾನ್ಸ್‍ಕ್ಷಿಪ್ಷನ್ ಪಾಲಿಮೆರೀಸ್ ಚೈನ್ಸ್ ರಿಯಾಕ್ಷನ್್ (ಆರ್‍ಟಿಪಿಸಿಆರ್) ಟೆಸ್ಟ್‍ನಿಂದ ಪಾಸಿಟಿವ್ ಎಂದು ದೃಢಪಟ್ಟ ಕೋವಿಡ್-19 ಸೋಂಕಿತ ರೋಗಿ ನಿಗದಿತ ಅವಧಿಯ ಚಿಕಿತ್ಸೆ ನಂತರ ಗುಣಮುಖರಾದಾಗ ಸಶಕ್ತ ರಕ್ತದಾನಿಗಳಾಗುತ್ತಾರೆ.

ಇಂತಹ ಸಶಕ್ತ ರಕ್ತದಾನಿಗಳಿಂದ ರಕ್ತವನ್ನು ಪಡೆದು ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ ಅದನ್ನು ಸೋಂಕಿತ ಕೋವಿಡ-19 ರೋಗಿಗೆ ನೀಡುವುದು ಪ್ಲಾಸ್ಮಾ ಚಿಕಿತ್ಸೆಯಾಗಿದೆ.

ಕೋವಿಡ್-19 ಸೋಂಕಿತರಾಗಿ ಗುಣಮುಖರಾಗಿರುವ ರೋಗಿಯ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಿ ರೋಗನಿರೋಧಕ ಕಣಗಳು ಈ ಪ್ಲಾಸ್ಮಾದಲ್ಲಿ ಇರುತ್ತವೆ. ಇಂತಹ ರೋಗನಿರೋಧಕ ಕಣಗಳು ಬೇರೆ ರೋಗಿಯ ದೇಹಕ್ಕೆ ನೀಡಿದಾಗ ಆ ರೋಗ ನಿರೋಧಕ ಕಣಗಳು ವೈರಸ್ ವಿರುದ್ಧ ತಮ್ಮ ಹೋರಾಟವನ್ನು ಪ್ರಬಲಗೊಳಿಸುತ್ತವೆ.

ಹಾಗಾಗಿ ಪ್ಲಾಸ್ಮಾ ಥೆರಪಿ ಪಡೆದ ರೋಗಿಯ ದೇಹದಲ್ಲೂ ಪ್ರತಿರೋಧ ಕಣಗಳು ಹೆಚ್ಚಾಗಿ ಆ ರೋಗಿ ಸೋಂಕಿನಿಂದ ಶೀಘ್ರ ಚೇತರಿಸಿಕೊಳ್ಳುತ್ತಾರೆ. ಈ ಪ್ಲಾಸ್ಮಾ ಥೆರಪಿ ಹಲವೆಡೆ ಯಶಸ್ವಿಯಾಗಿರುವುದರಿಂದ ರಾಜ್ಯದಲ್ಲೂ ಪ್ರಾಯೋಗಿಕವಾಗಿ ಈ ಚಿಕಿತ್ಸೆಯನ್ನು ಆರಂಭಿಸಲಾಗಿದೆ.