News

ಮೂರು ಸಾವಿರ ಕೃಷಿ ಡಿಪ್ಲೋಮಾ ಪದವೀಧರರ ನೇಮಕ- ಬಿ.ಸಿ. ಪಾಟೀಲ್

20 February, 2021 9:14 AM IST By:
B.C Patil

ಕೃಷಿ ಇಲಾಖೆಯಲ್ಲಿ ಸೇವೆಗಾಗಿ ರಾಜ್ಯದಲ್ಲಿ 3 ಸಾವಿರ ಕೃಷಿ ಡಿಪ್ಲೋಮಾ ಪದವೀಧರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಅವರು ಬೀದರ್ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೃಷಿ ಡಿಪ್ಲೊಮಾ ಪಡೆದ 3 ಸಾವಿರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

 10 ತಿಂಗಳ ಅವಧಿಗೆ 2 ಗ್ರಾಮ ಪಂಚಾಯಿತಿಗೆ ಒಬ್ಬರನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ. ಇವರು 3 ತಿಂಗಳು ಬೆಳೆ ಸಮೀಕ್ಷೆ ಹಾಗೂ ಉಳಿದ 7 ತಿಂಗಳು ಕೃಷಿ ಇಲಾಖೆಯ ವಿವಿಧ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ. ‘3,266 ರೈತ ಮಿತ್ರ ಹುದ್ದೆ ಭರ್ತಿ, ಕೃಷಿ ವಿಶ್ವವಿದ್ಯಾಲಯಗಳ ವಿವಿಧ ಪದವಿಗಳಲ್ಲಿ ರೈತರ ಮಕ್ಕಳಿಗೆ ಸದ್ಯ ಇರುವ ಶೇ 40 ರಷ್ಟು ಮೀಸಲಾತಿಯನ್ನು ಶೇ 50ಕ್ಕೆ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು

ಬಜೆಟ್ನಲ್ಲಿ ಕೃಷಿಗೆ ಉತ್ತೇಜನಕ್ಕಾಗಿ ಹೆಚ್ಚಿನ ಒತ್ತು ನೀಡಲು ಮುಖ್ಯಮಂತ್ರಿಗಳಇಗೆ ಮನವಿ ಮಾಡಲಾಗಿದೆ. ಕೃಷಿ ಇಲಾಖೆಯ ಚಾಲ್ತಿಯಲ್ಲಿರುವ ಯೋಜನೆಗಳು ಮುಂದುವರೆಯಲಿದ್ದು, ಕೆಲವೊಂದು ಬದಲಾವಣೆ ತರಲು ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷಿ ಡಿಪ್ಲೊಮಾ ಅಭ್ಯರ್ಥಿಗಳಿಗೆ ತಾಂತ್ರಿಕ ಜ್ಞಾನ ಇರುವ ಕಾರಣ ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಯಲಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಲಾಭ ಹೆಚ್ಚಿನ ರೈತರಿಗೆ ಮುಟ್ಟಿಸಲು ಅನುಕೂಲವೂ ಆಗಲಿದೆ’ ಎಂದರು.

ರೈತರಿಗೆ ಈಗಿನ 25 ಎಚ್.ಪಿ ಸಬ್ಸಿಡಿಯನ್ನು 40 ಎಚ್.ಪಿಗೆ ಹೆಚ್ಚಿಸಲಾಗುವುದು. ರೈತರು ಆಕಸ್ಮಿಕ ಮರಣ ಹೊಂದಿದಾಗಲೂ  5 ಲಕ್ಷ ಪರಿಹಾರ ಒದಗಿಸುವ ಹಾಗೂ ಬಣವೆಗೆ ಬೆಂಕಿ ತಗುಲಿ ಹಾನಿ ಸಂಭವಿಸಿದಾಗ ಇನ್ನೂ ಹೆಚ್ಚಿನ ಪರಿಹಾರ ಕಲ್ಪಿಸುವ ಪ್ರಸ್ತಾವಗಳು ಸರ್ಕಾರದ ಮುಂದಿವೆ’ ಎಂದು ತಿಳಿಸಿದರು.