Provident Fund : ಸೇವಾ ನ್ಯೂನತೆ ಆರೋಪದಡಿ ಪ್ರೊವಿಡೆಂಟ್ ಫಂಡ್ ಇಲಾಖೆಗೆ ಬರೋಬ್ಬರಿ 6 ಲಕ್ಚ 42 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಧಾರವಾಡ : ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯ 6 ಜನ ನಿವೃತ್ತ ಪಿಂಚಣಿದಾರರು ತಮ್ಮ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರು.
ಈ ದೂರುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ತಮಗೆ ಸಂಬಂಧಿಸಿದ ಪಿಂಚಣಿ ವ್ಯಾಜ್ಯವನ್ನು ಪಿ.ಎಫ್. ಇಲಾಖೆಯಿಂದ
ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ್ ಅದಾಲತ್‌ನಲ್ಲಿ ದೂರುದಾರ ಭಾಗವಹಿಸಿ ಪರಿಹಾರ ಕಂಡುಕೊಳ್ಳದೇ ಅನಗತ್ಯವಾಗಿ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದು ತಪು ಅಂತಾ ಹೇಳಿ ಅವುಗಳನ್ನು ವಜಾಗೊಳಿಸಬೇಕು ಎಂದು ಪಿ.ಎಫ್. ಇಲಾಖೆಯವರು ಆಕ್ಷೇಪಿಸಿದ್ದರು.
ಎಲ್ಲ ದೂರುದಾರರ ಪಿಂಚಣಿ ನಿಗದಿಪಡಿಸುವಾಗ ಪಿ.ಎಫ್.ಇಲಾಖೆ ಸರಿಯಾಗಿ ಲೆಕ್ಕ ಹಾಕದೇ ತಪ್ಪೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ಪಿ.ಎಫ್.ಇಲಾಖೆಯವರ ವಾದವನ್ನು ತಳ್ಳಿಹಾಕಿದೆ.
ದೂರುದಾರರಿಗೆ ಅವರ ಪಿಂಚಣಿ ನಿಗದಿಪಡಿಸಿದ ದಿನಾಂಕದಿಂದ ಆಯೋಗ ಆದೇಶ ಹೊರಡಿಸಿದ ದಿನಾಂಕದವರೆಗೆ 6 ಜನ ದೂರುದಾರರಿಗೆ ಒಟ್ಟು ರೂ.6 ಲಕ್ಷ 42 ಸಾವಿರ 68 ರೂಪಾಯಿ ಬಾಕಿ ಹಣ ಮತ್ತು ಅದರ ಮೇಲೆ ಶೇ.10 ರಂತೆ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ಆದೇಶಿಸಿದೆ.
ಜೊತೆಗೆ ಪ್ರತಿಯೊಬ್ಬ ದೂರುದಾರರಿಗೆ ಮಾನಸಿಕ ತೊಂದರೆಗಾಗಿ ತಲಾ ರೂ.20 ಸಾವಿರ ಪರಿಹಾರ ಹಾಗೂ ತಲಾ ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡಲು ಆಯೋಗ ಆದೇಶಿಸಿದೆ.
ಸೇವಾ ನ್ಯೂನತೆ ಆರೋಪದಡಿ ಪ್ರೊವಿಡೆಂಟ್ ಫಂಡ್ ಇಲಾಖೆಗೆ ಬರೋಬ್ಬರಿ 6 ಲಕ್ಚ 42 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
Scholarship : ಸೈನಿಕ ಕಲ್ಯಾಣ ಇಲಾಖೆಯಿಂದ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ