ನಾವು ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟ್ಮ್ಯಾನ್ ಸೆಂಚುರಿ ಬಾರಿಸುವುದನ್ನು ನೋಡಿದ್ದೇವೆ, ಆದರೆ ಇದೀಗ ನಾವು-ನೀವು ಬಳಸುವಂತ ಇಂಧನ ತೈಲ ಸೆಂಚುರಿ ಬಾರಿಸಲು ಸನಿಹದಲ್ಲಿದೆ, ರಾಜಸ್ಥಾನದಲ್ಲಿ rs.99 ಪ್ರತಿ ಲೀಟರಿಗೆ ಮಾರಾಟವಾಗುತ್ತಿದ್ದು ಸೆಂಚುರಿ ಬಾರಿಸಲು ಇನ್ನೇನು ಕೇವಲ ಒಂದೆ ರೂಪಾಯಿ ಬಾಕಿ ಇದೆ.
ಕಳೆದ ಹಲವಾರು ದಿನಗಳಿಂದ ನಾನಾ ಕಾರಣಗಳಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಲೇ ಇದ್ದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ, ನಮ್ಮ ದಿನನಿತ್ಯದ ಜೀವನದ ಕೆಲಸಗಳಿಗಾಗಿ ವಾಹನಗಳು ಅತ್ಯವಶ್ಯಕ, ಅದೇ ರೀತಿ ವಾಹನಗಳಿಗೆ ಇಂಧನವು ಅತ್ಯವಶ್ಯಕ, ಇದೀಗ ಪೆಟ್ರೋಲ್ ಬೆಲೆ ನೂರು ರುಪಾಯಿ ಸನಿಹಕ್ಕೆ ಬಂದಿದ್ದು ಇನ್ನೇನು ಕೇವಲ ಒಂದು ರೂಪಾಯಿ ದಾಟಿದರೆ ರಾಜಸ್ಥಾನದಲ್ಲಿ ಸೆಂಚುರಿ ಬಾರಿಸುವ ತವಕದಲ್ಲಿದೆ.
ಇಂಧನದ ಬೆಲೆ ನಿನ್ನೆ ಭಾನುವಾರ ಸತತ ಆರು ದಿನಗಳ ಕಾಲ ಏರಿಕೆಯನ್ನು ಕಂಡಿದ್ದು ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 32 ಪೈಸೆ ಏರಿಕೆಯನ್ನು ಕಂಡಿದೆ. ಭಾನುವಾರ ಇನ್ನಿತರ ನಗರದ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ನೋಡುತ್ತಾ ಹೋದರೆ ನಮ್ಮ ದೇಶದ ರಾಜಧಾನಿ ಆಗಿರುವಂತಹ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 88.73 ಹಾಗೂ ಡೀಸೆಲ್ ಬೆಲೆ 79.06 ರಷ್ಟಿದೆ.
ಆದರೆ ರಾಜಸ್ಥಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ rs.99 ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ 91 ರೂಪಾಯಿ ಇದೆ. ಇನ್ನು ಆರ್ಥಿಕ ರಾಜಧಾನಿ ಎಂದೇ ಖ್ಯಾತಿಯಾಗಿರುವ ಮುಂಬೈ ನಗರದಲ್ಲಿ ನಾವು ಪೆಟ್ರೋಲ್ ಡೀಸೆಲ್ ಬೆಲೆಯನ್ನು ನೋಡಿದಾಗ ಪ್ರತಿ ಲೀಟರ್ ಪೆಟ್ರೋಲ್ಗೆ 95.21 ರೂಪಾಯಿ ಹಾಗೂ ಡೀಸೆಲ್ 86.04 ರಷ್ಟಿದೆ.