ಸತತವಾಗಿ ಒಂದೇ ವಾರದಲ್ಲಿ 3 ಬಾರಿ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆ. ಹಾಗಿದ್ರೆ ಯಾವ ಯಾವ ನಗರಗಳಲ್ಲಿ ಇಂಧನ ದರ ಎಷ್ಟಿದೆ ಎಂಬುದನ್ನ ನೋಡೊಣ ಬನ್ನಿ.
ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ Petrol-Diesel ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿರ್ಧರಿಸಲಾಗುತ್ತದೆ.
ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಂಗಳವಾರ (ಮಾರ್ಚ್ 22) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ (Diesel Price) ಏರಿಕೆಯಾಗಿತ್ತು. ಅದಾದ ನಂತರ ಬುಧವಾರ ಮಾರ್ಚ್ 23ರಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 84 ಪೈಸೆ ಏರಿಕೆ ಮಾಡಲಾಗಿತ್ತು. ಸತತ ಎರಡನೇ ದಿನವೂ 80 ಪೈಸೆ ಹೆಚ್ಚಳ ಆಗಿದ್ದು ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಬಿಸಿ ಮುಟ್ಟಿಸಿತ್ತು. ಇದೀಗ ಮಾರ್ಚ್ 25 ಶುಕ್ರವಾರವಾದ ಇಂದು ಮತ್ತೆ ಇಂಧನ ದರದಲ್ಲಿ ಏರಿಕೆಯಾಗಿದೆ.
ಇದನ್ನು ಓದಿರಿ:
Breaking News ಮತ್ತೊಂದು Bank ಮುಚ್ಚಲು RBI ನಿರ್ಧಾರ!
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಈಗ ಭಾರತದಲ್ಲೂ ತೈಲ ಬೆಲೆ ಏರಿಕೆ ಆರಂಭವಾಗಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 80 ಪೈಸೆ ಹೆಚ್ಚಳದ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹ 97.81 ರೂಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ₹ 89.07 ದಾಖಲಾಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 85 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ.ಪೆಟ್ರೋಲ್ ದರ ₹ 112.51, ಡೀಸೆಲ್ ₹ 96.70 ದಾಖಲಾಗಿದೆ. ಚೆನ್ನೈನಲ್ಲಿ ಇಂಧನ ದರದಲ್ಲಿ 76 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀಟರ್ ಪೆಟ್ರೋಲ್ ಬೆಲೆ 103.67 ರೂಗೆ ತಲುಪಿದ್ದು, ಡೀಸೆಲ್ ಬೆಲೆ 93.71 ರೂಗೆ ಏರಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 84 ಪೈಸೆ ಏರಿಕೆಯೊಂದಿಗೆ 106.34 ರೂ ದಆಖಲಾಗಿದೆ. ಹಾಗೆಯೇ ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳವಾಗಿದ್ದು 91.42 ರೂ ದಾಖಲಾಗಿದೆ.
ಬೆಂಗಳೂರಿನಲ್ಲಿ 102.26 ರೂ ಇದ್ದ ಪೆಟ್ರೋಲ್ ದರ 103.11 ರೂಗೆ ಏರಿಕೆಯಾಗಿದೆ. ಪ್ರತಿ ಲೀಟರ್ಗೆ 86.58 ರೂ ಇದ್ದ ಡೀಸೆಲ್ ದರ ₹ 87.37 ಗೆ ಏರಿಕೆಯಾಗಿದೆ. ಹೈದರಾಬಾದ್ನಲ್ಲೂ ದರ ಏರಿಕೆಯಾಗಿದ್ದು, ಲೀಟರ್ಗೆ ಪೆಟ್ರೋಲ್ ಬೆಲೆ 110.91 ರೂ ಹಾಗೂ ಡೀಸೆಲ್ಗೆ 97.24 ರೂ ದಾಖಲಾಗಿದೆ. ಲಕ್ನೋದಲ್ಲಿ ಪೆಟ್ರೋಲ್ ದರ 97.67 ರೂ ಹಾಗೂ ಡೀಸೆಲ್ ದರ 89.22 ರೂಗೆ ಏರಿಕೆಯಾಗಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ಇನ್ನಷ್ಟು ಓದಿರಿ:
EPFO Latest News! ನಿಮಗೂ ಕೂಡ ಸಿಗಬಹುದು Rs. 7 ಲಕ್ಷದವರೆಗೆ ಲಾಭ!
Bharat Petroleum corporation Ltd (BPCL), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಮತ್ತಷ್ಟು ಓದಿರಿ: