News

ಶತಕ ದಾಟಿದ ಪ್ರೀಮಿಯಂ ಪೆಟ್ರೋಲ್

27 January, 2021 1:22 PM IST By: KJ Staff

ಇಂದಿನ ಜೀವನದಲ್ಲಿ ವಾಹನಗಳು ನಮಗೆ ಅತ್ಯವಶ್ಯಕ ಅದೇ ರೀತಿ ವಾಹನಗಳು ಚಲಿಸಲಿಕೆ ಬೇಕಾದ ಇಂಧನವು ಕೂಡ ಅತ್ಯವಶ್ಯಕ. ಆದರೆ ಇಂದು ಇಂಧನದ ಬೆಲೆಯೂ ಶತಕವನ್ನು ದಾಟಿದೆ.

ಜನವರಿ ಒಂದೇ ತಿಂಗಳಲ್ಲಿ ಇಲ್ಲಿಯವರೆಗೆ ಪೆಟ್ರೋಲ್ 2.34 ರೂಪಾಯಿಗಳಷ್ಟು ಏರಿಕೆಯನ್ನು ಕಂಡಿದೆ.ಮಂಗಳವಾರ ದಿನದಂದು ಪೆಟ್ರೋಲ್ ಬೆಲೆ ಮತ್ತೆ 35 ಪೈಸೆ ಏರಿಕೆಯಾಗಿದ್ದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 86.05 ರೂಪಾಯಿಗಳನ್ನು ತಲುಪಿ ಸಾರ್ವಕಾಲಿಕ ದರವನ್ನು ಮುಟ್ಟಿದೆ.

 

 ಇನ್ನು ನಮ್ಮ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರೀಮಿಯಂ ಪೆಟ್ರೋಲ್ ಶತಕವನ್ನು ಬಾರಿಸಿದೆ.ಉದಾಹರಣೆ ಎಂದರೆ ನಮ್ಮ ದೇಶದ ಮರಭೂಮಿ ಎಂದೇ ಖ್ಯಾತಿಯಾಗಿರುವ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪ್ರತಿ ಲೀಟರ್ ಗೆ 101.54 ರೂಪಾಯಿಗಳನ್ನು ಮುಟ್ಟಿದೆ.